ಲೋಕದರ್ಶನ ವರದಿ
ಕೊಪ್ಪಳ 22: ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದರ 157ನೇ ಜಯಂತೋತ್ಸವದ ಅಂಗವಾಗಿ ಸ.ಹಿ.ಪ್ರಾ ಶಾಲೆ ಮುದ್ಲಾಪುರ ರಸ್ತೆ ಹಾಗೂ ಸ.ಕಿ.ಪ್ರಾ. ಬೀರಲಿಂಗೇಶ್ವರ ಬಡಾವಣೆ ಶಾಲೆಗೆ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಾಳ ವತಿಯಿಂದ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಸರಕಾರಿ, ಹಿರಿಯ, ಪ್ರಾಥಮಿಕ ಶಾಲೆ ಮುದ್ಲಾಪುರ ರಸ್ತೆಯ ಮುಖ್ಯೋಪಾಧ್ಯಾರಾದ ಶರಣಪ್ಪ ಬಿಸನಳ್ಳಿ ಮಾತನಾಡಿ ಯುವಕರು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎನ್ನುವುದಕ್ಕೆ ಈ ಸಂಸ್ಥೆಯು ಸಾಕ್ಷಿಯಾಗಿದ್ದು ಸಕರ್ಾರಿ ಶಾಲೆಗಳೆಂದರೆ ತಾತ್ಸಾರ ತೋರುವ ಪಾಲಕರ ಮದ್ಯದಲ್ಲಿ ಸರ್ಕಾರಿ ಶಾಲೆಗಳು ನಮ್ಮ ಆಸ್ತಿ ಎಂದು ಮುಂದೆ ಬಂದು ಮಕ್ಕಳಲ್ಲಿ ಕ್ರೀಡಾಸಕ್ತಿ ತುಂಬಲು ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದ್ದು. ಅತೀವ ಸಂತೋಷವನ್ನುಂಟು ಮಾಡಿದೆ. ಶಾಲಾ ಚಟುವಟಿಕೆ ಮತ್ತು ಅಭಿವೃದ್ಧಿಗಾಗಿ ನಿಮ್ಮೆಲ್ಲರ ಸಹಕಾರ ಸದಾ ನಮ್ಮೊಂದಿಗೆ ಹೀಗೆ ಇರಲಿ ಮುಂಬರುವ ದಿನಗಳಲ್ಲಿ ಸ್ವಾಮಿ ವಿವೇಕಾನಂದ ಸಂಸ್ಥೆಯಿಂದ ಶೈಕ್ಷಣಿಕ ಕ್ರಾಂತಿ ಉಂಟಾಗಲಿ ಸದಾ ಸಮಾಜಕ್ಕಾಗಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಈ ಸಂಸ್ಥೆ ಉತ್ತರೋತ್ತವಾಗಿ ಬೆಳೆಯಲಿ ಎಂದು ಆಶಿಸಿದರು.
ಸಂಸ್ಥೆಯ ಉಪಾಧ್ಯಕ್ಷರಾದ ಲಿಂಗರಾಜ ಶಿರಗೇರಿ ಮಾತನಾಡಿ ಸಕರ್ಾರಿ ಶಾಲೆಗಳಲ್ಲಿ ಅನುಭವಿ ನುರಿತ ಗುರುಗಳಿಂದ ಉತ್ಕೃಷ್ಟ ಶಿಕ್ಷಣ ದೊರೆಯುತ್ತಿದ್ದು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಗಳಲ್ಲೂ ಮಕ್ಕಳು ಕ್ರಿಯಾಶೀಲರಾಗಬೇಕೆಂದು ನಮ್ಮ ಸಂಸ್ಥೆಯು ಈ ಅಳಿಲು ಸೇವೆಗೆ ಮುಂದಾಗಿದ್ದು. ಸದೃಢ ಭಾರತಕ್ಕಾಗಿ ಸದೃಢ ಯುವಜನತೆ ತಯಾರಾಗಬೇಕಾದರೆ ಪ್ರಾಥಮಿಕ ಹಂತದಲ್ಲೇ ಭದ್ರ ಬುನಾದಿ ಹಾಕಬೇಕಾಗುತ್ತದೆ ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಸದಾ ಕಾರ್ಯ ಪ್ರವೃತ್ತವಾಗಿದ್ದು ತಮ್ಮೆಲ್ಲರ ಮಾರ್ಗದರ್ಶನದಲ್ಲಿ ನಾವು ಮುನ್ನೆಡೆಯುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಮೈಲಾರಪ್ಪ ಕುಣಿ ಸಂಸ್ಥೆಯ ಪದಾಧರ್ಿಕಾರಿಗಳಾದ ಸಂತೋಷ ಕಠಾರೆ, ಮಂಜುನಾಥ ಬಡಗಲ್, ಸಂತೋಷ ಬಿಸನಳ್ಳಿ, ಮೌನೇಶ ಕಿನ್ನಾಳ, ಶಿವು ಇಂದ್ರಿಗಿ, ಮಾರ್ಕಂಡೇಶ್ವರ, ಅಣ್ಣಪ್ಪ ಜೋಗಿನ್, ಸೇರಿದಂತೆ ಶಿಕ್ಷಕರು,ಶಾಲಾ ಸಿಬ್ಬಂದಿಗಳು ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.