ಕಾಗವಾಡ 23: ಕನರ್ಾಟಕ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿ ಸಕರ್ಾರ ಕಚ್ಚಾಟದಲ್ಲಿ ಕಾಲಹರಣ ಮಾಡುತ್ತಿದ್ದು, ಮತದಾರರು ದುರಾಡಳಿತಕ್ಕೆ ಬೇಸತ್ತು ಬಿಜೆಪಿ ಪಕ್ಷವನ್ನು ಬೆಂಬಲಿಸಿದ್ದಾರೆ. ರಾಜ್ಯದಲ್ಲಿ ಒಂದು ಸ್ಥಾನ ಮಾತ್ರ ಕಾಂಗ್ರೆಸ್ ಗೆದ್ದಿದೆ. ಕಾಗವಾಡ ಕ್ಷೇತ್ರದಿಂದ 18 ಸಾವಿರ ಅಧಿಕ ಮತಗಳನ್ನು ಅಣ್ಣಾಸಾಹೇಬ ಜೊಲ್ಲೆಯವರಿಗೆ ನೀಡಿದ ಕ್ಷೇತ್ರದ ಪ್ರಭುದ್ಧ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆಯೆಂದು ಕಾಗವಾಡ ಮಾಜಿ ಶಾಸಕ ರಾಜು ಕಾಗೆ ಸಂತಸದಿಂದ ಹೇಳಿದರು.
ಗುರುವಾರ ರಂದು ಉಗಾರ ಖುರ್ದ ಪಟ್ಟಣದ ಅವರ ನಿವಾಸದಲ್ಲಿ ಕಾರ್ಯಕರ್ತರ ಸಮಾವೇಶ ಜರುಗಿತು. ಸಮಾವೇಶದಲ್ಲಿ ಮಾಜಿ ಶಾಸಕ ರಾಜು ಕಾಗೆ ಮಾತನಾಡುವಾಗ, ಕಳೆದ ವಿಧಾನಸಭಾ ಚುನಾವಣೆಯಲ್ಲಿ 33 ಸಾವಿರ ಹೆಚ್ಚಿನ ಮತ ಕಾಂಗ್ರೆಸ್ ಅಭ್ಯಥರ್ಿಗೆ, ಇದೇ ಕಾಗವಾಡ ಕ್ಷೇತ್ರ ಜನತೆ ನೀಡಿದ್ದರು. ಈಗ ಆ ಮತಾಧಿಕ್ಯ ಮುರಿದು, 18 ಸಾವಿರು ಅಧಿಕ ಮತ ನೀಡಿದ್ದಾರೆ. ಬಿಜೆಪಿ ಪಕ್ಷದ ಮೇಲೆಯಿರುವ ನಂಬಿಕೆ ಇದೇ ರೀತಿ ಕಾಗವಾಡ ಜನತೆ ಮುಂದೆವರೆಸಲಿಯೆಂದು ಹೇಳಿ, ಮತದಾರರಿಗೆ ಧನ್ಯವಾದ ಹೇಳಿದರು.
ರಾಜ್ಯದಲ್ಲಿ ಘಟಾನುಗಟಿ ಕಾಂಗ್ರೆಸ್ ಪಕ್ಷದ ನಾಯಕರನ್ನು ಮತದಾರರು ಸೋಲಿಸಿದ್ದಾರೆ. ರಾಜ್ಯದ ಜನತೆ ಸ್ಥಿರ ಮತ್ತು ಪಾರದರ್ಶಕ ಆಡಳಿತಕ್ಕೆ ಹೆಚ್ಚಿನ ಒತ್ತಡ ನೀಡಿ, ದೇಶದ ಇನ್ನೊಮ್ಮೆ ಪ್ರಧಾನಿ ಹುದ್ದೆ ಚುಕ್ಕಾಣಿ ನರೇಂದ್ರ ಮೋದಿಜಿ ಹಿಡೆಯಲಿಯೆಂದು ಒಂದೆ ಆಸೆ. ರಾಜ್ಯ ಹಾಗೂ ದೇಶದ ಜನತೆಯದಾಗಿದೆಯೆಂದು ರಾಜು ಕಾಗೆ ಹೇಳಿದರು.
ಬಿಜೆಪಿ ಕಾರ್ಯಕರ್ತರು ಶಿರಗುಪ್ಪಿ, ಜುಗೂಳ, ಕಾಗವಾಡ, ಉಗಾರ, ಐನಾಪೂರ, ಸೇರಿದಂತೆ ಇನ್ನೂಳಿದ ಗ್ರಾಮಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ಗುಲಾಲ ಎರುಚಿ ಸಂಭ್ರಮಾಚರಿಸಿದರು.
ಬಿಜೆಪಿ ಘಟಕಾಧ್ಯಕ್ಷ ನಿಂಗಪ್ಪಾ ಕೋಕಲೆ, ಮುಖಂಡರಾದ ಅನೀಲ ನಾವೀಲಗೇರ, ಶೀತಲ ಪಾಟೀಲ, ಜಿಪಂ ಸದಸ್ಯ ಅಜೀತ ಚೌಗುಲೆ, ಅಭಯಕುಮಾರ ಅಕಿವಾಟೆ, ಶಿವಾನಂದ ಪಾಟೀಲ, ಅಣ್ಣಾಸಾಹೇಬ ಪಾಟೀಲ, ಉಮೇಶ ಪಾಟೀಲ, ಶಿವಾನಂದ ನವನಿಹಾಳ, ಯೊಗೇಶ ಕುಂಬಾರ, ವಲ್ಲಭ ಕಾಗೆ, ಗಜಾನನ ಯರೆಂಡೋಲೆ, ಶಿವಾನಂದ ಗೋಲಭಾವಿ, ಸುನೀಲ ನಾನೀಕರ, ಪ್ರಕಾಶ ಮಾಳಿ, ಸೇರಿದಂತೆ ಅನೇಕರು ಸಂಭ್ರಮಾಚರಿಸಿದರು.