118 ನೇ ಡಾ.ಬಾಬು ಜನಜೀವನರಾಮ್ ಜಯಂತಿ ಆಚರಣೆ
ಹಾವೇರಿ 06: ಹಸಿರು ಕ್ರಾಂತಿ ಹರಿಕಾರು,ದಲಿತ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸಿದ ಡಾ. ಬಾಬು ಜಗಜೀವನರಾಮ್ ಅವರ ಸೇವೆ ದೇಶದ ಜನತೆಯು ಸದಾ ಸ್ಮರಿಸಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಹೇಳಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ವತಿಯಿಂದ 118 ನೇ ಡಾ.ಬಾಬು ಜನಜೀವನರಾಮ್ ಅವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ.ಬಾಬು ಜಗಜೀವನರಾಮ್ ರಾಜಕೀಯ ಜೀವನ ಚರಿತ್ರೆಯಲ್ಲಿ ದಾಖಲು ಮಾಡುವಂತದಾಗಿದ್ದು,ಆಡು ಮುಟ್ಟದ ಸೊಪ್ಪಿಲ್ಲ ಜಗಜೀವನರಾಂ ಮುಟ್ಟದ ಖಾತೆಗಳೆ ಇಲ್ಲ.ಈ ದೇಶದ ಸ್ವಾತಂತ್ರ್ಯ ಭಾರತದಲ್ಲಿ ಹೆಚ್ಚು ಖಾತೆಗಳನ್ನು ದಕ್ಷ ಪ್ರಾಮಾಣಿಕತೆ ಉತ್ತಮ ಗುಣಮಟ್ಟದ ಆಡಳಿತ ನೀಡಿದ ಕಿರ್ತಿಗೆ ಏಕೈಕ ವ್ಯಕ್ತಿತ್ವ ಬಾಬುಜಿ ಅವರದಾಗಿದೆ. ಕಾರ್ಮಿಕ ಖಾತೆಶೋಷಿತರ ಬದುಕಿನ ಆಶಾಕಿರಣರಾದರೂಸಂಪರ್ಕ ಖಾತೆ ಅದನ್ನು ರಾಷ್ಟ್ರೀಕರಣ ಮಾಡಿ ಜನಸಾಮಾನ್ಯರಿಗೂ ಎಲ್ಲರಿಗೂ ಸಮಾನತೆಯ ಕಲ್ಪನೆಯನ್ನು ಕಟ್ಟಿಕೊಟ್ಟರು. ಈ ದೇಶದಲ್ಲಿ ಡಾ.ಬಾಬು ಜೀವನರಾಮ್ ಅವರು ಉಪಪ್ರಧಾನಿಯಾಗಿದ್ದು ಇತಿಹಾಸ ನೆನಪು ಮಾಡುತ್ತಿದೆ.ಕೃಷಿ ಸಚಿವರಾದರಾಗಿ ಭೂ ಸುಧಾರಣೆ ತರಲು ಯತ್ನಿಸಿದ ವ್ಯಕ್ತಿ ಹಸಿದ ದೇಶಕ್ಕೆ ಹಸಿರು ನೀಡಲು ಮುಂದಾದರು ಎಂದು ಅವರ ಜೀವನದ ಬಗ್ಗೆ ಉಡಚಪ್ಪ ಮಾಳಗಿ ಹೇಳಿದರು.
ಕಲ್ಯಾಣ ಸಮಿತಿಯ ಜಿಲ್ಲಾಧ್ಯಕ್ಷರಾದ ಮಂಜಪ್ಪ ಮರೋಳ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ಹೆಡಿಗೊಂಡ,ಶೆಟ್ಟಿ ವಿಭೂತಿ, ಜಗದೀಶ ಹರಿಜನ, ಬಸವಣ್ಣೆಪ್ಪ ಅಳ್ಳಳ್ಳಿ,ಹನಮಂತ ಹೌಂಶಿ,ಹನುಮಂತಪ್ಪ ಸಿ ಡಿ,ಮಹಿಳಾ ಘಟಕದ ಅಧ್ಯಕ್ಷರಾದ ರೇಣುಕಾ ಬಡಕ್ಕಣ್ಣನವರ,ಕಲಾ ತಂಡದ ಜಿಲ್ಲಾಧ್ಯಕ್ಷರಾದ ಬಸವರಾಜ ಕಾಳಿ, ಯಲ್ಲಮ್ಮ ಕೋಪುರ , ಗೀತಾ ಕಡೇಮನಿ,ಶ್ರೀಮತಿ ಕನ್ನವ್ವ ಬಿಲ್ಲಣ್ಣನವರ,ಸುಮಂಗಲಾ ಹರಿಜನ,ಶ್ರೀಮತಿ ನೇತ್ರಾ ದೊಡ್ಡಮನಿ,ಶ್ರೀಮತಿ ಸರೋಜವ್ವ ಹರಿಜನ,ಅನ್ನಪೂರ್ಣ ಹರಕೇರಿ,ಮಂಜು ದೊಡ್ಡಮರಿಯಮ್ಮನವರ,ಹನುಮಂತಪ್ಪ ಹಲಗೇರಿ,ಮಂಜು ಬೆಳವಿಗಿ,ಪರಶುರಾಮ ಹಲಗೇರಿ,ನವೀನ ಸಿದ್ದಣ್ಣನವರ ಸೇರಿದಂತೆ ಅನೇಕರಿದ್ದರು.