ಹಾವೇರಿ: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ವಿವಿಧ ಅಧಿಕಾರಿಗಳನ್ನೊಳಗೊಂಡ ತಂಡ ಇತ್ತೀಚೆಗೆ ಗುತ್ತಲ ಪಟ್ಟಣದ 11 ಅಂಗಡಿಗಳ ಮೇಲೆ ದಾಳಿ ನಡೆಸಿ ಕೋಟ್ಪಾ ಕಾಯ್ದೆ-2003ರನ್ನು ಉಲ್ಲಂಘಿಸಿ ತಂಬಾಕು ಉತ್ಪನ್ನಗಳ ಮಾರಾಟದಲ್ಲಿ ತೊಡಗಿದವರಿಂದ ತಿಳುವಳಿಕೆ ನೋಡೀಸ್ ನೀಡಿ ರೂ.1000 ದಂಡ ವಸೂಲಿ ಮಾಡಲಾಗಿದೆ.
ಕಾಯರ್ಾಚರಣೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಸಲಹೆಗಾರರಾದ ಡಾ.ಸಂತೋಷ ವಿ.ದಡ್ಡಿ ಹಾಗೂ ದಾದಾಪೀರ ಹುಲಿಕಟ್ಟಿ, ಪೊಲೀಸ್ ನಿರೀಕ್ಷಕ ಮೋಹನ ಸೊರಟೂರ, ಆಹಾರ ಸುರಕ್ಷತಾ ಇಲಾಖೆಯ ಪಿ.ಎನ್.ಪಾಟೀಲ. ಆರೋಗ್ಯ ಇಲಾಖೆಯ ಮಾಲತೇಶ ಪಿ., ಸಿ.ಎನ್.ಹಿತ್ತಲಮನಿ, ಗುತ್ತಲ ಪಟ್ಟಣ ಪಂಚಾಯತಿ ಬಿ.ಎಂ.ಗುಡ್ಡಣ್ಣನವರ ಇತರರು ಉಪಸ್ಥಿತರಿದ್ದರು.