ಮಾನವೀಯತೆ ಮೆರೆದ 108 ವಾಹನ ಸಿಬ್ಬಂದಿ

ಮಹಾಲಿಂಗಪೂರ : ' ಹಣ ಎಂದರೆ ಹೆಣವೂ ಬಾಯಿ ಬಿಡುವುದು' ಎನ್ನುವ   ಹಿರಿಯರ ಅನುಭವದ ನುಡಿಯಂತೆ ಈ ಕಾಲದಲ್ಲಿ ಹೇಗಾದರಾಗಲಿ ಹಣವಂತನಾಗಬೇಕು ಎನ್ನುವ ಮನೋಭಾವ ಭಾಗಶಃ ಜನರಲ್ಲಿ ಮನೆ ಮಾಡಿದೆ.

        ಆದರೆ ಇಲ್ಲಿ 108 ವಾಹನ ಸಿಬ್ಬಂದಿಗಳಾದ ಚಾಲಕ  ವಿಜಯ ಮನವಾಡೆ ಹಾಗೂ ಸ್ಟಾಫ್ ನಸರ್್ ಅಯ್ಯಪ್ಪಾ ಮೇಲಿ ತೀವೃ  ಗಾಯಗೊಂಡ ಸಿಕಂದರ್ ಗೆ ರಸ್ತೆಯಲ್ಲಿ ಬಿದ್ದ ಅವನ 70 ಸಾವಿರ ಹಣದ ಬ್ಯಾಗ್ನ್ನು ಗೆಳೆಯನ ಕೈಗೆ ಮುಧೋಳ ಆಸ್ಪತ್ರೆಯಲ್ಲಿಯೆ ನೀಡಿ ಮಾನವೀಯತೆ ಮೆರೆದಿದ್ದಾರೆ.     

            ಆ.19 ಸೋಮವಾರ ರಂದು   ಸಾಂಯಕಾಲ  07 ಘಂ.ಗೆ  ಮಹಾಲಿಂಗಪೂರ   ಪಟ್ಟಣದಿಂದ ಮುಧೋಳ ತಾಲೂಕಿನ ಸ್ವಂತ ಗ್ರಾಮ ಕುಳಲಿಗೆ ಸಿಕಂದರ ಕೋಳಿ  ಎನ್ನುವಾತ ತನ್ನ ಬಜಾಜ್ ಪ್ಲಾಟಿನಾ ಮೋಟರ್ ಬೈಕ್ ಮೇಲೆ ಸಾಗುತ್ತಿರುವಾಗ ಮುಗಳಖೋಡ್ ಗ್ರಾಮದ ಕ್ರಾಸ್ಸ್ ಹತ್ತಿರ ಇನ್ನೊಂದು ಮೋಟರ್ ಬೈಕ್ ಮುಕಾಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ಗಾಯಾಳುಗಳಾದ ಬೈಕ್ ಸವಾರರನ್ನು   ಮಹಾಲಿಂಗಪೂರದ ಸಮುದಾಯ ಆರೋಗ್ಯ ಕೇಂದ್ರದ  108 ಅಂಬ್ಯುಲೆನ್ಸ್ ಸಿಬ್ಬಂದಿ  ಮುಧೋಳ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹಣವನ್ನು ಮರಳಿಸಿದ ಸಿಬ್ಬಂದಿಗಳನ್ನು ಗಾಯಾಳು, ಕುಟುಂಬಸ್ಥರು, ಸಾರ್ವಜನಿಕರು ಕೊಂಡಾಡಿದ್ದಾರೆ.