ಆಗ್ರಾ, ಫೆ13 : ಆಗ್ರಾ - ಲಕ್ನೋ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಇಂದು ಸಂಭವಿಸಿದ ನಡೆದ ಭೀಕರ ಅಪಘಾತದಲ್ಲಿ 16 ಮಂದಿ ಮೃತಪಟ್ಟು, ಕನಿಷ್ಠ ಇತರ 20 ಮಂದಿ ಗಾಯಗೊಂಡಿದ್ದಾರೆ.
ದೆಹಲಿಯಿಂದ ಬಿಹಾರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸು ಟ್ರಕ್ನ ಹಿಂಬದಿಗೆ ಬಡಿದು ಹೊಡೆದು ಈ ದುರಂತ ಸಂಭವಿಸಿದೆ.
ಫಿರೋಜಬಾದ್ ಜಿಲ್ಲೆಯ ನಾಗ್ಲ ಖಾನ್ಗರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದೂ ಪೊಲೀಸರು ಹೇಳಿದ್ದಾರೆ.
ಟ್ರಕ್ನ ಟೈರು ಸಿಡಿದ ಬಳಿಕ ಟ್ರಕ್ ಚಾಲಕ ಟೈರ್ ಬದಲಾಯಿಸಲು ಹೆದ್ದಾರಿ ಬಲವಾಗದಲ್ಲಿ ನಿಲ್ಲಿಸಿದ್ದಾಗ ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಬಸ್ಸು, ಟ್ರಕ್ ಹಿಂಭಾಗಕ್ಕೆ ಢಿಕ್ಕಿ ಹೊಡೆಯಿತು ಎಂದು ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಬ್ಬಂದಿ ಘಟನೆಯ ವಿವರ ನೀಡಿದ್ದಾರೆ .
"ಢಿಕ್ಕಿಯ ರಭಸಕ್ಕೆ ಬಸ್ಸು ನುಜ್ಜುಗುಜ್ಜಾಗಿದ್ದು, ಗಾಯಾಳುಗಳನ್ನು ಮತ್ತು ಮೃತದೇಹಗಳನ್ನು ಬಸ್ಸಿನಿಂದ ಹೊರೆಗೆ ತೆಗೆಯಲು ಪರಿಹಾರ ಸಿಬ್ಬಂದಿ ಹರಸಾಹಸ ಮಾಡಬೇಕಾಯಿತು.