ಕೊಪ್ಪಳದಲ್ಲಿ ಇಂದು ಶಾಂತರಸ 100ನೇ ಶತಮಾನೋತ್ಸವ ಆಚರಣೆ
ಕೊಪ್ಪಳ 06: ನಾಡಿನ ಖ್ಯಾತ ಕವಿ, ಬರಹಗಾರ, ಕನ್ನಡದ ಮೊಟ್ಟ ಮೊದಲ ಗಝಲ್ ಕವಿ, ನಾಡಿನ ಸಾಕ್ಷಿ ಪ್ರಜ್ಞೆ ಶಾಂತರಸ ಅವರ 100ನೇ ಜನ್ಮದಿನದ ನಿಮಿತ್ತ ಶಾಂತರಸ 100- ಶತಮಾನೋತ್ಸವ ಎನ್ನುವ ಕಾರ್ಯಕ್ರಮವನ್ನು ದಿ, 7ರ ಸೋಮವಾರ ಹಮ್ಮಿಕೊಳ್ಳಲಾಗಿದೆ. ಕವಿ ಸಮೂಹ ಕೊಪ್ಪಳ , ಬಹುತ್ವ ಬಳಗ ಕೊಪ್ಪಳ, ಸಂಸ ಥಿಯೇಟರ್ ಬೆಂಗಳೂರು ಹಾಗೂ ಕನ್ನಡ ವಿಭಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಕೊಪ್ಪಳ ಇವರ ಸಹಯೋಗದಲ್ಲಿ ದಿ. 7- ರಂದು ಸೋಮವಾರ ಬೆಳಿಗ್ಗೆ ಹತ್ತು ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ ದ ಸಹಾಯಕ ನಿರ್ದೇಶಕ ಡಿ ಸುರೇಶ್ ಇವರು ಉದ್ಘಾಟನೆನೆರವೇರಿಸುವರು. ಶಾಂತರಸರ ಬದುಕು ಬರಹ ಕುರಿತು ಬರಹಗಾರಅಕ್ಬರ್ ಕಾಲಿ ಮಿರ್ಚಿ ಹಾಗೂ ಗಾಯತ್ರಿ ಭಾವಿಕಟ್ಟಿ ಮುಖ್ಯಸ್ಥರು, ಕನ್ನಡ ವಿಭಾಗ ಸರಕಾರಿ ಪ್ರಥಮ ದರ್ಜೆ ಕಾಲೇಜ್ ರವರು ಉಪನ್ಯಾಸ ನೀಡಲಿದ್ದಾರೆ. ಡಾ.ಭಾಗ್ಯಜ್ಯೋತಿ ಸಹ ಪ್ರಾಧ್ಯಾಪಕರು , ಹಾಗೂ ಗ್ಯಾನೇಶ್ ಹ್ಯಾಟಿ ಅಧ್ಯಕ್ಷರು ಬ್ಯಾಡ್ಮಿಂಟನ್ ಅಸೋಸಿಯೇಷನ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದುಕಾಲೇಜಿನ ವಿದ್ಯಾರ್ಥಿಗಳಿಂದ ಗಜಲ್ ವಾಚನ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನುಕಾಲೇಜಿನ ಪ್ರಾಂಶುಪಾಲರಾದ ಡಾ,ಡಿ ಹೆಚ್ ನಾಯಕ್ ವಹಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಆಸಕ್ತರು ಭಾಗವಹಿಸಲು ಸಂಘಟಕಸಿರಾಜ್ ಬಿಸರಳ್ಳಿ ಕೋರಿದ್ದಾರೆ.