ಲಾಕ್‌ಡೌನ್‌ ಸಂದರ್ಭದಲ್ಲಿ ರೈಲ್ವೆ ಇಲಾಖೆಯಿಂದ 1150 ಟನ್‌ ಔಷಧ ಸಾಗಾಟ

ನವದೆಹಲಿ, ಏಪ್ರಿಲ್ 19, ಕೋವಿಡ್‌-19 ಕಾರಣದಿಂದಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ  ವೈದ್ಯಕೀಯ ವಸ್ತುಗಳ ತಡೆರಹಿತ ಸಾರಿಗೆಯನ್ನು ಖಾತರಿಪಡಿಸಲು ಭಾರತೀಯ ರೈಲ್ವೆ 1150  ಟನ್ ವೈದ್ಯಕೀಯ ವಸ್ತುಗಳನ್ನು ದೇಶಾದ್ಯಂತ ಲಾಕ್ ಡೌನ್ ಸಮಯದಲ್ಲಿ ಸಾಗಿಸಿದೆ.ಏಪ್ರಿಲ್ 18ಂದು ಭಾರತೀಯ ರೈಲ್ವೆ 1150 ಟನ್ ವೈದ್ಯಕೀಯ ವಸ್ತುಗಳನ್ನು ದೇಶದ ವಿವಿಧ ಭಾಗಗಳಲ್ಲಿ  ಸಾಗಿಸಿದೆ ಎಂದು ರೈಲ್ವೆ ಸಚಿವಾಲಯ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ.ದೇಶದಲ್ಲಿ ಕೊರೋನಾ  ವೈರಸ್‌ನ ಸವಾಲುಗಳು ಮತ್ತು ದುಷ್ಪರಿಣಾಮಗಳನ್ನು ನಿರ್ವಹಿಸುವಲ್ಲಿ ಸರ್ಕಾರದ  ಪ್ರಯತ್ನಗಳನ್ನು ಬಲಪಡಿಸಲು ಭಾರತೀಯ ರೈಲ್ವೆ ತನ್ನ ಪಾರ್ಸೆಲ್ ಸೇವೆಗಳ ಮೂಲಕ  ಔಷಧಿಗಳು, ಮುಖಗವಸುಗಳು, ಆಸ್ಪತ್ರೆ ವಸ್ತುಗಳು ಮತ್ತು ಇತರ ವೈದ್ಯಕೀಯ  ಸರಕುಗಳನ್ನು ತಲುಪಿಸುತ್ತಿದೆ.ಬಿಕ್ಕಟ್ಟಿನ ಸಮಯದಲ್ಲಿ ಭಾರತೀಯ ರೈಲ್ವೆ ಮಾನವ ಜೀವನಕ್ಕೆ ನೆರವಾಗುತ್ತಿದೆ.ಇತ್ತೀಚೆಗೆ, ಅನಾರೋಗ್ಯ ಪೀಡಿತ ಮಗುವಿಗೆ ಒಂಟೆಯ ಹಾಲು ಬೇಕಾದಾಗ ಅವರ ಪೋಷಕರು
ಸಾಮಾಜಿಕ ಮಾಧ್ಯಮದಲ್ಲಿ ಸಹಾಯ ಕೋರಿದ್ದು. ಆಗ ಸ್ಕಿಮ್ಡ್‌ ಒಂಟೆ ಹಾಲನ್ನು ಪಾರ್ಸೆಲ್ ರೈಲು ಮೂಲಕ  ಅಜ್ಮೀರ್‌ನಿಂದ ಮುಂಬೈಗೆ ರೈಲ್ವೆ ಇಲಾಖೆ ಸಾಗಿಸಿದೆ.  ಅದೇ ರೀತಿ, ಅಜ್ಮೀರ್‌ನಲ್ಲಿರುವ ಮತ್ತೊಂದು ಮಗು ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದು, ಅವರ ಔಷಧಿಗಳ ಸಂಗ್ರಹ ಮುಗಿದ ಕಾರಣ ಮಗು ಸಂಕಷ್ಟದಲ್ಲಿತ್ತು. ಅವರ ಸಂಬಂಧಿಕರು ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಿದರು. ಅಹಮದಾಬಾದ್‌ನಿಂದ ಅಜ್ಮೀರ್‌ಗೆ ಪಾರ್ಸೆಲ್ ರೈಲಿನ ಮೂಲಕ ಔಷಧಿಗಳನ್ನು ಸಾಗಿಸಲಾಯಿತು. ಇಂತಹ ಅನೇಕ ಉದಾಹರಣೆಗಳು ರೈಲ್ವೆ ಇಲಾಖೆಯ ಸೇವೆಯಲ್ಲಿವೆ.