ರಸ್ತೆ ಅಭಿವೃದ್ಧಿಗೆ 2.40 ಕೋಟಿ

ಕಾಗವಾಡ:  ಕಳೇದ ಅನೇಕ ವರ್ಷಗಳಿಂದ ಬೇಡಿಕೆಗಳಾಗಿ ಉಳಿದಿರುವ ಉಗಾರ ಖುರ್ದ-ಉಗಾರ ಬುದ್ರುಕ ಗ್ರಾಮಗಳಲ್ಲಿಯ ರಸ್ತೆ ಅಭಿವೃದ್ಧಿಗಾಗಿ 2.40 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಅನರ್ಹ ಶಾಸಕ ಶ್ರೀಮಂತ ಪಾಟೀಲ ಪೂಜೆ ಸಲ್ಲಿಸಿ, ಚಾಲನೆ ನೀಡಿದರು.ರವಿವಾರ ರಂದು ಉಗಾರ ಖುರ್ದದಲ್ಲಿ ಶಾಸಕರ ವಿಶೇಷ ಅನುದಾನ ಬಳಿಸಿ ಕಾಮಗಾರಿಗೆ ಚಾಲನೆ ನೀಡಿದರು.

ಇದರಲ್ಲಿ ಉಗಾರ ಖುರ್ದ-ಉಗಾರ ಬುದ್ರುಕ ರಾಜ್ಯ ಹೆದ್ದಾರಿ ಮಾರ್ಗದ 40 ಲಕ್ಷ, ಉಗಾರ ಪಟ್ಟಣಕ್ಕೆ ಸಂಪಕರ್ಿಸುವ ಕಾಟಕರ ತೋಟ, ಥೋರುಶೆ ತೋಟ, ಶಿಂದೆ ತೋಟ, ಮಿರಗೆ ತೋಟಗಳ ರಸ್ತೆಗಳು ಪೂಜೆ ಸಲ್ಲಿಸಿ, ಚಾಲನೆ ನೀಡಿದರು. 

ಗುತ್ತಿಗೆದಾರರಾದ ಲಾಲಸಾಬ ಗಟ್ನಟ್ಟಿ 1.4 ಕೋಟಿ, ಎಂ.ಆರ್.ಹವಲೆ 55 ಲಕ್ಷ, ಸಂದೀಪ ಖರಾಡೆ 35 ಲಕ್ಷ ಹೀಗೆ 2.40 ಕೋಟಿ ರೂ. ವೆಚ್ಚುಗಳ ಕಾಮಗಾರಿಗಳಳಿಗೆ ಚಾಲನೆ ನೀಡಿದರು.ಸಮಾರಂಭದಲ್ಲಿ ಪಟ್ಟಣದ ಹಿರಿಯರು, ಮಾಜಿ ಎಪಿಎಂಸಿ ಸದಸ್ಯ ಸುರೇಶ ಥೋರುಶೆ, ಪುರಸಭೆ ಸದಸ್ಯ ಪ್ರಫೂಲ್ಲ್ ಥೋರುಶೆ, ನಂದಿನಿ ಫರಾಕಟ್ಟೆ, ಎಂ.ಆರ್.ಥಬಾಜ್, ಅಲ್ತಾಫ್ ನದಾಫ್, ಶಶೀಕಾಂತ ಕಾಂಬಳೆ, ಎಸ್.ಆರ್.ನಾಯಿಕ, ಸುಭಾಷ ಕುರಾಡೆ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.