ರಾಜಸ್ಥಾನದಲ್ಲಿ ಟ್ರಕ್-ಬಸ್ ಮುಖಾಮುಖಿ ಡಿಕ್ಕಿ- 11 ಮಂದಿ ಸಾವು

ಬಿಕನೇರ್, ರಾಜಸ್ಥಾನ ನ 18 :       ಜಿಲ್ಲೆಯಲ್ಲಿ ಸೋಮವಾರ ಬಸ್ ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ  11 ಮಂದಿ ಸಾವನ್ನಪ್ಪಿದ್ದು, ಇತರ 28 ಮಂದಿ ಗಾಯಗೊಂಡಿದ್ದಾರೆ.    ಖಾಸಗಿ ಸ್ಲೀಪರ್ ಬಸ್ ಬಿಕನೇರ್ ನಿಂದ ಜೈಪುರಕ್ಕೆ ತೆರಳುತ್ತಿದ್ದ ವೇಳೆ ಜಂಜೂ ಬಳಿ ರಾಷ್ಟ್ರೀಯ ಹೆದ್ದಾರಿ-11 ರಲ್ಲಿ ಬೆಳಿಗ್ಗೆ 11 ಗಂಟೆಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಕ್ಕಿಯಾದ ತಕ್ಷಣವೇ ಬಸ್ಗೆ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳದಲ್ಲೇ 11 ಮಂದಿ ಸಾವನ್ನಪ್ಪಿದ್ದಾರೆ. ಇತರ 28 ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.    ಗ್ರಾಮಸ್ಥರ ಸಹಾಯದಿಂದ ಪೊಲೀಸರು ನತದೃಷ್ಟರನ್ನು ಬಸ್ನಿಂದ ಹೊರಗೆಳೆದು ಪಿಎಂಬಿ ಆಸ್ಪತ್ರೆಗೆ ದಾಖಲಿಸಿದ್ದಾರೆ.   ಗಾಯಗೊಂಡವರ ಪೈಕಿ 17 ಜನರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.    ಮೃತರಲ್ಲಿ ಒಂಬತ್ತು ಮಂದಿಯನ್ನು ಗುರುತಿಸಲಾಗಿದೆ.      ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಪಘಾತವನ್ನು 'ಅತ್ಯಂತ ದುರದೃಷ್ಟಕರ' ಎಂದು ಹೇಳಿದ್ದಾರೆ. ಮೃತರ ಕುಟುಂಬ ಸದಸ್ಯರಿಗೆ ದೇವರು ನೋವು  ಭರಿಸುವ ಶಕ್ತಿ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.