12ನೇ ವರ್ಷದ ಜಾತ್ರಾ ಮಹೋತ್ಸವ

ಲೋಕದರ್ಶನ ವರದಿ

ಶೇಡಬಾಳ 3: ರಾಯಬಾಗ ತಾಲೂಕಿನ ಕುಡಚಿಯ ಕಾಳಿಕಾ ದೇವಿ ಹಾಗೂ  ಜಗದ್ಗುರು ಮೌನೇಶ್ವರ ಗದ್ದುಗೆಯ 12ನೇ ವರ್ಷದ ಜಾತ್ರಾ ಮಹೋತ್ಸವ ಮಂಗಳವಾರ ದಿ. 4 ರಂದು ಜರುಗಲಿದೆ ಎಂದು ಜಾತ್ರಾ ಕಮೀಟಿಯ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

ಜಗದ್ಗುರು ಮೌನೇಶ್ವರ ಹಾಗೂ ಕಾಳಿಕಾದೇವಿ ಜೀಣರ್ೋದ್ದಾರ ಕಮೀಟಿ, ಶ್ರೀ ಕಾಳಿಕಾದೇವಿ ಮಹಿಳಾ ಮಂಡಳ, ಶ್ರೀ ಜಗದ್ಗುರು ಮೌನೇಶ್ವರ ಯುವಕ ಮಂಡಳ ಇವರ ಸಂಯುಕ್ತಾಶ್ರಯದಲ್ಲಿ ಈ ಜಾತ್ರಾ ಮಹೋತ್ಸವವು ಜರುಗಲಿವೆ.

ಮಂಗಳವಾರ ದಿ. 4 ರಂದು ಜಾತ್ರಾ ಮಹೋತ್ಸವದ ಅಂಗವಾಗಿ ಕಾಳಿಕಾ ದೇವಿ ಹಾಗೂ ಜಗದ್ಗುರು ಮೌನೇಶ್ವರ ಗದ್ದುಗೆಗೆ ಬ್ರಾಹ್ಮಿ ಮಹೂರ್ತದಲ್ಲಿ ಮಹಾಭೀಷೇಕ, ಮಂಗಳಾರತಿ, ಮಂತ್ರ ಪುಷ್ಪ, ತೀರ್ಥ ಪ್ರಸಾದ ಕಾರ್ಯಕ್ರಮಗಳು ಜರುಗಲಿವೆ. 9 ಗಂಟೆಗೆ ವಿಶ್ವಕರ್ಮ ಧ್ವಜಾರೋಹಣ ನಡೆಯಲಿದೆ. 

ಯರಗಟ್ಟಿಯ  ರಾಜರಾಜೇಶ್ವರಿ ಆಶ್ರಮದ ಪ.ಪೂ. ಗಣಪತಿ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ಜರುಗಲಿದ್ದು, ಮುಖ್ಯ ಅತಿಥಿಗಳಾಗಿ ಕುಡಚಿ ಶಾಸಕ ಪಿ.ರಾಜೀವ, ಪುರಸಭೆ ಸದಸ್ಯ ಬಾಶಾಲಾಲ ರೋಹಿಲೆ, ಮೋಹನ ಲೋಹಾರ, ಶ್ರೀಧರ ಆಲಗುಂಡಿ, ಅಶೋಕ ಸುತಾರ ಆಗಮಿಸಲಿದ್ದಾರೆ.  ಕಾಳಿಕಾ ದೇವಿಯ ಪುರೋಹಿತರಾದ ಸವದತ್ತಿಯ ಮೌನೇಶಾಚಾರ್ಯ ಶಿ. ಪಂಡಿತ, ಕುಡಚಿಯ ಅಣ್ಣಪ್ಪಾ ಸುತಾರ, ರಮೇಶ ಸುತಾರ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ. 

ಬೆಳಗ್ಗೆ 10 ಗಂಟೆಗೆ ಕಾಳಿಕಾ ದೇವಿಗೆ ಉಡಿ ತುಂಬುವ ಕಾರ್ಯಕ್ರಮ, ಪಲ್ಲಕ್ಕಿ ಉತ್ಸವ, ಕುಂಭೋತ್ಸವ, ಕೃಷ್ಣಾ ನದಿಗೆ ಹೋಗಿ ಬರುವುದು, ಮಧ್ಯಾಹ್ನ 12 ಗಂಟೆಗೆ ವೈಭವ ರವೀಂದ್ರ ಪೋತದಾರ ಇವರಿಂದ ಮಹಾಪ್ರಸಾದ ಇರುತ್ತದೆ. ಶಂಕರ ಸುತಾರ ಹಾಗೂ ಕಾಳಪ್ಪ ಸುತಾರ ಪುರವಂತರ ಹಾಗೂ ವಾದ್ಯಸೇವೆ ಜರುಗಲಿದೆ. ವಿಜಯ ಪೋತದಾರ, ವಸಂತ ಸೋನಾರ, ಸುನೀಲ ಪೋತದಾರ ಹಾಗೂ ಸಹೋದರಿಂದ ವಿವಿಧ ಸೇವಾ ಕಾರ್ಯಗಳು ಜರುಗಲಿವೆ.