ಭಾರತ- ಬ್ರೆಜಿಲ್ ನಡುವೆ 15 ಮಹತ್ವದ ಒಪ್ಪಂದ

ನವದೆಹಲಿ, ಜನವರಿ 25,  ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸೊನಾರೊ ಮತ್ತು ಪ್ರಧಾನಿ ನರೇಂದ್ರ ಮೋದಿ  ನಡುವೆ ಶನಿವಾರ ಮಹತ್ವದ ಮಾತುಕತೆ  ನಡೆಯಲಿದೆ.ಪರಿಣಾಮ  ಭಾರತ-  ಬ್ರೆಜಿಲ್ ತೈಲ ಮತ್ತು ಅನಿಲ, ಗಣಿಗಾರಿಕೆ ಮತ್ತು ಸೈಬರ್ ಭದ್ರತಾವಲಯದಲ್ಲಿ   ಪರಸ್ಪರ ಸಹಕಾರ  ಹೆಚ್ಚಿಸುವ  15 ಮಹತ್ವದ ಒಪ್ಪಂದಗಳಿಗೆಎರಡೂ ರಾಷ್ಟ್ರಗಳು ಹಾಕಲಿವೆ ಎಂದು ಉನ್ನತ ಮೂಲಗಳು  ಹೇಳಿವೆ. 

ಬೋಲ್ಸನಾರೊ ಶುಕ್ರವಾರ ಇಲ್ಲಿಗೆ ಆಗಮಿಸಿದ್ದು, ಅವರ ಜೊತೆ 8 ಸಚಿವರು,   ನಾಲ್ಕು ಸದಸ್ಯರು ಮತ್ತು  ವಾಣಿಜ್ಯ  ನಿಯೋಗವೂ ಆಗಮಿಸಿದೆ. ಬ್ರೆಜಿಲ್ ಅಧ್ಯಕ್ಷರು  ಭಾನುವಾರದ  ಗಣರಾಜ್ಯೋತ್ಸವದ  ಮುಖ್ಯ ಅತಿಥಿಯಾಗಿದ್ದಾರೆ. ಅಧಿಕಾರಿಗಳೊಂದಿಗೆ ಅವರು ಅಕ್ಷರ್ಧಮ್ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಲ್ಯಾಟಿನ್ ಅಮೆರಿಕದ ಅತಿದೊಡ್ಡ ದೇಶವಾದ ಬ್ರೆಜಿಲ್‌ನೊಂದಿಗೆ  ಭಾರತದ ಸಂಬಂಧವು ಕಳೆದ ಕೆಲವು ವರ್ಷಗಳಿಂದಲೂ ಪ್ರಗತಿಯಲ್ಲಿದೆ.