ಲೋಕದರ್ಶನ ವರದಿ
ಮೂಡಲಗಿ 10: ತಾವು ಕಲಿಯಲು ಸಾಧ್ಯವಾಗದಿದ್ದರೂ ಹಳ್ಳಿ ಮಕ್ಕಳು ಶಿಕ್ಷಣದಿಂದ ವಂಚಿತರಾಗದಿರಲ್ಲಿ ಎನ್ನುವ ಮಹೋನ್ನತ ಧ್ಯೇಯದೊಂದಿಗೆ ಕಮ್ಮಲದಿನ್ನಿ ಪ್ರಗತಿಪರ ರೈತರಾದ ಭೀಮಪ್ಪ ಎಚ್.ರಡ್ಡಿ ಅವರು ಸುಮಾರು 18 ಲಕ್ಷ ರೂಪಾಯಿಗಳ ಮೌಲ್ಯದ ಬಸ್ ಖರೀದಿಸಿ ಶಾಲೆಗೆ ದೇಣಿಗೆಯಾಗಿ ನೀಡಿದ್ದಾರೆ.
ಮೂಡಲಗಿ ತಾಲೂಕಿನ ಕಮಲದಿನ್ನಿಯ ಮಹಾತ್ಮಾಗಾಂಧಿ ಶಿಕ್ಷಣ ಸಂಸ್ಥೆ ನಡೆಸುವ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗೆ ರಡ್ಡಿ ಅವರು ಬಸ್ ಕೊಡುಗೆಯಾಗಿ ನೀಡಿದ್ದಾರೆ. ಇದರಿಂದ ಕಮಲದಿನ್ನಿ ಗ್ರಾಮದಿಂದ ಸುಮಾರು 4 ಕೀ.ಮೀ ಅಂತರದಲ್ಲಿ ಶಾಲೆಗೆ ಕಮಲದಿನ್ನಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ರಂಗಾಪೂರ, ಪಟಗುಂದಿ ಗ್ರಾಮದಿಂದ ಬರುವ ಶಾಲಾ ಮಕ್ಕಳಿಗೆ ಅನುಕೂಲವಾಗಲಿದೆ.
ಬಿ.ಎಚ್.ರಡ್ಡಿ ಎಂದೇ ಈ ಭಾಗದಲ್ಲಿ ಖ್ಯಾತಿ ಹೊಂದಿರು ಪ್ರಗತಿ ಪರ ರೈತರಾದ ರಡ್ಡಿ ಅವರು ಕೇವಲ 4ನೇ ತರಗತಿವರಿಗೆ ಓದಿರುವರು, ಕಷ್ಟದ ಪರಿಸ್ಥಿಯಲ್ಲೂ ಹೇಗೆ ರೈತರು ಸಾಧನೆ ಮಾಡಬಹುದು ಎನ್ನುವುದಕ್ಕೆ ಮೂಡಲಗಿ ಈ ಭಾಗದಲ್ಲಿ ಹೆಸರು ವಾಸಿಯಾಗಿ ನಿಂತಿದ್ದಾರೆ. ಸದ್ಯಕ್ಕೆ ಮಹಾತ್ಮಾ ಗಾಂಧಿ ಶಿಕ್ಷಣ ಸಂಸ್ಥೆಯ ಚೇರಮನ್ರಾಗಿಯು ಸೇವೆ ಸಲ್ಲಿಸುತ್ತಿದ್ದಾರೆ.
ಕಮಲದಿನ್ನಿ ಗ್ರಾಮದಲ್ಲಿ 1991-92 ರಲ್ಲಿ ಬಿ.ಎಚ್.ರಡ್ಡಿ ಸಹೋದರ ರಂಗಪ್ಪ ಹ.ರಡ್ಡಿ ಅವರು ಮಹಾತ್ಮಾ ಗಾಂಧಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಹಳ್ಳಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದೀಗ ಬಿ.ಎಚ್.ರಡ್ಡಿ ಅವರು ತಮ್ಮ ಮಗಳ ಸ್ಮರಣಾರ್ಥ ಬಸ್ ದೇಣಿಗೆ ನೀಡಿದ್ದಾರೆ.
ಸುಣಧೋಳಿ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಶಿವಾನಂದ ಮಹಾಸ್ವಾಮಿಗಳು ಸೋಮವಾರ ಶಾಲಾ ವಾಹನಕ್ಕೆ ಪೂಜೆ ಸಲ್ಲಿಸಿ ವಾಹನ ದೇಣಿಗೆ ನೀಡಿದ ಬಿ.ಎಚ್.ರಡ್ಡಿ ಅವರನ್ನು ಗ್ರಾಮಸ್ಥರ ಪರವಾಗಿ ಸತ್ಕರಿಸಿ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದ್ದರು.
ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಆರ್.ಎಚ್.ರಡ್ಡಿ ಮಾತನಾಡಿ, ಇಲ್ಲಿಯವರಿಗೆ ಬಾಡಿಗೆ ಆಧಾರದ ಮೇಲೆ ಬಸ್ ಸೌಲಭ್ಯ ಓಡಿಸಲಾಗುತ್ತಿತ್ತು, ಇದಿಗ ಶಾಲೆಯ ಸ್ವಂತ ವಾಹನ ಆದಂತಾಗಿದೆ, ವಾಃನ ದೇಣಿಗೆ ನೀಡರು ಬಿ.ಎಸ್.ರಡ್ಡಿ ಎಲ್ಲರಿಗೂ ಆದರ್ಶರಾಗಿದ್ದಾರೆ ಎಂದ ಅವರು ಈ ಶಾಲೆಯಲ್ಲಿ ಉಚಿತ ಶಿಕ್ಷಣದೊಂದಿಗೆ ಕಡಿಮೆ ದರದಲ್ಲಿ ವಾಹನ ಸೌಲಭ್ಯ ಕಲ್ಪಿಸಲ್ಲಾಗುವದು ವಾಹನ ಸೌಲಭ್ಯ ಕಮಲದಿನ್ನಿ, ಸುಣಧೋಳಿ, ಪಾಶರ್ಿ ತೋಟ, ಪಟಗುಂದಿ, ರಂಗಾಪೂರ ಮತ್ತು ಮೂಡಲಗಿಯ ತಳವಾರ ತೋಟ ಶಾಲಾ ಮಕ್ಕಳಿಗೆ ಅನುಕೂಲವಗಲಿದೆ ಎಂದರು.
ಶಿಕ್ಷಣ ಸಂಸ್ಥೆಯ ಕಾರ್ಯದಶರ್ಿ ಶಂಕರ ಬುದ್ನಿ, ಲಕ್ಷ್ಮಣ ಹುಚರಡ್ಡಿ, ಬಿ.ಎಲ್.ಸಂಕನ್ನವರ, ಟಿ.ಬಿ.ಪಾಟೀಲ, ಎಸ್.ವಾಯ್.ಸೋನ್ನದ, ವೆಂಕಟೇಶ ಸೋನ್ನದ, ಈಶ್ವರ ಬುದ್ನಿ, ಎಸ್.ಟಿ.ಕುಲಿಗೋಡ, ವಾ.ಜಿ.ಮಂಟನ್ನವರ, ಈರಣ್ಣಾ ಸಂತಿ, ಪಾಂಡುರಂಗ ರಡ್ಡಿ, ಶಾಲಾ ಮುಖ್ಯೋಪಾಧ್ಯಯ ಲಕ್ಷ್ಮಣ ಪಂಚಗಾಂವಿ, ಶಿಕ್ಷಕರು ಮತ್ತಿತರರು ಇದ್ದರು.