108 ನೇ ವಾರ್ಷಿಕ ಸಾಮಾನ್ಯ ಸಭೆ

108th Annual General Meeting

108 ನೇ ವಾರ್ಷಿಕ ಸಾಮಾನ್ಯ ಸಭೆ  

ವಿಜಯನಗರ 10 : ಜಿಲ್ಲೆಯ ಸಂಡೂರು ತಾಲೂಕಾ ನಂದಿಹಳ್ಳಿಯಲ್ಲಿರುವ ಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದಲ್ಲಿ ಇದೇ ತಿಂಗಳ 27ನೇ ದಿನಾಂಕದಂದು ಬೆಳಿಗ್ಗೆ 11.00 ಗಂಟೆಗೆ ಆಯೋಜಿಸಿರುವ ಈ ಸಭೆಯ ಅಧ್ಯಕ್ಷತೆಯನ್ನು ನಾಡೋಜ ಮಹೇಶ್ ಜೋಶಿ ವಹಿಸಿಕೊಳ್ಳಲಿದ್ದಾರೆಂದು ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷರಾದ ರಾಮಚಂದ್ರಗೌಡ ಬಿ ಗೊಂಡಬಾಳ  ತಿಳಿಸಿದ್ದಾರೆ. ಅವರು ಕೊಪ್ಪಳ ಸಾಹಿತ್ಯ ಭವನದ ಮುಂದೆ ಈ ಸಭೆಯ ಸೂಚನಾ ಪತ್ರಗಳನ್ನು ಅಂಟಿಸುವ ಮೂಲಕ ಪ್ರಚಾರ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಕಸಾಪ ಘಟಕದ ಕಾರ್ಯದರ್ಶಿ ಶೇಖರಗೌಡ ಪಾಟೀಲ್, ಸಂಘಟನಾ ಕಾರ್ಯದರ್ಶಿ ರಮೇಶ್ ತುಪ್ಪದ, ಕೊಪ್ಪಳ ತಾಲೂಕಾ ಕಸಾಪ ಘಟಕದ ಕಾರ್ಯದರ್ಶಿ ಬಸವರಾಜ ಶಿರಗುಂಪಿ ಶೆಟ್ಟರ್ , ಶಶಿಧರ ಗಾಣಗಿ, ಚಂದ್ರಶೇಖರ ಬಿ. ಕೊಟ್ರೇಶ ಬೆನ್ನಳ್ಳಿ ಇತರರು ಉಪಸ್ಥಿತರಿದ್ದರು.