ಸಿಯೋಲ್, ಮೇ 25, ದಕ್ಷಿಣ ಕೊರಿಯಾ ದಲ್ಲಿ ಹೊಸದಾಗಿ 16 ಕರೋನ ಪ್ರಕರಣಗಳು ದಾಖಲಾಗಿದ್ದು, ಈವರೆಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11,206 ಕ್ಕೆ ಏರಿಕೆಯಾಗಿದೆ. ನಾಲ್ಕು ದಿನಗಳಲ್ಲಿ ದೈನಂದಿನ ಪ್ರಕರಣಗಳು 20 ಕ್ಕಿಂತ ಕಡಿಮೆಯಾಗಿದೆ. ಹೊಸ ಪ್ರಕರಣಗಳಲ್ಲಿ ಮೂರು ವಿದೇಶಗಳಿಂದ ಬಂದಿರುವ ಆಮದು ಪ್ರಕರಣಗಳಾಗಿದೆ. ಇನ್ನೂ ಒಂದು ಸಾವು ದೃ ಡಪಡಟ್ಟಿದ್ದು , ಸಾವಿನ ಸಂಖ್ಯೆ 267 ಕ್ಕೆ ತಲುಪಿದೆ. ಒಟ್ಟು ಸಾವಿನ ಪ್ರಮಾಣವು ಶೇಕಡಾ 2.38 ರಷ್ಟಿದೆ.ಪೂರ್ಣವಾಗಿ ಚೇತರಿಸಿಕೊಂಡ ನಂತರ ಒಟ್ಟು 13 ರೋಗಿಗಳನ್ನು ಸಂಪರ್ಕತಡೆಯಿಂದ ಬಿಡುಗಡೆ ಮಾಡಲಾಗಿದ್ದು, ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 10,226 ಕ್ಕೆ ಏರಿಕೆಯಾಗಿದೆ . ಜನವರಿ 3 ರಿಂದ, ಈವರೆಗೆ ದೇಶದಲ್ಲಿ 826,000 ಕ್ಕೂ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಅವರ ಪೈಕಿ, 796,142 ಜನರಲ್ಲಿ ಸೋಂಕಿನ ಯಾವುದೇ ಲಕ್ಷಣ ಕಾಣಿಸಿಕೊಂಡಿಲ್ಲ ಎಂದೂ ಹೇಳಲಾಗಿದೆ.