116 ಡೆಂಗಿ ಸ್ಯಾಂಪಲ್ ಪರಿಶೀಲನೆ

ಬೆಳಗಾವಿ, ಮೇ 20: ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೆ.20 ರಂದು ಜಿಲ್ಲಾಧಿಕಾರಿ ಕಾಯರ್ಾಲಯದಲ್ಲಿ ಜಿಲ್ಲಾ ಆರೋಗ್ಯ ಮಿಶನ್ ಸಭೆ ಜರುಗಿತು.

ಡಾ. ಎಂ.ಎಸ್.ಪಲ್ಲೇದ ಅವರು ಮಾತನಾಡಿ ಇಲ್ಲಿಯವರೆಗೆ 116 ಡೆಂಗಿ ಸ್ಯಾಂಪಲ ಪರಿಶೀಲಿಸಿ 5 ಖಚಿತ ಪಟ್ಟ ಬಗ್ಗೆ  ಮಾಹಿತಿ ತಿಳಿಸಿದರು.

ಮುಂಚಿತವಾಗಿ ಹಾಗೂ ಮುಂಗಾರು ಅವಧಿಯಲ್ಲಿ ಡೆಂಗಿ ಪ್ರಕರಣ ಹೆಚ್ಚಾಗುವ ಸಂಭವವಿದ್ದು ಮಾನ್ಯ ಜಿಲ್ಲಾಧಿಕಾರಿಯವರು ಸಾಂಕ್ರಾಮಿಕ ರೋಗಗಳ ತಡೆ ಹಾಗೂ ಪರಿಸರ ಸ್ವಚ್ಚತೆ ಬಗ್ಗೆ ಕ್ರಮ ವಹಿಸಲು ಸೂಚಿಸಿದ್ದು, ನಗರಾಭಿವೃದ್ಧಿ ಕೋಶದ ಅಧಿಕಾರಿಯವರ ನೀರಿನ ಪೈಪುಗಳು, ಗಟಾರು ಹಾಗೂ ಪರಿಸರ ಸ್ವಚ್ಚತೆ ಕಾಯ್ದುಕೊಳ್ಳಲು ಸೂಚಿಸಿದರು. 

ಸಮಯದಲ್ಲಿ ಡೆಂಗಿ ಜಾಗೃತಿ ಕುರಿತು ಪೊಸ್ಟರಗಳನ್ನು ಬಿಡುಗಡೆಗೊಳಿಸಿ ಜನರಲ್ಲಿ ಜಾಗೃತಿ ಮೂಡಿಸಲು ಸೂಚಿಸಿದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ನಿದರ್ೇಶಕರು ಬಿಮ್ಸ, ಜಿಲ್ಲಾ ಶಸ್ತ್ರ ಚಿಕಿತ್ಸಕರು ಬಿಮ್ಸ, ಕಾರ್ಯಕ್ರಮ ಅಧಿಕಾರಿಗಳು ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳು 

ಭಾಗವಹಿಸಿದ್ದರು.