ಲೋಕದರ್ಶನ ವರದಿ
ಕಾಗವಾಡ 04: ಪಿಪಲ್ಎಜ್ಯಕೇಶನ ಸೊಸೈಟಿಉಗಾರಖುರ್ದ ಶಿಕ್ಷಣ ಸಂಸ್ಥೆಯ ಡೆಪೋಡೀಲ್ಸ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಪದವಿ ಪೂರ್ವ ಹಾಗೂ ಪಿಇಎಸ್ ಬಿಬಿಎ ಮತ್ತು ಬಿ.ಕಾಂ ಕಾಲೇಜು ಇವೂಗಳ ಸಂಯುಕ್ತ ಸಮಾಗಮದಲ್ಲಿ 10ನೇ ವಾರ್ಷಿಕ ಸ್ನೇಹ ಸಮ್ಮೇಳನವು ಅಭೂತ ಪೂರ್ವವಾಗಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಹುಸಾಹೇಬ ಕಚರೆ ವಹಿಸಿದ್ದರು. ಚಿಕ್ಕೋಡಿಯ ಉಪವಿಭಾಗಾಧಿಕಾರಿಯಾದ ರವೀಂದ್ರ ಕರ್ಲಿ೦ಗನವರ ಅವರು ಮೂಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಪಿಪಲ್ಎಜ್ಯುಕೇಶನ ಸೊಸೈಟಿ ಶಿಕ್ಷಣ ಸಂಸ್ಥೆಯು ಗ್ರಾಮೀಣ ಭಾಗದ ಬಡಜಾನ ವಿದ್ಯಾಥರ್ಿಗಳ ಜ್ಞಾನಾರ್ಜನೆ ಇಂಗಿಸುತ್ತಾ, ಪಿಪಲ್ಎಜ್ಯಕೇಶನ್ ಸೊಸೈಟಿಯು ಘನ ಸಂಸ್ಥೆಯಾಗಿ ಬೆಳೆಯುತ್ತಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದರು. ಉಪಸ್ಥಿತರಿದ್ದ ಸಂಸ್ಥೆಯ ಮಾರ್ಗದರ್ಶಕರಾದ ಜಿ.ಆರ್ ಕಿಲ್ಲೇದಾರ ವಾಷರ್ಿಕ ಸ್ನೇಹ ಸಮ್ಮೇಳನವು ವಿದ್ಯಾರ್ಥಿಗಳ ಅಂತರಂಗದಲ್ಲಿ ಅಡಗಿರುವ ಸಾಮಥ್ರ್ಯಗಳನ್ನು ಅಭಿವ್ಯಕ್ತಪಡಿಸಲು ಅವಕಾಶವನ್ನು ಒದಗಿಸುವ ಸುಂದರ ವೇದಿಕೆಯಾಗಿದೆ. ಅದೇ ರೀತಿ ಇಂದಿನ ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ನಡೆ ನುಡಿ, ಮೊದಲಾದ ಸಕಾರಾತ್ಮಕ ವರ್ತನೆಗಳನ್ನು ಪೋಷಿಸಲು, ಬೆಳೆಸಲು ಪ್ರೇರಕವಾಗಿದೆ ಎಂದು ಹೇಳಿದರು. ಸಂಸ್ಥೆಯ ಪ್ರಾಚಾರ್ಯ ಹಾಗೂ ಕಾರ್ಯದರ್ಶಿಗಳಾದ ರಾಮಚಂದ್ರ ಕಿಲ್ಲೇದಾರ ಅವರು ಸಂಸ್ಥೆಯು ಯಶಸ್ವಿಯಾಗಿ ಹತ್ತು ವರ್ಷಗಳನ್ನು ಪೂರೈಸಿ, ಹನ್ನೊಂದನೆ ವರ್ಷಕ್ಕೆ ಕಾಲಿಡುತ್ತಿದೆ. ಈ ಮೂಲಕ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವ ಸಂಕಲ್ಪದೊಂದಿಗೆ ಸಮಾಜ ಮುಖಿಯಾಗಿ ಬೆಳೆಯುತ್ತಿದೆ ಎಂದು ಹೇಳಿದರು.
ಕೊಡಗೈ ದಾನಿ ಮಕ್ತು ಮಸಾಬ ಹೊಸಮನಿ, ಸುದಾಕರ ಚಿಟ್ನೀಸ, ಲೈನ್ ಕ್ಲಬ್ ಅಧ್ಯಕ್ಷ ಶ್ರೀಕಾಂತ ಭಟ್ಟ, ಪದ್ಮಕುಮಾರ ಆಳಪ್ಪನವರ, ವಿನೋದ ಪಾಟೀಲ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರಜ್ವಲ ಸಮಾಜ ಹಾಗೂ ಪ್ರಜ್ಞಾ ಅಲತಗೆ ನಿರೂಪಿಸಿದರು.