ಲೋಕದರ್ಶನ ವರದಿ
ಗಂಗಾವತಿ 16: ಆನೆಗುಂದಿ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಗಭರ್ಿಣಿ ಮಹಿಳೆಯರ, ಮಕ್ಕಳ 100 ಹಾಸಿಗೆ ಆಸ್ಪತ್ರೆ ಈಗಾಗಲೇ ಉದ್ಘಾಟನೆಗೊಂಡಿದೆ. ವೈದ್ಯರು ಹಾಜರಿ ಪುಸ್ತಕದಲ್ಲಿ ಸಹಿ ಹಾಕಿ ಹೋಗುತ್ತಿದ್ದಾರೆ. ಆದರೆ ಕಾರ್ಯಾರಂಭ ಮಾಡಿಲ್ಲ. ಶೀಘ್ರದಲ್ಲಿ ಕಾರ್ಯಾರಂಭ ಮಾಡುವಂತೆ ಮುಖ್ಯ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು.
ತಾಲೂಕು ಪಂಚಾಯತ ಆವರಣದಲ್ಲಿ ಸೋಮವಾರ ತಮ್ಮ ನೂತನ ಕಾಯರ್ಾಲಯ ಪೂಜೆ ನೆರವೇರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಒಂದುವರೆ ವರ್ಷಗಳ ಕಾಲ ತಮ್ಮ ನಿವಾಸದ ಹತ್ತಿರ ಸಾರ್ವಜನಿಕರ ಕುಂದುಕೊರತೆ ಆಲಿಸಲು ಕಾಯರ್ಾಲಯ ಮಾಡಿದ್ದೆ. ಈಗ ಇಲ್ಲಿ ಆರಂಭಿಸಿದ್ದೇನೆ. ಈ ಕಾರ್ಯಾಲಯ ಕೇಂದ್ರ ಬಸ್ ನಿಲ್ದಾಣ, ಮಿನಿ ವಿಧಾನಸೌಧ ಮತ್ತು ಇನ್ನಿತರ ಸರಕಾರಿ ಕಚೇರಿಗಳಿಗೆ ಹತ್ತಿರವಾಗುತ್ತದೆ. ಗ್ರಾಮೀಣ ಪ್ರದೇಶಗಳ ಜನರು ಕುಂದುಕೊರತೆಗಳನ್ನು ತಮಗೆ ತಿಳಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು. ತಾವು ಕೇಂದ್ರ ಸ್ಥಾನ ಗಂಗಾವತಿಯಲ್ಲಿದ್ದಾಗ ಎರಡು ತಾಸುಗಳ ಕಾಲ ಈ ನೂತನ ಕಾಯರ್ಾಲಯದಲ್ಲಿ ಇರುತ್ತೇನೆ. ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ತಿಳಿಸಿದರೆ. ಸ್ಥಳದಲ್ಲಿಯೇ ಇದನ್ನು ಪರಿಹರಿಸುತ್ತೇನೆ ಎಂದು ತಿಳಿಸಿದರು.
ಬಿಜೆಪಿ ಅಧ್ಯಕ್ಷ ಸ್ಥಾನ: ಬಿಜೆಪಿ ಕೊಪ್ಪಳ ಜಿಲ್ಲಾ ಅಧ್ಯಕ್ಷರ ನೇಮಕ ಕುರಿತಂತೆ ಮಾತನಾಡಿದ ಶಾಸಕರು, ತಮ್ಮ ಪಕ್ಷದಲ್ಲಿ ಶಿಫಾರಸ್ಸು ನಡೆಯುವದಿಲ್ಲ. ಶಿಸ್ತುಬದ್ದ ಪಕ್ಷವಾಗಿದೆ. ಅಧ್ಯಕ್ಷ ಸ್ಥಾನ ಕುರಿತಂತೆ ಪಕ್ಷದ ಹೈಕಮಾಂಡ ತೀರ್ಮಾನಕ್ಕೆ ತಾವು ಬದ್ದರಾಗಿದ್ದೇವೆ ಎಂದು ಹೇಳಿದರು.ಮಾಜಿ ಶಾಸಕ ಜಿ.ವೀರಪ್ಪ, ಎಪಿಎಂಸಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ನಗರಸಭೆ ಸದಸ್ಯರಾದ ರಾಘವೇಂದ್ರಶೆಟ್ಟಿ, ನವಲಿ ವಾಸುದೇವ ಮುಖಂಡರಾದ ಜೋಗದ ಹನುಮಂತಪ್ಪನಾಯಕ, ವಡ್ರಟ್ಟಿ ವೀರಭದ್ರಪ್ಪನಾಯಕ, ಸಿದ್ದಾಪುರ ರಾಚಪ್ಪ ಪಾಲ್ಗೊಂಡಿದ್ದರು.