1425 ಜನ ವಲಸೆ ಕಾರ್ಮಿಕರಿಗೆ ಸಾಂಸ್ಥಿಕ ಕ್ವಾರಂಟೈನ್

ತಾಳಿಕೋಟೆ19:   ತಾಲೂಕಿನ ವಿವಿಧ ಗ್ರಾಮಗಳಿಂದ ದುಡಿಯಲು ತೆರಳಿದ್ದ ಜನರ ಪೈಕಿ 1425 ಜನರು ಆಗಮಿಸಿದ್ದು ಅವರೆಲ್ಲರಿಗೂ ಸಾಂಸ್ಥಿಕ ಕ್ವಾರಂಟೈನ್ ಮಾಡಿಸುವದರೊಂದಿಗೆ ಅವರುಗಳಿಗೆ ಊಟ ಉಪಚಾರದ ಜೊತೆಗೆ ಅಗತ್ಯ ವಸ್ತುಗಳ ಪೂರೈಕೆಗೆ ತಾಲೂಕಾಡಳಿತ ಅಗತ್ಯ ಕ್ರಮ ಕೈಗೊಂಡಿದೆ.

ವಿವಿಧ ರಾಜ್ಯಗಳಿಂದ ಮರಳಿ ಆಗಮಿಸಿರುವ ವಲಸೆ ಕಾಮರ್ಿಕರ ಪೈಕಿ ಗೋವಾ ರಾಜ್ಯದಿಂದ ಆಗಮಿಸಿದವರನ್ನು ಈಗಾಗಲೇ ಹೋಂ ಕ್ವಾರಂಟೈನ್ಗೆ ಒಳಪಡಿಸಿದ್ದು ಮಹಾರಾಷ್ಟ್ರ, ಕೇರಳ, ತಮಿಳನಾಡು, ಗುಜರಾತ, ರಾಜ್ಯಗಳಿಂದ ಆಗಮಿಸಿದ 1425 ಜನರಿಗೆ ಸಾಂಸ್ಥಿಕ ಕ್ವಾರಂಟೈನ್ಗೆ ತಾಲೂಕಾಡಳಿತ ಅಧಿಕಾರಿಗಳು ಒಳಪಡಿಸಿದ್ದಾರೆ.

ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಟ್ಟಿರುವರಲ್ಲಿ 604 ಜನ ಪುರುಷರು, 463 ಮಹಿಳೆಯರು, 10 ವರ್ಷದ ಒಳಗಿನ 360 ಮಕ್ಕಳಿದ್ದು ಇವರೆಲ್ಲರಿಗೂ ಬೆಳಿಗಿನ ಉಪಹಾರ ಮದ್ಯಾಹ್ನ ಮತ್ತು ಸಾಯಂಕಾಲ ಊಟದ ವ್ಯವಸ್ಥೆಯನ್ನು ತಾಲೂಕಾಡಳಿತ ಅಧಿಕಾರಿಗಳು ಮಾಡುತ್ತಿದ್ದು ಈ ಕಾರ್ಯಕ್ಕೆ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ತಾಲೂಕಾಡಳಿತದ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡುವದರೊಂದಿಗೆ ಸಾಂಸ್ಥಿಕ ಕ್ವಾರಂಟೈನ್ನಲ್ಲಿರುವವರಿಗೆ ತಮ್ಮ ವೈಯಕ್ತಿಕವಾಗಿ ಬ್ರೇಡ್, ಬೀಸ್ಕಿಟ್, ಜೊತೆಗೆ ಚಿಕ್ಕ ಮಕ್ಕಳಿಗೆ ಹಾಲು ಪೂರೈಕೆಗೆ ಮುಂದಾಗಿದ್ದಾರಲ್ಲದೇ ಭಯಪಡುವದು ಅಗತ್ಯವಿಲ್ಲ ತಾಲೂಕಾಡಳಿತ ಅಧಿಕಾರಿಗಳ ನಿದರ್ೇಶನದಂತೆ 14 ದಿನಗಳ ಕಾಲ ಪಾಲನೆ ಮಾಡಿ ನೀವು ಕೊರೊನಾ ಸೊಂಕಿತರಲ್ಲಾ ಶಂಕಿತರಾಗಿದ್ದೀರಿ ಕ್ವಾರಂಟೈನ್ ದಿನಗಳು ಮುಗಿದ ಮೇಲೆ 1 ತಿಂಗಳಿಗಾಗುವಷ್ಟು ದಿನಸಿ ಸಾಮಗ್ರಿಗಳನ್ನು ಪ್ರತಿಕುಟುಂಭಕ್ಕೆ ನೀಡುತ್ತೇನೆ ಯಾವುದೇ ರೀತಿಯಿಂದ ಚಿಂತೆ ಬಿಟ್ಟು ಸಹಕಾರ ನೀಡಿ ಕೊರೊನಾ ವೈರಸ್ನ್ನು ಹೊಡೆದೊಡಿಸಲು ಎಲ್ಲರೂ ಮುಂದಾಗೋಣ ಎಂಬ ದೈರ್ಯದ ಮಾತುಗಳನ್ನು ಹೇಳುತ್ತಿದ್ದಾರೆ ಇದರಿಂದ ಭಯದಲ್ಲಿಯೇ ಆಗಮಿಸಿದ್ದ ಕಾಮರ್ಿಕರಿಗೆ ದೈರ್ಯತುಂಬಿದಂತಾಗಿದೆ.

* ಹೊರಗೆ ಬಾರದಂತೆ ಏಚ್ಚರಿಕೆ ಕ್ರಮ    

ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಟ್ಟಿರುವ 1425 ಜನರನ್ನು ಈಗಾಗಲೇ ಪಟ್ಟಣ ಅಲ್ಲದೇ ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ವಸತಿ ನಿಲಯ ಮತ್ತು ಶಾಲೆಗಳಲ್ಲಿ ಕ್ವಾರಂಟೈನ್ಗೆ ತಾಲೂಕಾಡಳಿತದ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದು ಅವರುಗಳು ಯಾವುದೇ ಕಾರಣಕ್ಕೂ ಹೊರಗೆ ಬಾರದಂತೆ ತಿಳುವಳಿಕೆ ನೀಡುವದರ ಜೊತೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಮುನ್ನೇಚ್ಚರಿಕೆ ಕಟ್ಟುನಿಟ್ಟಿನ ಕ್ರಮ ವಹಿಸಿರುವದು ಪ್ರಶಂಸೆಗೆ ಕಾರಣವಾಗಿದೆ.

*ಎಲ್ಲೇಲ್ಲಿ ಏಷ್ಟೇಷ್ಟು ಜನ

ವಿವಿಧ ರಾಜ್ಯಗಳಿಂದ ಆಗಮಿಸಿರುವ ವಲಸೆ ಕಾಮರ್ಿಕರ ಪೈಕಿ ಸಂಗಮೇಶ್ವರ ಹೈಸ್ಕೂಲ್ 64 ಜನ, ಮ್ಯಾಟ್ರೀಕ್ ಪೂರ್ವ ಬಾಲಕರ ವಸತಿ ನಿಲಯ 49, ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆ ಗಡಿಸೋಮನಾಳ ತಾಂಡಾ(||) 47 ಜನ, ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಬೊಳವಾಡ 6 ಜನ, ಬೊಮ್ಮನಹಳ ಶಾಲೆ 2, ಹಿರೂರ ಮುರಾಜರ್ಿ ದೇಸಾಯಿ ಶಾಲೆ 15 ಜನ, ಕುವೆಂಪು ಕಿರಿಯ ಪ್ರಾಥಮಿಕ ಶಾಲೆ ಹಿರೂರ 11 ಜನ, ಬಾಲಕರ ವಸತಿ ನಿಲಯ ತುಂಬಗಿ 1, ಸಕರ್ಾರಿ ಪ್ರಾಥಮಿಕ ಶಾಲೆ ಲಿಂಗದಳ್ಳಿ 34 ಜನ, ಸಿದ್ದಾರ್ಥ ವಸತಿ ಶಾಲೆ ಕಲಕೇರಿ 108 ಜನ, ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಹಗರಗುಂಡ 64 ಜನ, ಸಕರ್ಾರಿ ಪ್ರಾಥಮಿಕ ಶಾಲೆ ಬ.ಸಾಲವಾಡಗಿ 2, ಸಕರ್ಾರಿ ಪ್ರಾಥಮಿಕ ಶಾಲೆ ಕೊಡಗಾನೂರ 1, ಸಕರ್ಾರಿ ಪ್ರಾಥಮಿಕ ಶಾಲೆ ನೀರಲಗಿ 4, ಸಕರ್ಾರಿ ಪ್ರಾಥಮಿಕ ಶಾಲೆ ಗಡಿಸೋಮನಾಳ ತಾಂಡಾ 11, ಸಕರ್ಾರಿ ಪ್ರಾಥಮಿಕ ಶಾಲೆ ಮಿಣಜಗಿ 2, ಬಿಸಿಎಂ ವಸತಿ ನಿಲಯ ಸಾಸನೂರ 28, ಸಕರ್ಾರಿ ಪ್ರಾಥಮಿಕ ಶಾಲೆ ತುರುಕುನಗೇರಿ 40, ಸಮೂದಾಯ ಭವನ ಗಡಿಸೋಮನಾಳ 18, ಸಕರ್ಾರಿ ಪ್ರಾಥಮಿಕ ಶಾಲೆ ಹರನಾಳ 8, ಮ್ಯಾಟ್ರೀಕ್ ಪೂರ್ವ ಬಾಲಕರ ವಸತಿ ನಿಲಯ ಕೊಣ್ಣೂರ 39, ಮ್ಯಾಟ್ರೀಕ್ ಬಾಲಕರ ವಸತಿ ನಿಲಯ ತಾಳಿಕೋಟೆ 21, ಸರ್ವಜ್ಞ ವಿದ್ಯಾಪೀಠ 47, ಸ.ಹಿ.ಪ್ರಾ.ಶಾ.ಕೂಚಬಾಳ 4, ಸ.ಹಿ.ಪ್ರಾ.ಶಾ. ಶಿವಪೂರ 29, ಕನ್ನಡ ಗಂಡು ಮಕ್ಕಳ ಶಾಲೆ ಹಾಳಗುಂಡಕನಾಳ 45, ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಅಸ್ಕಿ 9, ಕನ್ನಡ ಗಂಡುಮಕ್ಕಳ ಶಾಲೆ ಬೇಕಿನಾಳ 16, ಸಕರ್ಾರಿ ಪ್ರಾಥಮಿಕ ಶಾಲೆ ಬನ್ನೇಟ್ಟಿ ಪಿಟಿ 11, ಎಸ್.ಎನ್.ಪಿ.ಪ್ರೌಢ ಶಾಲೆ ಬಿಂಜಲಭಾವಿ 25, ಅಂಗನವಾಡಿ ಕೇಂದ್ರ ತುರುಕುನಗೇರಿ 26, ಎಚ್.ಪಿ.ಎಸ್.ಬೂದಿಹಾಳ ಪಿಟಿ 13, ರಿಲಾಯನ್ಸ್ ಸ್ಕೂಲ್ ತಾಳಿಕೋಟೆ 124 ಜನ, ತಾಜಬಿ ಹಿ.ಪ್ರಾ.ಶಾ. ತಾಳಿಕೋಟೆ 147 ಜನ, ವ್ಹಿ.ಪಿ.ಎಂ.ಸ್ಕೂಲ್ ತಾಳಿಕೋಟೆ 169 ಜನ, ಜಿ.ಎಸ್.ಜಿ.ಪಿ.ಯು ಕಾಲೇಜ್ ತಾಳಿಕೋಟೆ 180 ಜನ ಹೀಗಿ ಒಟ್ಟು 1425 ಜನರನ್ನು ತಾಲೂಕಾಡಳಿತದ ಅಧಿಕಾರಿಗಳು ಕ್ವಾರಂಟೈನ್ಗೆ ಒಳಪಡಿಸಿದ್ದಾರೆ.

*ಗಂಟಲು ದ್ರವ ಮಾದರಿ ಸಂಗ್ರಹಣೆ 

      ತಾಲೂಕಿನ ವಿವಿಧಡೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಟ್ಟಿರುವ 1425 ಜನರೆಲ್ಲರದ್ದೂ ಆರೋಗ್ಯ ಇಲಾಖೆಯ ವಿಶೇಷ ತಂಡದಿಂದ 3 ದಿನಗಳಿಂದ ಗಂಟಲು ದ್ರವ ಸಂಗ್ರಹಿಸಿಕೊಳ್ಳಲಾಗುತ್ತಿದೆ ಈಗಾಗಲೇ ಒಟ್ಟು 368 ಜನರ ಗಂಟಲು ದ್ರವ ಸಂಗ್ರಹಿಸಿಕೊಳ್ಳಲಾಗಿದ್ದು ಕ್ವಾರಂಟೈನ್ನಲ್ಲಿರುವವನ್ನು ನಿತ್ಯ ತಪಾಸಣೆ ನಡೆಸಲು ಆರೋಗ್ಯ ಇಲಾಖೆಯಿಂದ 3 ತಂಡಗಳನ್ನು ರಚನೆ ಮಾಡಲಾಗಿದೆ ನಿತ್ಯ ಆರೋಗ್ಯದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಲಾಗುತ್ತಿದೆ ಎಂದು ತಾಳಿಕೋಟೆ ತಾಲೂಕಾ ಸಮೂದಾಯ ಆರೋಗ್ಯ ಕೇಂದ್ರದ ಆಡಳಿತ ವೈಧ್ಯಾಧಿಕಾರಿ ಡಾ.ಪ್ರಕಾಶ ಹುಕ್ಕೇರಿ ತಿಳಿಸಿದ್ದಾರೆ.