ವಿಜಯಪುರದಲ್ಲಿ 14 ಮಂದಿ ಹೋಂ ಕ್ವಾರಂಟೈನ್ನಲ್ಲಿ: ಜಿಲ್ಲಾಧಿಕಾರಿ

ವಿಜಯಪುರ, ಏ.4, ಇದುವರೆಗೂ ವಿದೇಶ ಹಾಗೂ ಬೇರೆ ಜಿಲ್ಲೆಗಳಿಂದ ವಿಜಯಪುರ ಜಿಲ್ಲೆಗೆ 370 ಮಂದಿ ಆಗಮಿಸಿದ್ದು, ಅವರಲ್ಲಿ 14 ಮಂದಿಯನ್ನು ಮಾತ್ರ ಹೋಂ ಕ್ವಾರೈಂಟನ್ ನಲ್ಲಿ ಇಡಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ್ ತಿಳಿಸಿದ್ದಾರೆ. ಜಿಲ್ಲೆಯ ಆಗಮಿಸಿದ ಒಟ್ಟು 50 ಮಂದಿಯ ರಕ್ತ ಮತ್ತು ಗಂಟಲು ದ್ರವಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರಲ್ಲಿ 48 ವರದಿಗಳು ನೆಗೆಟಿವ್ ಎಂದು ಬಂದಿವೆ. ಇನ್ನು ಇಬ್ಬರದ್ದು ಮಾತ್ರ ವರದಿ ಬರಬೇಕಿದೆ ಎಂದು ತಿಳಿಸಿದರು.
ಬಾಗಲಕೋಟೆಯಲ್ಲಿ ಮೃತ ವ್ಯಕ್ತಿಯೊಂದಿಗೆ ಇಬ್ಬರು ಪ್ರಾಥಮಿಕ ಸಂಪರ್ಕದಲ್ಲಿದ್ದರು. ಸೆಕೆಂಡರಿಯಾಗಿ ಆರು ಮಂದಿ ಸಂಪರ್ಕದಲ್ಲಿದ್ದರು ಅವರನ್ನು ಸಹ ಐಸೋಲೇಷನ್ನಲ್ಲಿ ಇಡಲಾಗಿದೆ ಎಂದು ಮಾಹಿತಿ ನೀಡಿದರು.ಪೊಲೀಸ್ ವರಿಷ್ಠಾಧಿಕಾರಿ ಅನುಪಮಾ ಅಗರವಾಲ್ ಮಾತನಾಡಿ, ಬಾಗಲಕೋಟೆಯಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮಗನ ಜೊತೆ ಬೆಂಗಳೂರಿನಿಂದ ಇಲಕಲ್ ವರೆಗೂ ಮುದ್ದೇಬಿಹಾಳದ ಇಬ್ಬರು ವ್ಯಕ್ತಿಗಳು ಇನ್ನೋವಾ ಕಾರ್ ನಲ್ಲಿ ಬಂದಿದ್ದರು. ಆ ಬಳಿಕ ಆ ಇಬ್ಬರು ಆರು ಜನರೊಂದಿಗೆ ಇಲಕಲ್ ನಿಂದ ಮುದ್ದೇಬಿಹಾಳಕ್ಕೆ ಬಂದಿದ್ದರು. ಅವರೆಲ್ಲರ ಆರೋಗ್ಯದ ಮೇಲೆ ನಿಗಾದಲ್ಲಿ ಇರಿಸಲಾಗಿದೆ ಎಂದು ತಿಳಿಸಿದರು. ದೆಹಲಿ ತಬ್ಲಿಗ್ ಜಮಾತ್ ಗೆ ಜಿಲ್ಲೆಯಿಂದ 240 ಜನ ಹೋಗಿದ್ದಾರೆ. ಅವರೆಲ್ಲರೂ ಬೇರೆ ಬೇರೆಯಾಗಿ ಜನವರಿ, ಫೆಬ್ರುವರಿ, ಮಾರ್ಚ್ ನಲ್ಲಿ ಹೋಗಿ ಬಂದಿದ್ದಾರೆ. ಆದರೆ ಅವರು ಹೋಗಿ ಬಂದು ಬಹಳ ದಿನ ಆಗಿರುವುದರಿಂದ ಅವರ ಬಗ್ಗೆ ಭಯ ಪಡುವ ಅಗತ್ಯವಿಲ್ಲ.  28 ದಿನಗಳ ಒಳಗಾಗಿ ದೆಹಲಿಗೆ ಹೋಗಿ ಬಂದವರು ಕೇವಲ 29 ಜನರು ಮಾತ್ರ  ಇದ್ದಾರೆ. ಅವರ ಬಗ್ಗೆ ನಿಗಾ ಇರಿಸಿದ್ದೇವೆ ಎಂದು ತಿಳಿಸಿದರು.