ಕೊವಿದ್‍-19 ಸೋಂಕಿಗೆ ಇರಾನ್‍ನಲ್ಲಿ ಒಂದೇ ದಿನ 127 ಸಾವು: ಒಟ್ಟು ಸಂಖ್ಯೆ 1812ಕ್ಕೆ ಏರಿಕೆ

ಟೆಹ್ರಾನ್, ಮಾರ್ಚ್ 23, ಇರಾನ್‍ನಲ್ಲಿ ಕಳೆದ 24 ತಾಸಿನಲ್ಲಿ ಕೊರೊನವೈರಸ್‍ನಿಂದ 127 ಹೊಸ ಸಾವುಗಳು ದೃಢಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 1,812 ಕ್ಕೆ ತಲುಪಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಭಾನುವಾರದಿಂದ 1,411 ಹೊಸ ಸೋಂಕು ಪೀಡಿತ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿಗೆ ಸಂಬಂಧಿಸಿದಂತೆ 36 ದಶಲಕ್ಷಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿ ಕಿಯಾನೌಶ್ ಜಹಾನ್ಪುರ್ ತಿಳಿಸಿದ್ದಾರೆ. ಮಾರಣಾಂತಿಕ ವೈರಸ್‍ ಗೆ ತುತ್ತಾಗಿರುವ ಇರಾನ್‍ ಹೆಚ್ಚು ಹಾನಿಗೊಳಗಾದ ದೇಶಗಳಲ್ಲಿ ಒಂದಾಗಿದೆ. ಕೊವಿದ್‍-19 ಇದುವರೆಗೆ ವಿಶ್ವದಾದ್ಯಂತ ಸುಮಾರು 15,000 ಜೀವಗಳನ್ನು ಬಲಿ ತೆಗೆದುಕೊಂಡಿದೆ. ವಿಶ್ವದಾದ್ಯಂತ ಸುಮಾರು 3.5 ಲಕ್ಷ ಜನರಿಗೆ ಮಾರಕ ಸೋಂಕು ತಗುಲಿದೆ. ಆದರೂ,  ಸುಮಾರು ಒಂದು ಲಕ್ಷ ಜನರು ಚಿಕಿತ್ಸೆ ಪಡೆದು ಸಂಪೂರ್ಣ  ಗುಣಮುಖರಾಗಿದ್ದಾರೆ.