ದಾನಮ್ಮ ದೇವಿಯ 13ನೇ ವರ್ಷದ ಜಾತ್ರಾ ಮಹೋತ್ಸವದ
ಬ್ಯಾಡಗಿ 05: ಪಟ್ಟಣದ ಶ್ರೀ ದಾನಮ್ಮ ದೇವಿಯ 13ನೇ ವರ್ಷದ ಜಾತ್ರಾ ಮಹೋತ್ಸವದ ನಿಮಿತ್ತ ವಾಗಿ ಶ್ರೀ ಗಾನಯೋಗಿ ಮೆಲೋಡಿಸ್ ತಂಡದಿಂದ ರಸಮಂಜರಿ ಕಾರ್ಯಕ್ರಮಗಳು ಜರುಗಿ ಜನರನ್ನು ರಂಜಿಸಿದವು.ಶ್ರೀ ದಾನಮ್ಮ ದೇವಿಯ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷೆ ಮಹೇಶ್ವರಿ ಪಸಾರದ, ರಾಜು ಮೋರಿಗೇರಿ ಹಾಗೂ ಸಮಿತಿಯ ವತಿಯಿಂದ ಶ್ರೀ ಗಾನಯೋಗಿ ಮೆಲೋಡಿಸ್ ತಂಡದಸಂಗೀತ ಕಲಾವಿದರಾದ ವೀರಭದ್ರಗೌಡ ಹೊಮ್ಮರಡಿ,ಕಂಡೆಪ್ಪ ಪೂಜಾರ, ಮಂಜು, ರಂಜಿತಾ, ಅರುಂಧತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.