ಯಮಕನಮರಡಿ 15: ಸಮೀಪದ ಹತ್ತರಗಿ ಯಮಕನಮರಡಿ ಹರಿಮಂದಿರ ಹತ್ತರಗಿಯ ಪೂಜ್ಯರಾಗಿದ್ದ ಹರಿಕಾಕಾ ಗೋಸಾವಿಯವರ 145ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಹರಿಕಾಕಾ ಅವರ ಪಾದುಕ ಪೂಜೆ ರುದ್ರಾಭಿಷೇಕ ಪಲ್ಲಕ್ಕಿ ಮೆರವಣಿಗೆ ಮಹಾಪ್ರಸಾದ ಸಾಧಕರಿಗೆ ಸನ್ಮಾನ ಇತ್ಯಾದಿ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು ಶ್ರೀ ಮಠದ ಪೂಜ್ಯರಾದ ಆನಂದ ಮಹಾಸ್ವಾಮಿ ಗೋಸಾವಿ ಯವರು ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.