ಲೋಕದರ್ಶನ ವರದಿ
ಶಿರಹಟ್ಟಿ: ಶಿರಹಟ್ಟಿ ಮತಕ್ಷೇತ್ರದ ಶಿರಹಟ್ಟಿ, ಮುಂಡರಗಿ, ಮತ್ತು ಲಕ್ಷ್ಮೇಶ್ವರದಲ್ಲಿನ ಬಡ ಜನತೆ ಗಾಗಿ ಆರ್ಸಿಸಿ ಮನೆಗಳನ್ನು ನಿಮರ್ಿಸಿ ಕೊಡುವ ಉದ್ದೇಶ ಹೊಂದಿ ಒಟ್ಟು 15ಸಾವಿರ ಮನೆಗಳನ್ನು ಮಂಜೂರು ಮಢಲಾಗುವುದು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಅವರು ಪಟ್ಟಣದ ಮಹಾತ್ಮಾ ಗಾಂದೀ ವೃತ್ತದಲ್ಲಿ ಪಪಮ ಆಯೋಜಿಸಲಾಗಿದ್ದ ರಾಷ್ಟ್ರಪಿತ ಗಾಂಧಿ ಮತ್ತು ಲಾಲ್ ಬಹದ್ದೂರ ಶಾಸ್ತ್ರೀ ಅವರ ಜನ್ಮ ದಿನೋತ್ಸವ ಹಾಗೂ ಪ್ಲಾಸ್ಟಿಕ ಮುಕ್ತ ಭಾರತ ಪ್ಲಾಸ್ಟಿಕ ಉತ್ಪನ್ನಗಳು ಮತ್ತು ಬಳಕೆ ಸಂಪೂರ್ಣ ನಿಷೇಧ, ಅಯುಷ್ಮಾನ ಭಾರತ ಯೋಜನೆಯಡಿ ಫಲಾನುಭವಿಗಳಿಗೆ ಆರೋಗ್ಯ ಕಾರ್ಡ ಗಳನ್ನು ವಿತರಿಸಿ ಮಾತನಾಡಿದರು.
ಶಿರಹಟ್ಟಿ ಪಟ್ಟಣಕ್ಕೆ ಈಗಾಗಲೇ 528 ಮನೆಗಳು ಮಂಜೂರಾಗಿದ್ದು, ಇನ್ನು ಎರೆಡು ಸಾವಿರ ಮನೆಗಳನ್ನು ಮುಂಬರುವ ದಿನಗಳಲ್ಲಿ ಬಡಜನತೆಗೆ ಮಂಜೂರ ಮಾಡಿಸಲಾಗುವುದು ಎಂದು ಹೇಳಿದರು.
ಪಪಂ ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣವರ ಮಾತನಾಡಿ ಗಾಂದೀಜಿಯವರ ಕನಸ ಸ್ವಚ್ಛತೆ, ಈ ಪರಿಕಲ್ಪನೆಯನ್ನು ನಾವೆಲ್ಲ ಇಂದು ಸಾಕಾರಗೊಳಿಸಬೇಕಾದ ಅವಶ್ಯಕತೆ ನಮಗೆಲ್ಲರಿಗೆ. ರೋಗ ರುಜಿನ ಮತ್ತು ಮಣ್ಣಿ ಫಲವತ್ತತೆಯನ್ನು ಕಾಪಾಡಿಕೊಳ್ಳಲು ನಾವೆಲ್ಲ ಜಾಗೃತರಾಗಬೇಕಾಗಿರುವುದು ಅವಶ್ಯಕವಿದೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ನಮ್ಮೆಲ್ಲ ಉತ್ತಮ ಜೀವನಕ್ಕಾಗಿ ಪ್ಲಾಸ್ಟಿಕೆ ಬಳೆಕೆಯನ್ನು ನಿಷೇಧಿಸಬೇಕು. ಇದಕ್ಕೆ ವ್ಯಾಪಾರಸ್ಥರು ಕೂಡಾ ಸಹಕಾರವನ್ನು ನೀಡಿಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಪಪಂ ಸದಸ್ಯರಾದ ಸಂದೀಪ ಕಪ್ಪತ್ತನವರ, ಪರಮೇಶ ಪರಬ, ಹೊನ್ನಪ್ಪ ಶಿರಹಟ್ಟಿ, ಮಂಜುನಾಥ ಗಂಟಿ, ಫಕ್ಕಿರೇಶ ರಟ್ಟಿಹಳ್ಳಿ, ರಾಜು ಕಪ್ಪತ್ತನವರ, ಇಸಾಕ ಆದ್ರಳ್ಳಿ, ಆಶ್ರತಲಿ ಢಾಲಾಯತ್, ದೇವಪ್ಪ ಆಡೂರ, ಪರಶುರಾಮ ಡೊಂಕಬಳ್ಳಿ,ಸುರೇಶ ಕಪ್ಪತ್ತನವರ, ವಾಸಣ್ಣ ಪಾಶ್ಚಾಪೂರ, ಬೋರಚಂದ ಜೈನ, ಅನೀಲ ಮಾನೆ, ಗೂಳಪ್ಪ ಕರಿಗಾರ, ಮುಂತಾದವರು ಉಪಸ್ಥಿತರಿದ್ದರು.