ಫೆ.6 ರಿಂದ 8 ರವರೆಗೆ 14ನೇ ಒಣಮೆಣಸಿನಕಾಯಿ ಮೇಳ ಆಯೋಜನೆ -ಬಿ.ಆರ್‌.ಗೀರೀಶ14th Dry Chilli Mela to be organized from Feb. 6 to 8 -B.R.Girisha

 ಫೆ.6 ರಿಂದ 8 ರವರೆಗೆ 14ನೇ ಒಣಮೆಣಸಿನಕಾಯಿ ಮೇಳ ಆಯೋಜನೆ   -ಬಿ.ಆರ್‌.ಗೀರೀಶ14th Dry Chilli Mela to be organized from Feb. 6 to 8   -B.R.Girisha 14th Dry Chilli Mela to be organized from Feb. 6 to 8 -B.R.Girisha

ಲೋಕದರ್ಶನ ವರದಿ 

ಫೆ.6 ರಿಂದ 8 ರವರೆಗೆ 14ನೇ ಒಣಮೆಣಸಿನಕಾಯಿ ಮೇಳ ಆಯೋಜನೆ 

-ಬಿ.ಆರ್‌.ಗೀರೀಶ 

ಹುಬ್ಬಳ್ಳಿ  03:  ಫೆಬ್ರವರಿ 6 ರಿಂದ 8 ರವರೆಗೆ 14 ನೇ ಒಣಮೆಣಸಿನಕಾಯಿ ಮೇಳವನ್ನು ಮೂರು ಸಾವಿರ ಮಠದ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಆರ್‌.ಗೀರೀಶ ಹೇಳಿದರು.  

ಇಂದು ವಿದ್ಯಾನಗರದ ನೇಕಾರ ಭವನದಲ್ಲಿರುವ ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಅಂದಾಜು 79,152 ಹೆಕ್ಟೇರ್ ಪ್ರದೇಶದಲ್ಲಿ ಒಣಮೆಣಸಿನಕಾಯಿ ಬೆಳೆಯನ್ನು ಬೆಳೆಯಲಾಗುತ್ತಿದ್ದು, ಒಟ್ಟು ಅಂದಾಜು ಉತ್ಪಾದನೆ 1.58 ಲಕ್ಷ ಮೆಟ್ರಿಕ್ ಟನ್ ಗಳಷ್ಟು ನೀರೀಕ್ಷೆ ಮಾಡಲಾಗಿದೆ. ರಾಜ್ಯದಲ್ಲಿ ಬ್ಯಾಡಗಿ ಡಬ್ಬಿ ಹಾಗೂ ಬ್ಯಾಡಗಿ ಕಡ್ಡಿ ತಳಿಯ ಒಣಮೆಣಸಿನಕಾಯಿ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಹಲವಾರು ದೇಶಗಳಲ್ಲಿ ಈ ತಳಿಗಳಿಗೆ ಬೇಡಿಕೆಯಿದೆ. ಬಳ್ಳಾರಿ, ಗದಗ, ಧಾರವಾಡ, ಬಾಗಲಕೋಟ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಒಣಮೆಣಸಿನಕಾಯಿ ಬೆಳೆಯನ್ನು ಬೆಳೆಯಲಾಗುತ್ತದೆ. 13 ನೇ ಒಣಮೆಣಸಿನಕಾಯಿ ಮೇಳದಲ್ಲಿ ಸುಮಾರು 89 ರೈತರು ಭಾಗವಹಿಸಿದ್ದರು. ಅಲ್ಲದೇ ಸುಮಾರು 203 ಕ್ವಿಂಟಲ್ ಒಣಮೆಣಸಿನಕಾಯಿ ಮಾರಾಟದಿಂದ ರೂ. 71 ಲಕ್ಷದಷ್ಟು ವಹಿವಾಟು ನಡೆದಿತ್ತು. ಈ ಬಾರಿ ಹೆಚ್ಚು ಹೆಚ್ಚು ರೈತರು ಭಾಗವಹಿಸಿ, ಅಧಿಕ ವಹಿವಾಟು ನಡೆಯಲಿದೆ ಎಂಬ ಭರವಸೆ ಹೊಂದಿದ್ದೇವೆ ಎಂದು ಅವರು ತಿಳಿಸಿದರು.  

ಬೆಳೆಗಾರರು ಮತ್ತು ಗ್ರಾಹಕರ ನೇರ ಸಂಪರ್ಕ, ಬೆಳೆಗಾರರು, ಗ್ರಾಹಕರು ಮತ್ತು ವಿಜ್ಞಾನಿಗಳನ್ನು ಒಂದೇ ವೇದಿಕೆಗೆ ತರುವುದು, ಒಣಮೆಣಸಿನಕಾಯಿ ಬೇಸಾಯದಲ್ಲಿನ ಹೊಸ ಸಂಶೋಧನೆಗಳ ಮಾಹಿತಿಯನ್ನು ಬೆಳೆಗಾರರಿಗೆ ಒದಗಿಸುವ ಉದ್ದೇಶವನ್ನು ಒಣಮೆಣಸಿನಕಾಯಿ ಹೊಂದಿದೆ. ಮೇಳದ ಪ್ರಚಾರವನ್ನು ಭಿತ್ತಿಪತ್ರ, ಬ್ಯಾನರ್, ಕರಪತ್ರ ಹಾಗೂ ತ್ಯಾಜ್ಯ ವಿಲೇವಾರಿ ವಾಹನಗಳಲ್ಲಿ ಧ್ವನಿವರ್ಧಕ ಮತ್ತು ಜಿಂಗಲ್ಸಗಳು ಹಾಗೂ ಆಟೋ ಮೂಲಕ ಕೈಗೊಳ್ಳಲಾಗುವುದು. ಮೇಳದಲ್ಲಿ ಭಾಗವಹಿಸುವ ಆಸಕ್ತ ರೈತರು ನೋಂದಣಿಯನ್ನು ಮಾಡಿಕೊಳ್ಳಬೇಕು. ರೈತರು ಪಹಣಿ ಪತ್ರಿಕೆ ಮತ್ತು ಆಧಾರ್ ಕಾರ್ಡ್‌ ಪ್ರತಿಯೊಂದಿಗೆ ತಾಲೂಕು ತೋಟಗಾರಿಕೆ ಕಚೇರಿ ಹಾಗೂ ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮಂಡಳಿಯ ದೂರವಾಣಿ ಸಂಖ್ಯೆ 0836- 2375030, ಹುಬ್ಬಳ್ಳಿಯ ತೋಟಗಾರಿಕೆ ಇಲಾಖೆ ಕಚೇರಿ ದೂರವಾಣಿ ಸಂಖ್ಯೆ 0836- 2355138, ಧಾರವಾಡ ತೋಟಗಾರಿಕೆ ಇಲಾಖೆ ಕಚೇರಿ ದೂರವಾಣಿ ಸಂಖ್ಯೆ 0836-2746334, ನವಲಗುಂದ ತೋಟಗಾರಿಕೆ ಇಲಾಖೆ ಕಚೇರಿ ದೂರವಾಣಿ ಸಂಖ್ಯೆ 08380-229170 ಸಂಪರ್ಕಿಸಬಹುದು ಎಂದು ಅವರು ವಿವರಿಸಿದರು. 


ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ಪ್ರಧಾನ ವ್ಯವಸ್ಥಾಪಕರಾದ ಡಾ.ರಾಮಚಂದ್ರ ಮಡಿವಾಳ ಇದ್ದರು.