ನೇತಾಜಿಕಂಡ ಶೋಷಣೆ ರಹಿತ ಸಮಾಜ ನನಸಾಗಲಿ: ಉದ್ಭಾಳ್

128th Birth Anniversary of Netaji Subhash Chandra Bose

ಬೆಳಗಾವಿ 23: "ಇಂದು ಭಾರತದಲ್ಲಿ ಯುವಕರಿಗೆ ಉನ್ನತ ವಿಚಾರಗಳ ಅವಶ್ಯಕತೆ ಇದೆ, ಮುಂದಿನ ಯುವಪೀಳಿಗೆ ಬೇರಿಲ್ಲದವರಂತಾಗುತ್ತಿದ್ದಾರೆ. ಹಾಗಾಗಿ ಇಂದಿನ ಪ್ರಸ್ತುತ ದಿನಮಾನಗಳಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್ ಅಂಥವರ ವಿಚಾರಗಳು ಯುವಕರಿಗೆ ಸ್ಪೂರ್ತಿಯಾಗಬೇಕಿದೆ. ಅವರ ವಿಚಾರಗಳನ್ನ ನಮ್ಮ ಜೀವನದಲ್ಲಿ ಸ್ವಲ್ಪವಾದರೂ ಅಳವಡಿಸಿಕೊಂಡು ಅವರ ಆದರ್ಶಗಳನ್ನ ಪಾಲಿಸಿದರೆ ನಾವು ಅವರಿಗೆ ನೀಡುವ ನಿಜವಾದ ಗೌರವ ಎಂದು ಎಐಡಿವೈಓ ರಾಜ್ಯ ಅಧ್ಯಕ್ಷರಾದ ಶರಣಪ್ಪ ಉದ್ಭಾಳ್ ಹೇಳಿದರು. 

ಇಂದು ಬೆಳಗಾವಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ 128ನೇ ಜನ್ಮ ವಾರ್ಷಿಕ ಕಾರ್ಯಕ್ರಮವನ್ನು ರಾಷ್ಟ್ರಿಯ ಸೇವಾ ಯೋಜನೆ ಹಾಗು ಎಐಡಿವೈಒ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿತ್ತು, ಕಾರ‌್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.  

ಕಾರ್ಯಕ್ರಮವನ್ನು ಮಾತನಾಡಿದ ಉದ್ದೇಶಿಸಿ ಎಐಡಿವೈಓ ಜಿಲ್ಲಾ ಸಂಚಾಲಕರು ರಾಜುಗಾಣಗಿ "ಇಂದಿನ ದೇಶದ ಪರಿಸ್ಥಿತಿಯನ್ನ ನಾವೆಲ್ಲ ಗಮನಿಸಿದಾಗ ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರ, ಸಾಂಸ್ಕೃತಿಕ ಅಧಃಪತನಗಳಂತಹ ಸಾಮಾಜಿಕ ಪಿಡುಗುಗಳನ್ನ ಯುವಕರುಎದುರಿಸುತ್ತಿದ್ದಾರೆ. ಯುವಕರಿಗೆ ಆದರ್ಶವಾಗ ಬೇಕಾಗಿರುವಂತಹ ನೇತಾಜಿ, ಭಗತ್ ಸಿಂಗ್ ರಂತಹ ವಿಚಾರಗಳನ್ನ ಇನ್ನು ಹೆಚ್ಚು ಹೆಚ್ಚು ಯುವಕರ ಮಧ್ಯೆಚರ್ಚೆ ಮಾಡಲು ಇಂತಹ ಮಹಾನ್ ವ್ಯಕ್ತಿಗಳ ದಿನಗಳು ಬಂದಾಗ ಎಐಡಿವೈಒ ಯುವಜನ ಸಂಘಟನೆ ನಿರಂತರ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ ಇಂತ ಹೋರಾಟಗಳಲ್ಲಿ ಎಲ್ಲರೂ ಕೈಜೋಡಿಸಬೇಕು" ಎಂದು ಕರೆ ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಾಸುದೇವ   ಅಪ್ಪಾಜಿಗೊಳ್ ಸರ್ ಮಾತನಾಡಿ "ಇಂದಿನ ಯುವಜನತೆ ಸಾಮಾಜಿಕ ಮಾಧ್ಯಮಗಳಿಂದಾಗಿ ದಾರಿತಪ್ಪುತ್ತಿದೆ. ವಿದ್ಯಾರ್ಥಿಯಜನರಿಗೆ ನಿಜವಾದ ಆದರ್ಶಗಳ ಕೊರತೆ ಎದ್ದು ಕಾಣುತ್ತಿದೆ. ಇಂಥ ಸಂದರ್ಭದಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್‌ಅಂತ ಆದರ್ಶಗಳು ವಿದ್ಯಾರ್ಥಿಗಳಿಗೆ ಬಹಳ ಅವಶ್ಯಕತೆಇದ.ೆಅವರತಾತ್ವಿಕ ಮೌಲ್ಯಗಳನ್ನು ಹೋರಾಟದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು" ಅವರು ಕರೆ ನೀಡಿದರು. 

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಕಿರಣ್‌ಕುಮಾರ್ ಸರ್‌ಕಾರ‌್ಯಕ್ರಮ ನಡೆಸಿಕೊಟ್ಟರು, ವಿದ್ಯಾಧರ್ ಲಾಟ್ಕರ್ ಸರ್, ರಾಜಕುಮಾರ ಪಾಟೀಲ ಸರ್‌ಅವರು ಹಾಗೂ ಎಐಡಿವೈಓ ಸಂಘಟಕಿರಾಧಿಕಾ ಭಜಂತ್ರಿ, ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.