ರಾಗಸಖೀ ಸಂಗೀತ ವಿದ್ಯಾಲಯದ 11ನೇ ವಾರ್ಷಿಕೋತ್ಸವ ಹಾಗೂ ಆರಾಧನೆ
11th Anniversary and Worship of Ragasakhi Sangeet Vidyalaya
ಹುಬ್ಬಳ್ಳಿ 17 : ನಗರದ ವಿದ್ಯಾನಗರದ ರಾಗಸಖೀ ಸಂಗೀತ ವಿದ್ಯಾಲಯದ ವತಿಯಿಂದ ಪುರಂದರ ದಾಸರು ಹಾಗೂ ತ್ಯಾಗರಾಜರ ಆರಾಧನೆ ಹಾಗೂ ವಿದ್ಯಾಲಯದ 11ನೇ ವಾರ್ಷಿಕೋತ್ಸವ ಕಾರ್ಯಕ್ರಮವು ಪುಷ್ಯ ಮಾಸದ ಬಹುಳ ಅಮಾವಾಸ್ಯೆ ದಿನಾಂಕ 18 ಜನವರಿ 2026, ರವಿವಾರ ಸಂಜೆ 5:30 ರಿಂದ 9:00 ಗಂಟೆಯವರೆಗೆ ಉತ್ತರಾದಿ ಮಠ, ವಿದ್ಯಾನಗರ, ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದೆ. ಉತ್ತರಾದಿಮಠದ ವ್ಯವಸ್ಥಾಪಕರಾದ ವಿದ್ವಾನ್ ಜಯತೀರ್ಥಾಚಾರ್ಯ ಹುಂಡೇಕರ ಅವರು ಉದ್ಘಾಟಿಸಲಿದ್ದು, ಡಾ. ಮಲ್ಲಿಕಾರ್ಜುನ ಮನ್ಸೂರ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ, ತಬಲಾ ವಾದಕ ಡಾ. ನಾಗಲಿಂಗ ಮುರಗಿ ಅಧ್ಯಕ್ಷತೆ ವಹಿಸಲಿದ್ದು, ವಿದುಷಿ ಹೇಮಲತಾ ಸಂಪತ್, ಅಧ್ಯಕ್ಷರು, ಸುನಾದ ಗಾನಸುಧಾ, ಹುಬ್ಬಳ್ಳಿ. ವಿದುಷಿ ಸುಜಾತಾ ರಾಜಗೋಪಾಲ, ಹಿರಿಯ ನೃತ್ಯಗುರುಗಳು,ಹುಬ್ಬಳ್ಳಿ, ಲತಾ ಜಮಖಂಡಿ, ಕಾರ್ಯದರ್ಶಿಗಳು, ಸುನಾದ ಗಾನಸುಧಾ, ಹುಬ್ಬಳ್ಳಿ, ಮತ್ತು ವಿದುಷಿ ಶಶಿಕಲಾ ದಾನಿ, ಖ್ಯಾತ ಜಲತರಂಗ ಕಲಾವಿದರು, ಹುಬ್ಬಳ್ಳಿ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ರಾಗಸಖೀ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ ಇವರೊಂದಿಗೆ ವಯೊಲಿನ್ ನಲ್ಲಿ ಪಂಡಿತ ಶಂಕರ ಕಬಾಡಿ, ಹಾಗೂ ಮೃದಂಗಂನಲ್ಲಿ ವಿದ್ವಾನ ರಾಜಕುಮಾರ್ ಅವರು ಸಹಕಾರ ನೀಡಲಿದ್ದಾರೆ. ಸಂಗೀತಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ರಾಗಸಖೀ ಸಂಗೀತ ವಿದ್ಯಾಲಯದ ಸಂಸ್ಥಾಪಕರಾದ ವಿದುಷಿ ಸುಷ್ಮಾ ಹುಬ್ಳೀಕರ್ ವಿನಂತಿಸಿದ್ದಾರೆ. "
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 