ದಶಕಗಳ ನಂತರ 100ಅ ತೆರಿಗೆ ಸಂಗ್ರಹಣೆ: ಗದಗ ಜಿಲ್ಲಾ ಪಂಚಾಯತಿ ವಿಶೇಷ ಅಭಿಯಾನದ ಫಲ - ಸಿಇಓ
ಗದಗ 02: ಶೇಕಡಾ 100.61 ರಷ್ಟುತೆರಿಗೆ ವಸೂಲಿಯಲ್ಲಿ ಜಿಲ್ಲೆಯ ಸಾಧನೆ. ಜಿಲ್ಲೆಯ 122 ಗ್ರಾಮ ಪಂಚಾಯತಿಗಳಲ್ಲಿ ತೆರಿಗೆ ವಸೂಲಾತಿಯ ವಿಶೇಷ ಅಭಿಯಾನದ ಫಲವಾಗಿ 90 ಗ್ರಾಪಂಗಳು ಶೇ.100ರಷ್ಟು ಸಾಧನೆ ಮಾಡಿದ್ದು, ಪ್ರಸಕ್ತ ಶೇ. 100.61 ಸಾಧನೆ ಮಾಡಿರಾಜ್ಯದಲ್ಲಿ 7 ಸ್ಥಾನದಲ್ಲಿದೆಎಂದುಜಿಲ್ಲಾ ಪಂಚಾಯತಿ ಸಿ.ಇ.ಒ ಭರತ್‌ಎಸ್ ಹೇಳಿದರು.
ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಮಾತನಾಡುತ್ತಾ ಜಿಲ್ಲೆಗೆ ಸವಾಲಾಗಿದ್ದ ಗ್ರಾಮ ಪಂಚಾಯತಿ ತೆರಿಗೆ ಬಾಕಿ ವಸೂಲಾತಿ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಜಿಲ್ಲೆಯ 7 ತಾಲೂಕುಗಳಲ್ಲಿ ತೆರಿಗೆ ವಸೂಲಿಯಲ್ಲಿ ಶೇ.100.61 ರಷ್ಟು ಸಾಧನೆ ಮಾಡಿಎಂಬುದು ಹೆಮ್ಮೆಯ ಸಂಗತಿಯಾಗಿದೆ. ಪ್ರಸಕ್ತ ಸಾಲಿನ ಗುರಿ 1387.54 ಲಕ್ಷಇದ್ದು, 1395.95 ಲಕ್ಷ ಸಂಗ್ರಹವಾಗಿದೆಎಂದು ಹೇಳಿದರು.
ಅಭಿಯಾನದ ಫಲಶೃತಿ : ಸಾಮಾನ್ಯವಾಗಿ ಹಲವಾರು ವರ್ಷಗಳಿಂದ ಗ್ರಾಪಂತೆರಿಗೆ ವಸೂಲಾತೀತೀವ್ರ ಮಂದಗತಿಯಲ್ಲಿ ಸಾಗಿತ್ತು. ಇದನ್ನರಿತುಜಿಲ್ಲೆಯಲ್ಲಿಆಂದೋಲನೊಪಾಧಿಯಲ್ಲಿ ಹಮ್ಮಿಕೊಂಡ ವಿಶೇಷ ಅಭಿಯಾನದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ, ವಿವಿಧ ಹಂತಗಳಲ್ಲಿ ನಡೆದ ವಿಶೇಷ ಅಭಿಯಾನದಲ್ಲಿತಾಲ್ಲೂಕು ಪಂಚಾಯತಿ /ಗ್ರಾಮ ಪಂಚಾಯತಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಜನರ ಮನವೊಲಿಸಿ ತೆರಿಗೆ ವಸೂಲಿ ಮಾಡಿದ್ದಾರೆ, ಇದರಿಂದಾಗಿಗ್ರಾಮ ಪಂಚಾಯತಿಗಳ ಆರ್ಥಿಕ ಬಲ ಹೆಚ್ಚಾದಂತಾಗಿದೆ. ಜಿಲ್ಲೆಯಲ್ಲಿನ 122 ಗ್ರಾಪಂಗಳಲ್ಲಿ ಕರ ವಸೂಲಿ ಹೆಚ್ಚಿನ ಮಟ್ಟದಲ್ಲಿ ಪ್ರಗತಿ ಸಾಧಿಸಲುತಾಲ್ಲೂಕು ಪಂಚಾಯತಿ ಮಟ್ಟದಅಧಿಕಾರಿ, ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯಿತಿಅಭಿವೃದ್ಧಿ ಅಧಿಕಾರಿಗಳು ಮತ್ತುಕರ ವಸೂಲಿಗಾರರು ಗ್ರಾಪಂಗಳಲ್ಲಿ ಸಭೆ ನಡೆಸಿ, ಶೇ.100 ರಷ್ಟು ಪ್ರಗತಿ ಸಾಧಿಸಲು ವಿಶೇಷ ಶ್ರಮವಹಿಸಿ ಸದರಿ ಅಭಿಯಾನವನ್ನು ಯಶಸ್ವಿಗೋಳಿಸಿದ್ದಾರೆ.
ಗ್ರಾಮಸ್ಥರಿಗೆ ಗ್ರಾಪಂ ಕರ ಪರಿಷ್ಕರಣೆ ಬಗ್ಗೆ ಆಗಿಂದ್ದಾಗ್ಗೆ ಪ್ರಕಟಣೆ ಮೂಲಕ ತಿಳಿಯಪಡಿಸಿದ್ದರಿಂದ ಪಂಚಾಯಿತಿಅಭಿವೃದ್ಧಿ ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿತೆರಿಗೆ ವಿಧಿಸುವುದು, ತೆರಿಗೆ ಪರಿಷ್ಕರಿಸುವುದು ಮತ್ತುತೆರಿಗೆ ವಸೂಲಿ ಮಾಡುವ, ಸರ್ಕಾರದ ನಿಯಮ ಹಾಗೂ ಸುತ್ತೋಲೆಗಳ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಸಾಧ್ಯವಾಯಿತುಎನ್ನುತ್ತಾರೆ. ಶೇಕಡಾ.100 ರಷ್ಟು ಸಾಧನೆ ಮಾಡಿದ ತಾಲ್ಲೂಕು ಪಂಚಾಯತಿಗಳು, ಮುಂಡರಗಿ ಶೇ.105.28, ನರಗುಂದ ಶೇ.100.86, ರೋಣ ಶೇ.104.86, ಶಿರಹಟ್ಟಿ ಶೇ.102.47, ಗಜೇಂದ್ರಗಡ ಶೇ.100.60, ಲಕ್ಷ್ಮೇಶ್ವರ ಶೇ. 105.28 ಹಾಗೂ ಗದಗ ತಾಲ್ಲೂಕು ಶೇ. 94.81 ರಷ್ಟು ಪ್ರಗತಿ ಸಾಧಿಸಿದೆ, ಒಟ್ಟಾರೆ ಜಿಲ್ಲೆಯಲ್ಲಿನ 90 ಗ್ರಾಮ ಪಂಚಾಯತಿಗಳು ಪ್ರಸ್ತುತ ವರ್ಷದ ಬೇಡಿಕೆಗೂ ಮೀರಿ ಸಾಧನೆ ಮಾಡಿವೆಎಂದುಅವರು ಹೇಳಿದರು.