ಬಾಳೇಕುಂದ್ರಿ ಮಹಾವಿದ್ಯಾಲಯದಲ್ಲಿ 2 ದಿನಗಳ ಇಂಟರ್ನಲ್ ಹ್ಯಾಕಧಾನ್ ಸ್ಪರ್ದೇ

ಲೋಕದರ್ಶನ ವರದಿ

ಬೆಳಗಾವಿ 21: ಎಸ್. ಜಿ. ಬಾಳೇಕುಂದ್ರಿ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ಇಂಟರ್ನಲ್ ಹ್ಯಾಕಧಾನ ಸ್ಪಧರ್ೆಯನ್ನು ದಿನಾಂಕ 20-01-2020 ಮತ್ತು 21-01-2020 ರಂದು ಆಯೋಜಿಸಲಾಗಿತ್ತು. ವಿದ್ಯಾಥರ್ಿಗಳ ತಂತ್ರಜ್ಞಾನದ ಪ್ರಾಯೋಗಿಕ ಪಕ್ವತೆಯನ್ನು ಹೆಚ್ಚಿಸಲು, ಮತ್ತು ಅವರ ಹೊಸ ವೈವಿದ್ಯತೆಯ ವಿಚಾರ ಮತ್ತು ಕೌಶಲ್ಯಗಳನ್ನು ಉಪಯೋಗಿಸಿ ಪ್ರೊಜೇಕ್ಟಗಳನ್ನು ನಿಮರ್ಿಸಲು, ವೇದಿಕೆಯನ್ನು ಕೊಚ ಮಾಡುವದೆ ಈ ಒಂದು ಹ್ಯಾಕಧಾನ ಸ್ಪರ್ಧೆಯ ಉದ್ದೇಶವಾಗಿದೆ. ಈ ಒಂದು ಸ್ಪರ್ಧೆಯಲ್ಲಿ, ತಲಾ ಆರು ವಿದ್ಯಾರ್ಥಿಗಳ ಒಟ್ಟು 13 ಟೀಮಗಳನ್ನು ಆರಿಸಲಾಗಿತ್ತು, ಎಲ್ಲ ಟೀಮಗಳ, ಪ್ರೊಜೆಕ್ಟಗಳು ಹಂತ ಹಂತವಾಗಿ ಏಕ್ಸಪರ್ಟ  ಕಮಿಟಿ (ಎಣಡಿಥಿ ಕಮಿಟಿ)ಯಿಂದ ವಿಮರ್ಶೆಗೊಳಪಡುತ್ತವೆ. ಇದೇ ಸಂಧರ್ಬದಲ್ಲಿ ಕಮಿಟಿ ಸದಸ್ಯರು ಕೊಟ್ಟಂತಹ ಸಲಹೆಗಳನ್ನು ವಿದ್ಯಾರ್ಥಿಗಳು ತಮ್ಮ ಪ್ರೊಜೇಕ್ಟನಲ್ಲಿ ಅಳವಡಿಸಬೇಕಾಗುತ್ತದೆ. ಈ ಹ್ಯಾಕಧಾನ್ ಸ್ಪದರ್ೆ ನಿರಂತರವಾಗಿ 36 ಗಂಟೆ (ದಿನ-ರಾತ್ರಿ) ನಡೆಯುತ್ತದೆ.

ಈ ಕಾರ್ಯಕ್ರಮವನ್ನು ಬೆಳಗಾವಿ ರುದ್ರಾಕ್ಷಿಮಠದ ಶ್ರೀ ಡಾ|| ಅಲ್ಲಮಪ್ರಬು ಸ್ವಾಮಿಜಿಯವರು ಉದ್ಘಾಟಿಸಿದರು. ಈ ಸ್ಪರ್ಧೆಯ ತಜ್ಞ ಮೌಲ್ಯಮಾಪಕರಾದ ಡಾ|| ಉದಯ ವಾಲಿ, ಅಇಔ, ಸಿ-ಕ್ವಾಡ ಕಂಪ್ಯೂಟರ್ಸ್ ಮತ್ತು ಅಡ್ಚಂಕ್ಬ ಪ್ರೊಪೆಸರ್ ಇ&ಸಿ, ಎಸ್.ಜಿ.ಬಿ.ಆಯ್.ಟಿ ಯವರು ತಮ್ಮ ಭಾಷಣದಲ್ಲಿ ಹ್ಯಾಕಧಾನ ಸ್ಪರ್ಧೆಯ ನಿಯಮಗಳನ್ನು ತಿಳಿಸಿದರು. ಯಾವುದೇ ಒಂದು ಪ್ರೊಜೆಕ್ಟಗೆ ಮಾಹಿತಿ ಸಂಗ್ರಹ ಅತ್ಯಂತ ಮಹತ್ವದ ಘಟ್ಟವಾಗಿದ್ದು, ಅದನ್ನು ಸಂಗ್ರಹಿಸುವ ಕಲೆಯ ಬಗ್ಗೆ ವಿವರಿಸಿದರು, ಅಲ್ಲದೆ ಸ್ಥಳಿಯವಾಗಿ ಸಿಗುವ ಕಾಂಪ್ಯೆನೆಟ್ಸಿ(ವಸ್ತುಗಳು)ಗಳನ್ನು ಪ್ರೊಜೆಕ್ಟಗಳಿಗೆ ಉಪಯೋಗಿಸಿದರೆ ಮೆಕ್-ಇನ್ ಇಂಡಿಯಾ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದು ಹೇಳಿದರು. ಇನೊರ್ವ ತಜ್ಞ ಮೌಲ್ಯಮಾಪಕ ಮಿ|| ಬಾಬು, ಸಾಪ್ಟವೇರ್ ಡೇವಲಪರ್ ಮತ್ತು ಸಿಸ್ಟಂ ಅನಾಲಿಸ್ಟ, ನ್ಯಾಶನಲ್ ಇನ್ಸಿಟ್ಯೂಟ್ ಆಫ್ ಹೈಡ್ರಾಲಾಜಿ, ಬೆಳಗಾವಿ ಈ ಸಂಧರ್ಭದಲ್ಲಿ ಮಾತನಾಡಿ ವಿಧ್ಯಾಥರ್ಿಗಳು ಸೋಲುಗಳಿಂದ ಪಾಠ ಕಲಿತು ಆ ಸೋಲನ್ನೆ ಯಶಸ್ಸಿನ ಮೆಟ್ಟಿಲುಗಳಾಗಿ ಪರಿವರ್ತಿಸಬೇಕೆಂದರು. ಪ್ರಾಂಶುಪಾಲ ಡಾ|| ಸಿದ್ರಾಮಪ್ಪಾ ಇಟ್ಟಿಯವರು. ಈ ಹ್ಯಾಕಧಾನ ಸ್ಪರ್ಧೆಯ ಮಹತ್ವ ಮತ್ತು ಈ ಸ್ಪರ್ಧೆ ಹೇಗೆ ವಿಧ್ಯಾರ್ಥಿಗಳಿಗೆ ರಾಷ್ರ್ಟಿಯ ಮಟ್ಟದ ಅನಭವ ಮತ್ತು ತಂತ್ರಜ್ಞಾನದ ಕುರಿತು ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಮಹಾವಿದ್ಯಾಲಯದ ಮೂಲಸೌಕರ್ಯಗಳನ್ನು ಸದುಪಯೋಗಪಡಿಸಿಕೊಂಡು ವಿದ್ಯಾಲಯಕ್ಕೆ ಕೀತರ್ಿ ತರಬೇಕೆಂದು ಹೇಳಿದರು.

ಪೂಜ್ಯ ಡಾ|| ಅಲ್ಲಮಪ್ರಭು ಸ್ವಾಮಿಜಿಯವರು ತಮ್ಮ ಆಶಿರ್ವಚನದಲ್ಲಿ, ವಿದ್ಯಾರ್ಥಿಗಳು ತಮ್ಮ ತಾಂತ್ರಿಕ ಜ್ಞಾನವನ್ನು ಸಮಾಜದ ಅಭಿವೃದ್ಧಿಗಾಗಿ ವಿನಿಯೋಗಿಸಿ, ಭಾರತವನ್ನು ಒಂದು ಸಶಕ್ತ ರಾಷ್ಟ್ರವನ್ನಾಗಿ ಮಾಡಬೇಕೆಂದು ಕರೆ ನೀಡಿದರು, ಅಲ್ಲದೆ ಅಭಿವೃದ್ಧಿಪಡಿಸಲಾಗುತ್ತಿರುವ ತಂತ್ರಜ್ಞಾನ ಸಮಾಜ ಮೂಖಿಯಾಗಿರಬೇಕೆಂದು ಒತ್ತಾಯಿಸಿದರು. ಕಾರ್ಯಕ್ರಮದ ಸಂಘಟಕರಾದ ಡಾ|| ಸುನಿಲ ಹರಕನ್ನನವರ ಅವರು ಹ್ಯಾಕಧಾನ್ ಸ್ಪರ್ಧೆಯ ರಚನೆ ಮತ್ತು ನಿಯಮಗಳನ್ನು ತಿಳಿಸಿದರು. ಡಾ|| ಶಿಲ್ಪಾ ಮಾಯನ್ನನವರ ವಂದನಾರ್ಪನೆಗಳನ್ನು ಸಲ್ಲಿಸಿದರು. ಎಲ್ಲಾ ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.