ಗಾಂಧೀಜೀಯವರ 150ನೇ ಜನ್ಮ ಜಯಂತಿ ಆಚರಣೆ

ಲೋಕದರ್ಶನ ವರದಿ

ಕಾಗವಾಡ 05:  ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ತಾವೇ  ಪಾಲಿಸಿ, ಉಳಿದವರೆಲ್ಲ ಅವುಗಳನ್ನು ಅಳವಡಿಸಿಕೊಳ್ಳಲು ಮಾದರಿ ಶಕ್ತಿಯಾಗಿದ್ದರು. ಅವರು ಬೇರೆಯವರಿಗೆ ಆದೇಶಿಸುವ ಬದಲಾಗಿ ತಾವು ಸ್ವಂತ ಪಾಲನೆ ಮಾಡಿಕೊಂಡು ವಿಶ್ವಕ್ಕೆ ಮಾದರಿಯಾಗಿದ್ದರು. ಭಾರತದ ಪ್ರತಿ ಪ್ರಜೆಯು ಇವತ್ತು ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ತತ್ವವನ್ನು ಪಾಲನೆ ಮಾಡುವ ಅವಶ್ಯಕತೆಯಿದೆ. ಜಗತ್ತಿನಲ್ಲಿ ಮಹಾತ್ಮ ಎಂದು ಬಿರುದು ಹೊಂದಿರುವ ಆತ್ಮ ಎಂದರೆ ಗಾಂಧೀಜಿ ಮಾತ್ರ. ದೇವರು ಮನಷ್ಯನನ್ನು ನಿರ್ಮಿಸಿದ  ಆದರೆ ಮನುಷ್ಯ ಗಡಿಗಳನ್ನು ನಿಮರ್ಿಸಿ ವೈರತ್ವವನ್ನು ಬೆಳೆಸಿದನು ಆದರೆ ಗಾಂಧೀಜಿಯವರು  ವಿಶ್ವದಲ್ಲಿ ಶಾಂತಿದೂತರಾಗಿ  ಜೀವ ಸವೆಸಿದರೆಂದು  ಪ್ರಾಚಾರ್ಯ ಡಾ.ಎಸ್.ಓ.ಹಲಸಗಿ ಅವರು ಹೇಳಿದರು. 

ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ಮಹಾತ್ಮಾ ಗಾಂಧೀಜಿಯವರ 150ನೇ ಮತ್ತು ಲಾಲಬಹಾದ್ದೂರ ಶಾಸ್ತ್ರೀಜಿಯರ 115ನೇ ಜನ್ಮ ಜಯಂತಿ ಆಚರಣೆಯ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.  ಮುಂದುವರೆದು ಭಾರತದ ಮಾಜಿ ಪ್ರಧಾನಿ ಲಾಲಬಹಾದ್ದೂರ ಶಾಸ್ತ್ರೀಜಿಯವರು ಸರಳತೆ,  ಸಂಯಮಶೀಲತೆ ಮತ್ತು ಪ್ರಾಮಾಣಿಕತೆಯ ಗುಣಗಳನ್ನು ಹೊಂದಿ ಭಾರತದ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಶಾಸ್ತ್ರೀಜಿಯವರು ""ಜೈ ಜವಾನ ಜೈ ಕಿಸಾನ""ಎಂಬ ಘೋಷಣೆಯನ್ನು ನೀಡಿ ದೇಶದ ಪ್ರಗತಿಯಲ್ಲಿ ಭಾರತದ ಸೈನಿಕರ ಹಾಗೂ ರೈತರ ಪಾತ್ರ ಬಹುಮುಖ್ಯ ಎಂದು ತಿಳಿಸಿ ಹೇಳಿದರು. ಇದೇ ಸಂದರ್ಭದಲ್ಲಿ ಸಮಾಜ ಜೀವಿಗಳಾದ ನಾವು ಪ್ಲಾಸ್ಟಿಕ್ ತ್ಯಜಿಸಿ ದೇಶ ರಕ್ಷಿಸಿ ಎಂಬ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ಬಿ.ಎ ಪಾಟೀಲ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಗಾಂಧೀಜಿ ಮತ್ತು ಶಾಸ್ತ್ರೀಜಿಯವರು ಸರಳ ಮತ್ತು ಸಜ್ಜನ ಸ್ವಭಾವ ಹೊಂದಿದ ವ್ಯಕ್ತಿತ್ವಗಳಾಗಿದ್ದರು. ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆ  ಎಂಬ ಎರಡು ಅಸ್ತ್ರಗಳನ್ನು ಉಪಯೋಗಿಸಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಅವರು ಗುಲಾಮಗಿರಿ ಭಾರತಕ್ಕೆ ಅವಶ್ಯಕ ಇಲ್ಲ ಎಂದು ಹೇಳುತ್ತ ಉಪ್ಪಿನ ಸತ್ಯಾಗ್ರಹ, ಭಾರತ ಬಿಟ್ಟು ತೊಲಗಿ ಎಂಬ ಚಳುವಳಿಗಳನ್ನು ಹಮ್ಮಿಕೊಂಡು ಭಾರತಕ್ಕೆ ಸ್ವಾತಂತ್ರ್ಯ ನೀಡಲು ಪ್ರಮುಖ ಪಾತ್ರ ವಹಿಸಿದರು. ಅದೇ ರೀತಿ ಶಾಸ್ತ್ರೀಜಿಯವರು ತ್ಯಾಗಜೀವಿ, ಪ್ರಾಮಾಣಿಕ ಮತ್ತು ನಿಸ್ವಾರ್ಥ ಸೇವೆ ಸಲ್ಲಿಸುವ ಪ್ರಧಾನಿಯಾಗಿದ್ದರು. ಅವರು ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು. 

ಡಾ.ಎಸ್.ಎ.ಕರ್ಕಿ  ಯವರು ಪ್ಲಾಸ್ಟಿಕ್ ಮುಕ್ತ ಭಾರತ ಮತ್ತು ಸ್ವಚ್ಛತಾ ಸೇವೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಎನ್.ಸಿ.ಸಿ. ಅಧಿಕಾರಿ ಮೇಜರ ವ್ಹಿ.ಎಸ್. ತುಗಶೆಟ್ಟಿ ಸ್ವಚ್ಛತಾಹೀ ಸೇವಾ ಹೈ ಎಂದು ಘೋಷವಾಕ್ಯ ನೀಡಿದರು. ಪ್ರೊ. ಜೆ.ಕೆ.ಪಾಟೀಲ ಗಾಂಧಿ ಭಜನೆಯನ್ನು ನೇರವೆರಿಸಿ ಕೊಟ್ಟರು.  ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸರ್ವ ಧರ್ಮ ಪ್ರಾರ್ಥನೆ ನಡೆಸಿಕೊಟ್ಟರು.  ಮಹಾ ವಿದ್ಯಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಂತರ ಗ್ರಾಮದಲ್ಲಿ ಪ್ಲಾಸ್ಟಿಕ್ ಮುಕ್ತ ಜಾಥಾವನ್ನು ಹಮ್ಮಿಕೊಳ್ಳಲಾಯಿತು.  ಈ ಜಾಥಾದಲ್ಲಿ ಮಹಾವಿದ್ಯಾಲಯದ ಎನ್.ಸಿ.ಸಿ, ಎನ್.ಎಸ್.ಎಸ್, ಸ್ವಯಂ ಸೇವಕರು, ವಿದ್ಯಾರ್ಥಿಗಳು ಹಾಗೂ ಪದವಿ ಮತ್ತು ಪದವಿ ಪೂರ್ವ ಮಹಾವಿದ್ಯಾಲಯದ  ಎಲ್ಲ ಪ್ರಾಧ್ಯಾಪಕರು ಭಾಗಿಯಾಗಿದ್ದರು. 

ಕಾರ್ಯಕ್ರಮದಲ್ಲಿ ಉಪ ಪ್ರಾಚಾರ್ಯ ಪ್ರೊ. ಎಸ್.ಎಸ್.ಬಾಗನೆ, ಪದವಿ ಪೂರ್ವ ಪ್ರಾಚಾರ್ಯ ಪ್ರೊ. ಪಿ.ಬಿ.ನಂದಾಳೆ ಹಾಗೂ ಇನ್ನುಳಿದ ಬೋಧಕ ಹಾಗೂ ಬೋಧಕೇತರ  ವರ್ಗ ಉಪಸ್ಥಿತರಿದ್ದರು.