ಕಂಪ್ಲಿ09:. ತಾಲೂಕು ಸಮೀಪದ ಎಂ.ಸುಗೂರು ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯೋಜನೆಯಡಿ 2.50 ಕೋಟಿ ವೆಚ್ಚದ ಸಕರ್ಾರಿ ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾಥರ್ಿನಿಲಯ ಕಟ್ಟಡ ಕಾಮಗಾರಿಗೆ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರು ಅಡಿಗಲ್ಲು ಪೂಜೆ ಸಲ್ಲಿಸಿದರು.
ನಂತರ ಅವರು ಅಡಿಗಲ್ಲು ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ದೇವರಾಜ ಅರಸು ಮಹಾನ್ ಪುರುಷರಾಗಿದ್ದಾರೆ. ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗದವರ ಬಗ್ಗೆ ಹೆಚ್ಚು ಕಾಳಜಿವಹಿಸಿದ ದೇವರಾಜು ಅರಸು ನಿಲಯಗಳ ಮೂಲಕ ಬಡ ಮಕ್ಕಳಿಗೆ ಶಿಕ್ಷಣ ಕೊಡಿಸಲು ಶ್ರಮಿಸಿದರು. ಸಿರುಗುಪ್ಪ ತಾಲೂಕಿನಲ್ಲಿ ಇನ್ನೂ ದೇವರಾಜ ಅರಸು ವಸತಿ ಶಾಲೆಗಳ ಅವಶ್ಯಕತೆಯಿದೆ. ತಾಲೂಕಿನಲ್ಲಿ ಏಕಲವ್ಯ ವಸತಿ ಶಾಲೆ ನಿಮರ್ಿಸಲು ಹೆಚ್ಚಿನ ಆಧ್ಯತೆ ನೀಡಲಾಗುವುದು. ಈ ಶಾಲೆಗೆ 20 ಎಕರೆ ನಿವೇಶ ಹಾಗೂ 20 ಕೋಟಿ ಅನುದಾನಬೇಕಾಗಿದೆ. ತಾಲೂಕನ್ನು ಶಿಕ್ಷಣ ಸಮೃದ್ಧವನ್ನಾಗಿಸಬೇಕು. ಎಂ.ಸುಗೂರು ಭಾಗದಲ್ಲಿ ಕುಡಿಯುವ ನೀರಿಗಾಗಿ ಕೆರೆ ನಿಮರ್ಾಣ ಮಾಡುವ ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ಲಕ್ಷೀ ನಾಗೇಶಪ್ಪ, ತಾಪಂ ಸದಸ್ಯರಾದ ಕರಿಯಪ್ಪ, ದ್ಯಾವಮ್ಮ, ಗ್ರಾಪಂ ಅಧ್ಯಕ್ಷೆ ಮೂಕಮ್ಮ, ಸದಸ್ಯರಾದ ಎಂ.ಭಾಸ್ಕರ್, ಮಲ್ಲಿಕಾಜರ್ುನ, ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ನಾಗರಾಜಗೌಡ್ರು, ತಾಪಂ ಸದಸ್ಯೆ ರತ್ನಮ್ಮ ಅಡಿವೆಯ್ಯಸ್ವಾಮಿ, ಭೂದಾನಿ ಮುರಳಿ ಕೃಷ್ಣ, ಬಿಸಿಎಂ ವಿಸ್ತವಣ ಅಧಿಕಾರಿ ಶಾಮಪ್ಪ, ಗುತ್ತಿಗೆದಾರ ಮಧು, ಮುಖಂಡರಾದ ನಾಗೇಶಪ್ಪ, ಮಲ್ಲಿಕಾಜರ್ುನ, ಲಕ್ಷ್ಮೀಪತಿ ಸೇರಿದಂತೆ ಅನೇಕರಿದ್ದರು.