ಅರ್ಚಕರಿಗೆ ಪ್ರತಿ ತಿಂಗಳಿಗೆ 18000 ಗೌರವ ವೇತನ

18000 per month honorarium for priests

ನವದೆಹಲಿ 30: ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವು ಅಧಿಕಾರಕ್ಕೆ ಮರಳಿದರೆ ದೇವಾಲಯ ಮತ್ತು ಗುರುದ್ವಾರದ ಅರ್ಚಕರಿಗೆ ತಿಂಗಳಿಗೆ ತಲಾ ₹18,000 ಭತ್ಯೆ ನೀಡುವುದಾಗಿ ಎಎಪಿ ವರಿಷ್ಠ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘೋಷಿಸಿದ್ದಾರೆ.

ಸೋಮವಾರ(ಡಿ.30) ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೇಜ್ರಿವಾಲ್ ಬಿಜೆಪಿಯವರು ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ಗೆದ್ದಂತೆ ದೆಹಲಿಯಲ್ಲೂ ಗೆಲ್ಲಬಹುದು ಎಂಬ ನಂಬಿಕೆಯಲ್ಲಿ ಇದ್ದಾರೆ ಆದರೆ ದೆಹಲಿಯ ಜನ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಬಿಜೆಪಿ ಸುಳ್ಳು ಭರವಸೆಗಳನ್ನು ನೀಡಿ ಮತದಾರರ ದಾರಿ ತಪ್ಪಿಸುವ ಯತ್ನವನ್ನು ಮಾಡುತ್ತಿದೆ ಆದರೆ ಇದು ಯಾವುದೂ ಕೆಲಸ ಮಾಡಲ್ಲ ದೆಹಲಿಯ ಜನತೆಗೆ ಆಮ್ ಆದ್ಮಿ ಪಕ್ಷ ಏನು ಎಂದು ಗೊತ್ತಿದೆ ಇದುವರೆಗೆ ಕೊಟ್ಟ ಭರವಸೆಯನ್ನು ಯಾವುದೇ ಕಾರಣಕ್ಕೂ ಬಾಕಿ ಉಳಿಸಿಕೊಂಡಿಲ್ಲ ಹಾಗಾಗಿ ಮುಂದಿನ ಚುನಾವಣೆಯಲ್ಲಿ ಮತದಾರರು ನಮ್ಮ ಕೈ ಹಿಡಿಯಲಿದ್ದಾರೆ ಎಂದು ಹೇಳಿದ್ದಾರೆ.

ದೇವಸ್ಥಾನದ ಅರ್ಚಕರು ಹಾಗೂ ಗುರುದ್ವಾರದ ಗುರುಗಳು ನೋಂದಣಿ ಮಾಡಿಕೊಳ್ಳಬೇಕು. ಮಂಗಳವಾರ ಡಿ.30ರಂದು ನೋಂದಣಿ ಆರಂಭಗೊಳ್ಳಲಿದ್ದು, ಕನ್ನಾಟ್ ನಲ್ಲಿರುವ ಹನುಮಾನ್ ದೇವಾಲಯದಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭಿಸುವುದಾಗಿ ಕೇಜ್ರಿವಾಲ್ ಹೇಳಿಕೆ ನೀಡಿದ್ದಾರೆ, ಇದಾದ ಬಳಿಕ ತಮ್ಮ ತಮ್ಮ ಕ್ಷೇತ್ರದ ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ನೋಂದಣಿ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.