ಶಿವಕುಮಾರ ಸ್ವಾಮಿಗಳ 118ನೇ ಜಯಂತಿ: ತಂಪಾದ ಪಾನಿ ವಿತರಣೆ

118th birth anniversary of Shivakumara Swami: Distribution of cold water

ಲೋಕದರ್ಶನ ವರದಿ 

ಶಿವಕುಮಾರ ಸ್ವಾಮಿಗಳ 118ನೇ ಜಯಂತಿ: ತಂಪಾದ ಪಾನಿ ವಿತರಣೆ 

ಕಂಪ್ಲಿ 02: ಸ್ಥಳೀಯ ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ದಿವಂಗತ ಸಜ್ಜನರ ವೀರಭದ್ರ​‍್ಪ ಕುಟುಂಬದ ಪ್ರಾಯೋಜಕತ್ವದಲ್ಲಿ ಜೆಸಿಐ ಕಂಪ್ಲಿ ಸೋನಾ ಘಟಕವು ನಡೆದಾಡುವ ದೇವರು ಲಿಂಗೈಕ್ಯ ಶಿವಕುಮಾರ ಸ್ವಾಮಿಗಳ 118ನೇ ಜಯಂತಿಯನ್ನು  ಆಚರಣೆ ಮಾಡಿ ಸಾರ್ವಜನಿಕರಿಗೆ ತಂಪಾದ ಪಾನಿಯಾ, ಮಜ್ಜಿಗೆ ವಿತರಿಸಿದರು. ಪೇಟೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಲಿಂಗೈಕ್ಯ ಶಿವಕುಮಾರಸ್ವಾಮಿಗಳ ಭಾವಚಿತ್ರಕ್ಕೆ ಸಿದ್ದರಾಮಶಾಸ್ತ್ರಿ ನೇತೃತ್ವದಲ್ಲಿ ಸಜ್ಜನರ ಮಂಜುನಾಥ್ ಮತ್ತು ಶರಣಪ್ಪ,ವಿಶ್ವನಾಥ್ ಜೆಸಿಐ ಕಂಪ್ಲಿ ಸೋನಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ಸೇರಿದಂತೆ ಇತರರು ವಿಶೇಷ ಪೂಜೆಯನ್ನು ಸಲ್ಲಿಸಿ ಪುಷ​‍್ಾರೆ್ಪಣ ಮಾಡಿದರು. ನಂತರ ಮಹಾಮಂಗಳಾರತಿ ಮಾಡಿ ಸ್ವಾಮೀಜಿಗಳ ಬಗ್ಗೆ ಭಾಗವಹಿಸಿದ್ದ ಗಣ್ಯರು ಮಾತನಾಡಿ ಅಕ್ಷರ, ಅನ್ನ, ವಸತಿ ತ್ರಿವಿಧ ದಾಸೋಹದ  ಮೂಲಕ ಅರಿವಿನ ಜ್ಯೋತಿ ಬೆಳಗಿದ ತ್ರಿವಿದ ದಾಸೋಹಿ, ಕಾಯಕಯೋಗಿ, ಶತಮಾನದ ಸಂತ,ಶತಾಯುಷಿಗಳಾಗಿದ್ದ ನಡೆದಾಡುವ ದೇವರೆಂದೇ ಖ್ಯಾತಿಯನ್ನು ಗಳಿಸಿದ್ದ ಸ್ವಾಮೀಜಿಗಳ ಜೀವನ ಪ್ರತಿಯೊಬ್ಬರಿಗೂ ಆದರ್ಶವಾಗಿದ್ದು, ಅವರ ಜೀವನದ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದರು. ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಹಾಗೂ ಪಟ್ಟಣಕ್ಕೆ ಆಗಮಿಸಿದ ಸಾರ್ವಜನಿಕರಿಗೆ ಉಚಿತವಾಗಿ ಪ್ರಸಾದ, ತಂಪು ಪಾನೀಯಾ,ಮಜ್ಜಿಗೆ ವಿತರಿಸುವ ಮೂಲಕ  ಜಯಂತಿಯನ್ನು ಆಚರಿಸಿದರು. ಕಾರ್ಯಕ್ರಮದಲ್ಲಿ ಜೆಸಿಐ ಕಂಪ್ಲಿ ಸೋನಾ ಘಟಕದ ಅಧ್ಯಕ್ಷ ಜೆಸಿ ಬಿ.ರಸೂಲ್, ವಲಯ 24 ನಿಕಟಪೂರ್ವ ಉಪಾಧ್ಯಕ್ಷ ಸಂತೋಷ ಕೊಟ್ರ​‍್ಪ ಸೋಗಿ, ಪೂರ್ವಾಧ್ಯಕ್ಷರುಗಳಾದ ಜಿ.ಚಂದ್ರಶೇಖರಗೌಡ, ಬಡಿಗೇರ್ ಜಿಲಾನ್ ಸಾಬ್, ಸದಸ್ಯರಾದ ಇಂತಿಯಾಜ್,ಡಿ.ಭರತ್, ಡಾ.ಭರತ್ ಪದ್ಮಸಾಲಿ, ಎಸ್‌.ಎಂ.ಗುರು, ಮನೋಜಕುಮಾರ್ ದಾನಪ್ಪ, ಕನಕರಾಯ, ಡಿ.ಇಸ್ಮಾಯಿಲ್,ಯೂಸುಪ್,ಪುರಸಭೆ ಆರೋಗ್ಯ ನೀರೀಕ್ಷಕ ಪ್ರಕಾಶಬಾಬು,ಎಸ್‌.ಡಿ.ಬಸವರಾಜ್   ಜೆಸಿಐ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಸಜ್ಜನರ ಕುಟುಂಬದ ಸದಸ್ಯರು ಸೇರಿದಂತೆ ಪಟ್ಟಣದ ವಿವಿಧ ಸಮಾಜಗಳ ಮುಖಂಡರು ಭಾಗವಹಿಸಿದ್ದರು.