ಬರಚುಕ್ಕಿ ಫಾಲ್ಸ್ ಬಳಿ 100 ಕೋಟಿ ರೂ. ವೆಚ್ಚದ ಜೀವ ವೈವಿಧ್ಯ ಪಾರ್ಕ್

 ಚಾಮರಾಜನಗರ, ನ 6:     ಜಿಲ್ಲೆಯ ಪ್ರವಾಸಿ ತಾಣವಾಗಿರುವ ಬರಚುಕ್ಕಿ ಫಾಲ್ಸ್ ಬಳಿ 100 ಕೋಟಿ ರೂ. ವೆಚ್ಚದ ವಿಶ್ವ ದರ್ಜೆಯ ಜೀವ ವೈವಿಧ್ಯ ಉದ್ಯಾನ ನಿರ್ಮಿಸುವುದಾಗಿ ಜಿಲ್ಲಾ ಉಸ್ತುವಾರಿ ಮತ್ತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ. ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ ಮೊದಲ ವಾರದಿಂದ ಉದ್ಯಾನವನ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದ್ದು, ಒಟ್ಟು 150 ಎಕರೆ ಭೂಮಿಯಲ್ಲಿ ತಲೆ ಎತ್ತಲಿರುವ ಈ ಉದ್ಯಾನ ರಾಜ್ಯದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಲಿದೆ ಎಂದರು.  ಬಿದಿರು ಹಾಗೂ ಆರ್ಕ್ಡ್ ಉದ್ಯಾನವನದ ಅಗತ್ಯವನ್ನು ಪೂರೈಸಲು ಸೋಲಾರ್ ಪಾರ್ಕ್ ಅನ್ನು ಕೂಡ ಅಳವಡಿಸಲಾಗುತ್ತಿದೆ. 2 ಸಾವಿರ ಜನರ ಸಾಮಥ್ರ್ಯವುಳ್ಳ ಚಿತ್ರಮಂದಿರ ಹಾಗೂ ವಾಯುವಿಹಾರದ ಪಥ ನಿರ್ಮಿಸಲಾಗುವುದು ಎಂದರು.  ಪ್ರವಾಸಿಗರನ್ನು  ಪ್ರವೇಶ ದ್ವಾರದಲ್ಲಿ ಶಬ್ದ ಮತ್ತು ಬೆಳಕಿನೊಂದಿಗೆ ಸ್ವಾಗತಿಸಲಾಗುವುದು. ಪ್ರವಾಸಿಗರ ಅನುಕೂಲಕ್ಕಾಗಿ ಫುಡ್ ಕೋರ್ಟ್ ಮತ್ತು ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಈ ಯೋಜನೆ 2020ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದರು.