ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಅನರ್ಹ 16 ಜನ ಶಾಸಕರು : ರೋಷನ್ ಬೇಗ್ ಪಕ್ಷ ಸೇರ್ಪಡೆಗೆ ಬ್ರೇಕ್

ಬೆಂಗಳೂರು ,ನ 14 :     ಸುಪ್ರೀಂಕೋರ್ಟ್ ತೀರ್ಪುನಿಂದ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಪಡೆದ ಅನರ್ಹ 16 ಜನ  ಶಾಸಕರಿಂದು ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆ ಯಾದರು.ಆದರೆ ಶಿವಾಜಿ ನಗರದ ಅನರ್ಹ ಶಾಸಕ ರೋಷನ್ ಬೇಗ್  ಬಿಜೆಪಿ ಸೇರ್ಪಡೆಗೆ ಬ್ರೇಕ್ ಬಿದ್ದಿದೆ.  

 ಬಿಜೆಪಿ ಕಚೇರಿ ಮುಂದೆ ನಡೆದ ಸರಳ ಸಮಾರಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್,ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಸಮ್ಮುಖದಲ್ಲಿ 16 ಅನರ್ಹರು ಶಾಸಕರು ಕೇಸರಿ ಪಕ್ಷಕ್ಕೆ ಸೇರ್ಪಡೆಯಾದರಯ.ಅವರಿಗೆ ಪಕ್ಷದ ಧ್ವಜ ನೀಡಿ ಶಾಲು ಹೊದಿಸಿ ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡರು.ಈ ಮೊದ ಲು ಬಿಜೆಪಿ ಕಚೇರಿಗೆ ಆಗಮಿಸಿದ ಅನರ್ಹ ಶಾಸಕರು  ಪಕ್ಷದ ರಾಜ್ಯಾಧ್ಯಕ್ಷರ ಕಚೇರಿಗೆ ತೆರಳಿ  ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದರು.     

ಮೊದಲನೆಯವರಾಗಿ ರಮೇಶ್ ಜಾರಕಿಹೊಳಿ, ಹೆಚ್.ವಿಶ್ವನಾಥ್,ಆರ್.ಶಂಕರ್,ಆನಂದ್ ಸಿಂಗ್,ಪ್ರತಾಪ್ ಗೌಡ ಪಾಟೀಲ್,ಬಿ.ಸಿ.ಪಾಟೀಲ್,ಶಿವರಾಮ್ ಹೆಬ್ಬಾರ್, ನಾರಾಯಣಗೌಡ, ಎಸ್.ಟಿ.ಸೋಮಶೇಖರ್,ಗೋಪಾಲಯ್ಯ, ಭೈರತಿ ಬಸವರಾಜು,ಮುನಿರತ್ನ, ,ಡಾ.ಸುಧಾಕರ್,ಶ್ರೀಮಂತ ಪಾಟೀಲ್ ಎಲ್ಲರಿಗೂ ಬಿಜೆಪಿ ಶಾಲು ಹೊದ್ದು,ಬಿಜೆಪಿ ಬಾವುಟ ತೆಗೆದುಕೊಂಡು ಸಂಭ್ರಮಿಸಿದರು.  

 ಅನರ್ಹರ  ಶಾಸಕರು ಪಕ್ಷ ಸೇರ್ಪಡೆ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಮಂತ್ರಿ ಯಡಿಯೂರಪ್ಪ,ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕ್ಕೆ ತರಲು ಕಾರಣವಾದ ನಿಮಗೆ ನೀಡಿದ ಭರವಸೆ ಹುಸಿಗೊಳಿಸುವುದಿಲ್ಲ.ವಿಶ್ವಾಸ ದ್ರೋಹ ಮಾಡುವುದಿಲ್ಲ.ರಾಜೀನಾಮೆ ಕೊಟ್ಟು  ನಮ್ಮ ಪಕ್ಷಕ್ಕೆ ಸೇರಿರುವ ಎಲ್ಲ ಶಾಸಕರು ಮತ್ತು ಅವರ ಬೆಂಬಲಿಗರಿಗೆ ನಾನು ಪಕ್ಷಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪರವಾಗಿ ಭರವಸೆ ನೀಡುತ್ತೇನೆ ಎಂದು ಅನರ್ಹರಿಗೆ ಮುಖ್ಯಮಂತ್ರಿ ಅಭಯ ನೀಡಿದರು.  

 ದೇಶದಲ್ಲಿ ಒಂದೇ ಬಾರಿಗೆ 17 ಶಾಸಕರು ಏಕಕಾಲಕ್ಕೆ ರಾಜೀನಾಮೆ ಕೊಟ್ಟ ಇತಿಹಾಸವಿಲ್ಲ. ಪಕ್ಷಕ್ಕೆ ಸೇರಿದ ನಿಮ್ಮನ್ನು ಗೆಲ್ಲಿಸುವ ಹೊಣೆ ನಮ್ಮ ಮೇಲೆ ಇದೆ.ಅವರ ಗೆಲುವಿಗೆ ತನು, ಮನ, ಧನದಿಂದ ಬಿಜೆಪಿ ಕಾರ್ಯಕರ್ತ ರು,ಮುಖಂಡರು,ಸಚಿವರು,ಶಾಸಕರು ಶ್ರಮಿಸಿ ಚುನಾವಣೆ ಯಲ್ಲಿ ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದರು. 

ಅನರ್ಹ ಶಾಸಕರ ಜೊತೆಗೆ 26 ಸಂಸದರು.ನೂರಾರು ಶಾಸಕರು,ಕಾರ್ಯಕರ್ತರು ನಿಮ್ಮ ಜೊತೆ ಇದ್ದೇವೆ. ಕೇಂದ್ರದ ನಾಯಕತ್ವ ಕೂಡ ನಿಮ್ಮ ಜೊತೆಗೆ ಇದೆ. ಶಾಸಕ ಸ್ಥಾನ ತ್ಯಾಗ ಮಾಡಿ ನೀವು ಬಂದಿದ್ದೀರಿ. ಪಕ್ಷದಲ್ಲಿ ಯಾರೂ ಯಾವುದೇ ಒಡಕಿನ ಮಾತಿಗೆ ಕಿವಿಕೊಡಬೇಡಿ ನಿಮ್ಮ ಜೊತೆ ನಾವು ಸದಾ ಇದ್ದೇವೆ. ನಿಮ್ಮ ಗೆಲುವು ಶೇ 100ರಷ್ಟು ನಿಶ್ಚಿತ ಎಂದು ಭವಿಷ್ಯ ಅವರು ನುಡಿದರು.   

ನಮ್ಮೆಲ್ಲ ಬಿಜೆಪಿ ಕಾರ್ಯಕರ್ತರು ತಮ್ಮೆಲ್ಲ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬದಿಗಿಟ್ಟು ಇವರ ಪರವಾಗಿ ಕೆಲಸ ಮಾಡಬೇಕು.15ಕ್ಕೆ 15 ಕ್ಷೇತ್ರಗಳಲ್ಲಿ ನಾವು ಗೆಲ್ಲಬೇಕು.ಇವರ ವಿಜಯದ ನಂತರ ಬೆಂಗಳೂರಿನಲ್ಲಿ ಒಂದು ಲಕ್ಷ ಜನರನ್ನು ಸೇರಿಸಿ ಇವರನ್ನೆಲ್ಲ ಸನ್ಮಾನಿಸುತ್ತೇವೆ. ಅಥಣಿಯಿಂದ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹಾಗೂ  ಶಿವಾಜಿನಗರದಿಂದ ಕಟ್ಟಾ ಸುಬ್ರಮಣ್ಯ ನಾಯ್ಡು ಟಿಕೆಟ್ ನೀಡುತ್ತಾರೆಂಬ ಮಾತು ಕೇಳಿ ಬಂದಿತ್ತು ಆದರೆ ಅದೆಲ್ಲಾ ಸುಳ್ಳು ಅವರಿಗೂ ಸಹ ಕ್ಷೇತ್ರಗಳ ಉಸ್ತುವಾರಿ ನೀಡಲಾಗಿದೆ. ಉಮೇಶ್ ಕತ್ತಿ ಕಾಗವಾಡಕ್ಕೆ, ಕಟ್ಟಾಸುಬ್ರಮಣ್ಯ ನಾಯ್ಡು ಶಿವಾಜಿನಗರ,ರಮೇಶ್ ಜಿಗಜಣಗಿ ಅವಗಿರೂ ಚುನಾವಣಾ ಉಸ್ತುವಾರಿ ವಹಿಸಲಾಗಿದೆ ಎಂದರು.   

ನಮಗಾಗಿ ರಾಜೀನಾಮೆ ಕೊಟ್ಟು ತ್ಯಾಗ ಮಾಡಿ ಬಂದಿರುವ ಎಲ್ಲ ಶಾಸಕರನ್ನು ಚುನಾವಣೆ ಯಲ್ಲಿ ಗೆಲ್ಲಿಸಿಕೊಂಡು ಬರುವುದು ನಮ್ಮ ಜವಾಬ್ದಾರಿ.ಈಗ ಮಾಜಿ ಶಾಸಕರಾಗಿರುವ ಇವ ರೆಲ್ಲ ಭಾವಿ ಶಾಸಕರು ಮತ್ತು ಭಾವಿ ಸಚಿವರು.ಇವರಿಗೆಲ್ಲಾ ಅಭಿನಂದನೆಗಳು.ತುಮಕೂರಿ ನಲ್ಲಿ ಸಹಕಾರಿ ಕ್ಷೇತ್ರದ ಬೃಹತ್ ಕಾರ್ಯಕ್ರಮದ ನಿಮಿತ್ತ ತೆರಳುತ್ತಿದ್ದೇನೆ ಅನ್ಯತಾ ಭಾವಿಸ ಬೇಡಿ ಎಂದು ಹೇಳಿ ವೇದಿಕೆಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಗಮಿಸಿದರು.     

ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯ  ಉಸ್ತುವಾರು ಮುರಳೀಧರರಾವ್, ನಮ್ಮ ಪಕ್ಷ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ.ಬಿಜೆಪಿ ಮೇಲೆ ವಿಶ್ವಾಸವಿಟ್ಟು ಬಂದವರಿಗೆ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.    

ಸಭೆಯ ನಡುವೆ ಬೈರತಿ ಬಸವರಾಜು ಬೆಂಬಲಿಗ,ಮಾಜಿ ಮೇಯರ್ ನಾರಾಯಣಸ್ವಾಮಿ, ಶಿವಾಜಿನಗರದ ಸರವಣ(ಕಾರ್ಪೋಟರ್ ಮಮತಾ ಶರವಣ ಪತಿ),ಶಂಕರ್ ಪುತ್ರ ಜ್ಯೋತಿತರ್ೆಜೋಮಯ ಬಿ.ಸಿ.ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ಪಕ್ಷ  ಸೇರ್ಪಡೆಯಾದರು.     

ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಹಾಗೂ ಅನರ್ಹ ಶಾಸಕ ಎಚ್.ವಿಶ್ವನಾಥ್, ನಾವೆಲ್ಲಾ ಶಾಸಕರು ಸಂತೋಷದಿಂದ ಬಿಜೆಪಿ ಸೇರಿದ್ದೇವೆ.ನಾವೆಲ್ಲ ಬಹಳ ವರ್ಷದಿಂದ ರಾಜಕಾರಣ ಮಾಡಿಕೊಂಡು ಬಂದವರು. ಯಾವ ಯಾವ ಸಂದರ್ಭದಲ್ಲಿ ಏನೇನಾಗು ತ್ತದೋ ಅದೆಲ್ಲಾ ನಮ್ಮಕೈಯಲ್ಲಿ ಇಲ್ಲ.ಶಾಸ್ತ್ರಗಳಲ್ಲಿ ಹೇಳಿರು ವಂತೆ  ಮನುಷ್ಯನಿಗೆ ಯಾವ ಯಾವ ಯೋಗಾಯೋಗ ಫಲಗಳು ಯಾವ ಕಾಲಕ್ಕೆ ಬರುತ್ತವೋ ಎಂಬುದು ಸೃಷ್ಟಿಕರ್ತ ನಾದ ಬ್ರಹ್ಮನಿಗೆ ತಿಳಿದಿರುವುದಿಲ್ಲವಂತೆ ಎನ್ನುವ ಮೂಲಕ ಬಿಜೆಪಿ ಸೇರ್ಪಡೆಯೂ ಯೋಗಾ ಯೋಗ ಎಂದು ಹೇಳಿದರು.     

ನಾವು ಯಾರು ಕೂಡ ಅಧಿಕಾರಕ್ಕಾಗಿ ಶಾಸಕ ಸ್ಥಾನ ತ್ಯಾಗ ಮಾಡಿದವರಲ್ಲ.ಕರ್ನಾಟಕದ ಲ್ಲಿದ್ದ ರಾಕ್ಷಸ ರಾಜಕಾರಣವನ್ನು ಕೊಡೆಗಾಣಿಸಲು ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯ್ತು.ಇದು ಪಕ್ಷಾಂತ ರವಲ್ಲ.ಇದು ರಾಜಕೀಯ ಧೃವೀಕರಣ.ಇಂದು ಪಕ್ಷ ರಾಜಕಾರಣ ವಿಫಲವಾಗಿದೆ.ಹಾಗಾಗಿ ಧೃವೀಕರಣ ಆಗಬೇಕೆಂದು ನಾವು ರಾಜೀನಾಮೆ ನೀಡಬೇಕಾಯ್ತು. ನಮ್ಮನ್ನು ರಾಜ್ಯ ರಾಜಕಾರಣದಿಂದ ಹೊರಗಿಡ ಬೇಕೆಂದು ಹುನ್ನಾರ ಮಾಡಲಾಯ್ತು. ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಮೂಲಕ ಚುನಾವಣಾ ರಾಜಕಾರಣ ದಿಂದಲೂ ನಮ್ಮನ್ನು ದೂರವಿಡುವ ಪ್ರಯತ್ನ ಮಾಡಿದರು.ಆದರೆ ನಿನ್ನೆ ಸುಪ್ರಿಂ ಕೋರ್ಟ್ ಆ ಹುನ್ನಾರನ್ನು ವಿಫಲಗೊಳಿಸಿದೆ.     

ರಾಜ್ಯದಲ್ಲಿ ಯಡಿಯೂರಪ್ಪ ಅವರ ಭುಜಕ್ಕೆ ಭುಜಕೊಟ್ಟು ದುಡಿಯಲು ನಾವು 17ಜನರು ಬಿಜೆಪಿಗೆ ಬಂದಿದ್ದೇವೆ.ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನರೂ ಸಹ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದರು.ಮಿಸ್ಡ್ ಕಾಲ್ ಕೊಡುವ ಮೂಲಕ ಅನರ್ಹ ಶಾಸಕರ ಬೆಂಬಲಿಗರು ಬಿಜೆಪಿ ಸೇರ್ಪಡೆ.   

ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್,ಒಂದೂವರೆ ವರ್ಷ ದ ಹಿಂದೆ ಅಪವಿತ್ರ ಮೈತ್ರಿಯಿಂದ ಬಂದಿದ್ದ ಸರ್ಕಾರದ ಭ್ರಷ್ಟಾಚಾರವನ್ನು ಕಂಡು,ರಾಜ್ಯಾ ಭಿವೃದ್ದಿ ಕೇವಲ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯವೆಂದು ಮನಗಂಡು ಬಿಜೆಪಿಗೆ ಬಂದಿ ದ್ದಾರೆ.ಅವರೆಲ್ಲರನ್ನು ಮುಂಬರುವ ಚುನಾವಣೆಯಲ್ಲಿ ನಮ್ಮ ಬಿಜೆಪಿ ಕಾರ್ಯಕರ್ತರು ಖಂಡಿತ ಗೆಲ್ಲಿಸುತ್ತಾರೆ.ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳಿಲ್ಲ,ಚುನಾವಣೆ ಉಸ್ತುವಾರಿ ವಹಿ ಸಲು ಜನರಿಲ್ಲ.ಸಭೆ ಕರೆದ ಸಿದ್ದರಾಮಯ್ಯಗೆ ಮುಖಂಡರೇ ಬಹಿಷ್ಕಾರ ಹಾಕಿದ್ದಾರೆ.ಇದು ಚುನಾವಣೆ ಫಲಿತಾಂಶದ ಮುನ್ಸೂಚನೆ.ನಿಮ್ಮ ಜತೆ ಬಿಜೆಪಿ ಕಾರ್ಯಕರ್ತರ ಪಡೆ ಇದೆ. ನಿಮ್ಮನ್ನು ಖಂಡಿತ ಗೆಲ್ಲಿಸುತ್ತಾರೆ. 

ಇದಕ್ಕೂ ಮುನ್ನ ಅನರ್ಹ ಶಾಸಕರು ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದ ವೇದಿಕೆಗೆ ಅದ್ಧೂರಿ ಯಾಗಿ ಮೆರವಣಿಗೆ ಮೂಲಕ ಸ್ವಾಗತಿಸಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದರು.ಆದರೆ ಅನರ್ಹ ಶಾಸಕರು ಗುಂಪಾಗಿ ಬಾರದೇ ಪ್ರತ್ಯೇಕವಾಗಿ ಕಚೇರಿಗೆ ಬಂದ ಹಿನ್ನೆಲೆ ಅವರ ಮೆರವಣಿಗೆಗೆ ಮಾಡಿದ್ದ ಯೋಜನೆ ವಿಫಲವಾಯಿತು.  

 ಇನ್ನು ಐಎಂಎ ಪ್ರಕರಣದ ಪ್ರಮುಖ ಆರೋಪಿಯಾಗಿರುವ ರೋಷನ್ ಬೇಗ್ ಸೇರ್ಪಡೆಗೆ ಬಿಜೆಪಿಯಲ್ಲಿ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಅವರು ಪಕ್ಷಕ್ಕೆ ಸೇರ್ಪಡೆ ಮಾಡಿ ಕೊಳ್ಳ ಲಿಲ್ಲ ಆದರೆ ಶಿವಾಜಿ ನಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕೆಂದು ಮುಖ್ಯಮಂತ್ರಿ ವೇದಿಕೆಯಿಂ ದಲೇ ಸ್ಪಷ್ಟ ಸಂದೇಶ ರವಾನಿಸುವ ಮೂಲಕ ರೋಷನ್ ಬೇಗಅಥವಾ ಅವರ ಪುತ್ರನಿಗೆ ಟಿಕೆಟ್ ಖಚಿತ ಎಂಬ ಭರವಸೆ ನೀಡಿದರು

ಬೆಂಗಳೂರಿನಲ್ಲಿದ್ದರೂ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಹಳ್ಳಿಗೆ ಆತಂಕ ತಂದಿಟ್ಟಿತು.