11 ದಿನಕ್ಕೆ ಕಾಲಿಟ್ಟ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ನಡೆಸುತ್ತಿರುವ ಧರಣಿ

11-day sit-in for Chikkodi separate district

ಮಾಂಜರಿ 19: ಚಿಕ್ಕೋಡಿ  ಪ್ರತ್ಯೇಕ ಜಿಲ್ಲೆ ಬೇಡಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ 11 ನೇ ದಿನಕ್ಕೆ ಕಾಲಿಟ್ಟಿದೆ, ಹೋರಾಟಗಾರರು ಸಹನೆಯನ್ನು ಕಳೆದುಕೊಂಡಿದ್ದಾರೆ, ಮುಂಬರುವ ದಿನಗಳಲ್ಲಿ ಹೋರಾಟ ಯಾವ ರೂಪ ಪಡೆಯಬಹುದು ಎಂಬುದನ್ನು ಕಾಯ್ದು ನೋಡಬೇಕಾಗಿದೆ. 

ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಸಂಜು ಬಡಿಗೇರ, 25 ವರ್ಷಗಳ ನಮ್ಮ ಹೋರಾಟಕ್ಕೆ ಕವಡೆ ಕಾಸಿನ ಬೆಲೆ ಸಿಕ್ಕಿಲ್ಲ, ಚುನಾವಣೆಯ ಪೂರ್ವದಲ್ಲಿ ಸುಳ್ಳು ಹೇಳಿ ವೋಟು ಪಡೆಯುತ್ತಾರೆ, ಗೆದ್ದ ಮೇಲೆ ಹಳೆಯದನ್ನು ಮರೆತು ಬಿಡುತ್ತಾರೆ, ಇಂತಹ ಜನಪ್ರತಿನಿಧಿಗಳನ್ನು ಪಡೆದ ಜನರು ಅಭಿವೃದ್ಧಿ ಕಾಣದೇ ಹೈರಾನಾಗಿದ್ದಾರೆ, ಚಿಕ್ಕೋಡಿ ಶಾಸಕರು ಚುನಾವಣೆ ಪೂರ್ವದಲ್ಲಿ ಚಿಕ್ಕೋಡಿ ಜಿಲ್ಲೆ ಮಾಡುತ್ತೇವೆ ಎಂದು ಸುಳ್ಳು ಹೇಳಿದ್ದಾರೆ, ಸುಳ್ಳು ಹೇಳುವುದನ್ನು ನಿಲ್ಲಿಸಬೇಕು, ಎಂದು ಅಕ್ರೋಶದ ಮಾತುಗಳನ್ನು ಆಡಿದರು. 

ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಜಿಲ್ಲೆಗಾಗಿ ಹೋರಾಟ ಮಾಡುತ್ತ ದತ್ತು ಹಕ್ಕ್ಯಾಗೋಳ, ಬಸವಣ್ಣಿ ಸಂಗಪ್ಪಗೋಳ ಮತ್ತು ಅಲ್ಲಮಪ್ರಭು ಶ್ರೀಗಳು ಇಹಲೋಕ ತೈಜಿಸಿದ್ದಾರೆ, ಇವರಿಗೆ ಇನ್ನೆಷ್ಟು ಬಲಿಗಳು ಬೇಕು ತಿಳಿತಾ ಇಲ್ಲಾ, 11 ದಿನಗಳ ಕಾಲ ನಡೆದ ಧರಣಿ ಸತ್ಯಾಗ್ರಹವನ್ನು ಚಿಕ್ಕೋಡಿ ಶಾಸಕರಾದ ಗಣೇಶ ಹುಕ್ಕೇರಿ ಅವರು ಹನಿಕೆ ಹಾಕಿಯೂ ನೋಡಲಿಲ್ಲ, ಇದು ಹೋರಾಟಗಾರರ ಮನಸ್ಸಿಗೆ ನೋವು ಉಂಟು ಮಾಡಿದೆ, ನಮ್ಮ ಹೋರಾಟ ಯಾವುದೇ ಕಾರಣಕ್ಕೆ ನಿಲ್ಲುವುದಿಲ್ಲ ಸತತ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು. 

ಈ ಸಂಧರ್ಭದಲ್ಲಿ ಶ್ರೀಕಾಂತ ಅಸೋದೆ, ಅಪ್ಪಾಸಾಹೇಬ ಹಿರೆಕೋಡಿ, ದುರದುಂಡೇಶ್ವರ ಬಡಿಗೇರ, ದಯಾನಂದ ಮಾಂಜರೇಕರ, ಅಮೂಲ ಮಾಳಿ, ರಮೇಶ ಡಂಗೇರ, ದಾದಾ ಮಗದುಮ್, ಮೋಹನ ಪಾಟೀಲ, ಬಿಜೆಪಿ ಓಬಿಸಿ ಜಿಲ್ಲಾ ಘಟಕದ ಅಧ್ಯಕ್ಷರಾದ ಭೀಮಸಿ ಬನಶಂಕರಿ, ಸಾಬಣ್ಣಾ ಹಿಟ್ಟಣಗಿ, ಸಚೀನ ದೊಡ್ಡಮನಿ ಹಾಗೂ ಹಲವಾರು ಹೋರಾಟಗಾರರು ಉಪಸ್ಥಿತರಿದ್ದರು.