ಪ್ಯಾಟ್ ಕಮಿನ್ಸ್ ಜೇಬಿಗೆ 15.50 ಕೋಟಿ : ಕೆಕೆಆರ್ ಪಾಲಾದ ಆಸೀಸ್ ವೇಗಿ

ಕೋಲ್ಕತಾ, ಡಿ.19:       ಆಸ್ಟ್ರೇಲಿಯಾದ ಹಿರಿಯ ವೇಗಿ ಪ್ಯಾಟ್ ಕಮಿನ್ಸ್ ಅವರನ್ನು ೧೫.೫೦ ಕೋಟಿ ರೂ.ಗೆ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಖರೀದಿಸಿತು.ಪ್ರಸಕ್ತ ಟೆಸ್ಟ್ ,ಏಕದಿನ ಹಾಗೂ ಟಿ-೨೦ ಮೂರೂ ಮಾದರಿಗಳಲ್ಲಿ ಅದ್ಭುತ ಲಯದಲ್ಲಿರುವ ಆಸೀಸ್ ವೇಗಿ ಖರೀದಿಸಲು ಫ್ರಾಂಚೈಸಿಗಳ ನಡುವ ಭಾರಿ ಪೈಪೋಟಿ ನಡೆದಿತ್ತು. ಆದರೆ, ಅಂತಿಮವಾಗಿ ಕೋಲ್ಕತಾ ನೈಟ್‌ ರೈಡರ್ಸ್ ಫ್ರಾಂಚೈಸಿ  ದುಬಾರಿ ಮೊತ್ತ ನೀಡಿ ಆಸೀಸ್‌ ವೇಗಿಯನ್ನು ತಂಡಕ್ಕೆ ಬರ ಮಾಡಿಕೊಂಡಿತು. ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಹರಾಜು ಪ್ರಕ್ರಿಯೆ ಆರಂಭವಾಗುವ ಮುನ್ನ೨ ಕೋಟಿ ರೂ. ಮೂಲ ಬೆಲೆಯ ಕಮಿನ್ಸ್‌ ಅವರನ್ನು ಖರೀದಿಸುವ ಯೋಜನೆ ರೂಪಿಸಿದ್ದವು. ಆದರೆ, ಹರಾಜಿನಲ್ಲಿ ಕಮಿನ್ಸ್‌ ಬೆಲೆ ದುಬಾರಿಯಾಗುತ್ತಿದ್ದಂತೆ ಆರ್‌ಸಿಬಿ ಖರೀದಿಸುವ ಯೋಜನೆಯಿಂದ ದೂರ ಉಳಿಯಿತು. ಅಂತಿಮವಾಗಿ ಕೆಕೆಆರ್ ೧೫.೫೦ ಕೋಟಿ ರೂ.ಗೆ ಪ್ಯಾಟ್ ಕಮಿನ್ಸ್‌ ಅವರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು.