1989ರ ಅಸ್ಪೃಶತಾ ನಿರ್ಮೂಲನಾ ಜಾಗೃತಿ ಕಾರ್ಯಕ್ರಮಗಳು

1989 Untouchability Abolition Awareness Programmes

ಸವಣೂರ  26: ಸಮಾಜ ಕಲ್ಯಾಣ ಇಲಾಖೆ ಸವಣೂರ ಹಾಗೂ ಆಶಾಕಿರಣ ರೂರಲ್ ಡೆವಲಪ್‌ಮೆಂಟ್ ಸೊಸೈಟಿ (ರಿ) ಚಿಕ್ಕಮುಗದೂರು ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಕಳಸೂರು,ಡಂಬರಮತ್ತೂರು ಮತ್ತು ನದೀನೀಲಗಿ ಗ್ರಾಮಗಳಲ್ಲಿ ನಾಗರೀಕ ಹಕ್ಕು ಸಂರಕ್ಷಣಾ ಅಧಿನಿಯಮ 1955,ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ(ದೌರ್ಜನ್ಯ) ಅಧಿನಿಯಮ 1989 ರಡಿ ಅಸ್ಪೃಶತಾ ನಿರ್ಮೂಲನಾ ಜಾಗೃತಿ ಕಾರ್ಯಕ್ರಮಗಳು ಜರುಗಿದವು.  

ಆಶಾಕಿರಣ ಸಂಸ್ಥೆಯ ಅಧ್ಯಕ್ಷರಾದ ಮುತ್ತುರಾಜ ಎಮ್‌.ಮಾದರ ಮಾತನಾಡಿ ನಾವು ಸ್ವತಂತ್ರರಾಗಿ, ಸಂವಿಧಾನ ಜಾರಿಗೆ ಬಂದು 75 ವರ್ಷಗಳು ಕಳೆದರೂ ಇನ್ನೂ ಅಸ್ಪೃಶತಾ ನಿವಾರಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ.ಸಮಾಜದಲ್ಲಿ ಮೇಲು-ಕೀಳು,ಶ್ರೀಮಂತ-ಬಡವ, ಬಲಿಷ್ಠರು-ದುರ್ಬಲರು ಎಂಬ ಜಾತಿತಾರತಮ್ಯ,ಶೋಷಣೆಯನ್ನು ತಡೆಯಲು ಸಾಧ್ಯವಾಗಬೇಕು.ಸಮಾಜದಲ್ಲಿ ಎಲ್ಲರೂ ಸಮಾನತೆಯಿಂದ ಬದುಕಬೇಕು ಸರ್ವರಿಗೂ ಸಮಬಾಳು ಸಮಪಾಲು ಸಿಗುವಂತಾಗಬೇಕು ಎಂದರು. 

ನ್ಯಾಯಾವಾದಿಗಳಾದ ಕೆ.ಎಸ್‌.ನೀರಲಗಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿಯಂತ್ರಣ ಕಾಯ್ದೆ 1979 ಮತ್ತು ವಿವಿಧ ಕಾನೂನುಗಳ ಬಗ್ಗೆ ಉಪನ್ಯಾಸ ನೀಡಿದರು. 

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರರಾದ ಜೀವನ ಪಂಮಾರ,ಗ್ರಾಪಂ ಸದಸ್ಯರಾದ ಬಸವಂತರಾಯ ಹಾಲಗಿ,ಕೆ.ಬಿ ಕಾಂಬಳೆ,ಶಶಿಧರ ಚಿರಂತಿಮಠ,ಗ್ರಾಪಂ ಕಾರ್ಯದರ್ಶಿಗಳಾದ ಹನಮಂತಪ್ಪ ಸಂಗೂರ,ಮಾಹದೇವಪ್ಪ ಆಲದಕಟ್ಟಿ,ಸರೋಜ ಕುಂಬಾರ,ಮುಖಂಡರು,ಹಿರಿಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಶ್ರೀ ಹರಿಕೃಷ್ಣ  ಕಲಾತಂಡದವರಿಂದ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು.