ಗಣಿ ಭೂ ವಿಜ್ಞಾನ ಇಲಾಖೆ ಕಂಪನಿಗಳಿಂದ 15 ಕೋಟಿ ರೂ. ದೇಣಿಗೆ

ಗದಗ 24:  ಕೋವಿಡ್-19 ರ ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಟ್ಟಿ ಚಿನ್ನದ ಗಣಿ ಕಂಪನಿಯಿಂದ 5 ಕೋಟಿ ರೂ.ಗಳ ದೇಣಿಗೆ ನೀಡಿದೆ. 

ಬೆಂಗಳೂರಿನಲ್ಲಿ ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾದ ಸಿ.ಸಿ.ಪಾಟೀಲ ಅವರು ಹಟ್ಟಿ ಚಿನ್ನದ ಗಣಿ ಕಂಪನಿ ಚೆಕ್ ಅನ್ನು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿದರು. 

ಇದೇ ಸಂದರ್ಭದಲ್ಲಿ ಗಣಿ, ಭೂ ವಿಜ್ಞಾನ ಇಲಾಖೆಯ ಇನ್ನೊಂದು ಸಂಸ್ಥೆ ಮೈಸೂರು ಮಿನರಲ್ಸ್ ಸಂಸ್ಥೆಯ ಪರವಾಗಿ 10 ಕೋಟಿ ರೂ. ಮೊತ್ತ ದ ಚೆಕ್ನ್ನು ಸಚಿವ ಸಿ.ಸಿ.ಪಾಟೀಲ ಮಾನ್ಯ ಮುಖ್ಯಮಂತ್ರಿಗಳ ಕೋವಿಡ್ -19  ಪರಿಹಾರ  ನಿಧಿಗೆ ಹಸ್ತಾಂತರಿಸಿದರು.   

ಹಟ್ಟಿ  ಚಿನ್ನದ ಗಣಿ ಕಂಪನಿ ನಿದರ್ೇಶಕರಾದ ಸಲ್ಮಾ  ಹಾಗೂ ಮಹೇಶ್ವರಾವ್  ಇದ್ದರು.