ಲೋಕದರ್ಶನ ವರದಿ
ಶಿರಹಟ್ಟಿ: ತಾಲೂಕು ಕೇಂದ್ರವಾದ ಶಿರಹಟ್ಟಿಯಲ್ಲಿ ಹಲವು ವರ್ಷಗಳಿಂದ 100 ಬೆಡ್ಡಿನ ಆಸ್ಪತ್ರೆ ಬೇಕು ಎಂಬ ಕೂಗು ಸಾರ್ವಜನಿಕ ಕ್ಷೇತ್ರದಲ್ಲಿ ಕೇಳಿಬರುತ್ತಿದೆ ಅದಕ್ಕಾಗಿ ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ನಿವೇಶನದ ಖರೀದಿಗೆ ಸೂಚಿಸಿದರೂ ಕೂಡ ಆರೋಗ್ಯಾಧಿಕಾರಿಗಳು ಸೂಕ್ತವಾದ ಸಮಯಕ್ಕೆ ಸರಿಯಾಗಿ ವರದಿ ಸಲ್ಲಿಸದೆ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ ಆರೋಗ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅವರು ಸ್ಥಳೀಯ ತಾಲೂಕು ಪಂಚಾಯತ್ ಸಾಮಥ್ರ್ಯ ಸೌಧದಲ್ಲಿ ನಡೆದ ಕೆಡಿಪಿ ಮಾಸಿಕ ಸಭೆಯ ಇಲಾಖೆವಾರು ಚಚರ್ೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಹೊಸ ಆಸ್ಪತ್ರೆಗೆ ನಿವೇಶನ ಕೊಡಲು ಜಮೀನಿನ ಮಾಲಿಕರು ಒಪ್ಪಿದ್ದು ಈಗಾಗಲೇ ಕಟ್ಟಡ ನಿರ್ಮಾಣಕ್ಕಾಗಿ ಸ್ಥಳವನ್ನು ಪರಿಶೀಲನೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಶೀಘ್ರದಲ್ಲಿ ಜಾಗ ಖರೀದಿಸಲು ಹೇಳಿದ್ದರೂ ಆದರು ಸಹ ತಾಲೂಕು ಆರೋಗ್ಯಾಧಿಕಾರಿಗಳು ನಿವೇಶನ ಖರೀದಿಗೆ ಬೇಕಾದ ಸಂಪೂರ್ಣ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡುತ್ತಿಲ್ಲ. ಇದರಿಂದ ಗ್ರಾಮೀಣ ಪ್ರದೇಶದಿಂದ ಬರುತ್ತಿರುವ ರೋಗಿಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಶೀಘ್ರದಲ್ಲಿ ನಿವೇಶನ ಖರೀದಿಗೆ ಪ್ರಸ್ಥಾವನೆ ಸಲ್ಲಿಸಬೇಕು ಎಂದು ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತಗೆದುಕೊಂಡುರು.
ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಿ: ಪಟ್ಟಣದ ಬಾಲಕಿಯರ ವಸತಿ ನಿಲಯ ಹಾಗೂ ಕಡಕೋಳದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಮಕ್ಕಳಿಗೆ ಕಳಪೆ ಮಟ್ಟದ ಆಹಾರ ಹಾಗೂ ಕಳಪೆ ಮಟ್ಟದ ವಸತಿ ಸೌಲಭ್ಯಗಳನ್ನು ನೀಡುತ್ತಿದ್ದು, ಅಡುಗೆ ಸಹಾಯಕರಿಂದ ಶೌಚಾಲಯ ಸ್ವಚ್ಛ ಮಾಡಿಸುತ್ತಿದ್ದಾರೆ ಅಲ್ಲದೇ ಕಡಕೋಳದ ಬಾಲಕರ ವಸತಿ ನಿಲಯದ ವಿದ್ಯಾಥರ್ಿಗಳಿಗೆ ಕಳೆದ 12ದಿನಗಳಿಂದ ಕೇವಲ ಅನ್ನವನ್ನು ಮಾತ್ರ ನೀಡಲಾಗುತ್ತಿದ್ದು ಮಕ್ಕಳ ಆಹಾರದ ಪಡೆಯುವ ಹಕ್ಕನ್ನು ಕಸಿದುಕೊಂಡು ಮಕ್ಕಳ ಆಹಾರದ ಹಕ್ಕಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ತಿಪ್ಪಣ್ಣ ಕೊಂಚಿಗೇರಿ ಅವರು ಸಮಾಜ ಕಲ್ಯಾಣ ವ್ಯವಸ್ಥಾಪಕ ವೀರುಪಾಕ್ಷಪ್ಪ ಬೂದಿಹಾಳ ಅವರನ್ನು ಪ್ರಶ್ನಿಸಿದರು ಇದಕ್ಕೆ ಅವರು ಬೇಟಿ ನೀಡಿ ವರದಿ ಸಲ್ಲಿಸುತ್ತೇನೆ ಎಂದು ಹೇಳಿದರು. ಇದಕ್ಕೆ ತಾಪಂ ಕಾರ್ಯನಿವರ್ಾಹಕ ಅಧಿಕಾರಿ ನಿಂಗಪ್ಪ ಓಲೇಕಾರ ಪ್ರತಿಕ್ರೀಯಸುತ್ತಾ, ಏನ್ರಿ ನೀವು ಕಳೆದ 12 ದಿನಗಳಿಂದ ವಿದ್ಯಾಥರ್ಿಗಳಿಗೆ ಅನ್ನ ಮಾತ್ರ ನೀಡುತ್ತಿದ್ದೀರಿ, ಸ್ಥಳೀಯವಾಗಿ ಕಾರ್ಯ ನಿರ್ವಹಿಸುತ್ತಿರುವ ನಿಮಗೇ ಈ ವಿಷಯ ನಿಮ್ಮ ಗಮನಕ್ಕೆ ಬಂದಿಲ್ಲ ಹಾಗೂ ನೀವು ನಿಮ್ಮ ಕರ್ತವ್ಯದ ಅನುಸಾರ ಎಲ್ಲ ಹಾಸ್ಟಲ್ಗಳಿಗೆ ಬೇಟಿ ನೀಡುತ್ತಿದೀರೋ ಇಲ್ಲವೋ? ಒಂದು ವೇಳೆ ಬಡ ವಿದ್ಯಾಥರ್ಿಗಳಿಗೆ ಏನಾದ್ರು ಸಮಸ್ಯೆಯಾದ್ರೆ ಯಾರು ಜವಾಬ್ದಾರರು? ಕಳೆಪೆ ಊಟ, ಕಳೆಪೆ ವಸತಿ ನೀಡಿದ ವಾರ್ಡನ್ಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಮುಂದಿನ ಸಭೆಯಲ್ಲಿ ಸಂಪೂರ್ಣ ವರದಿ ಸಲ್ಲಿಸಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಸೂಕ್ತವಾದ ಕಠಿಣವಾದ ಕ್ರಮ ಜರುಗಿಸಬೇಕಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ರಸ್ತೆ ದುರಸ್ಥೆ ಪಡಿಸಿ: ತಾಲೂಕಿನ ಕೋಗನೂರ ಗ್ರಾಮದ ಹಳ್ಳದ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದು. ಈ ರಸ್ತೆಯ ಮೂಲಕ ಶಾಲಾ, ಕಾಲೇಜು ವಿದ್ಯಾಥರ್ಿಗಳು ನಿತ್ಯ ಸಂಚರಿಸುತ್ತವೆ. ಆದ್ದರಿಂದ ರಸ್ತೆಯನ್ನು ದುರಸ್ಥೆ ಮಾಡುವಂತೆ ಹಲವು ಸಭೆಯಲ್ಲಿ ಹೇಳಲಾಗಿದೆ ಮತ್ತು ಮಾಗಡಿ, ಅಕ್ಕಿಗುಂದ ಗ್ರಾಮದ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಮತ್ತು ಕಪ್ಪತ್ತಗುಡ್ಡದಲ್ಲಿ ನಿರಂತರ ಮಳೆಯಿಂದ ಗುಡ್ಡು ಕುಸಿತ ಕಂಡು ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು ರಸ್ತೆ ಹಾಗೂ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಎಂದು ತಾಪಂ ಉಪಾಧ್ಯಕ್ಷೆ ಪವಿತ್ರ ಶಂಕಿನದಾಸರ ಹಾಗೂ ತಿಪ್ಪಣ್ಣ ಕೊಂಚಿಗೇರಿ ಅವರು ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸರಕಾರದ ಹಣ ದುರ್ಬಳಕೆ ಮಾಡಿಕೊಳ್ಳಬೇಡಿ: ಸಕರ್ಾರಿ ಕಟ್ಟಡದಲ್ಲಿ ಹಿಂದುಳಿದ ಇಲಾಖೆ ಕಛೇರಿ ಇದ್ದರೂ ಸಹ ಖಾಸಗಿ ಬಿಲ್ಡಿಂಗಿಗೆ ಸ್ಥಳಾಂತರ ಮಾಡಲಾಗಿದೆ. ಪ್ರತಿ ತಿಂಗಳು ಖಾಸಗಿ ಬಿಲ್ಡಿಂಗಿಗೆ 10ಸಾವಿರ ರೂಪಾಯಿ ಬಾಡಗಿ ನೀಡುವುದರ ಬದಲು ಸರ್ಕಾರಿ ಬಿಲ್ಡಿಂಗಿಗೆ ಖರ್ಚು ಮಾಡಿದ್ದರೆ ಚೆನ್ನಾಗಿ ಕಾಣುತ್ತಿತ್ತು ಆದರೆ ಇದನ್ನು ಬಿಟ್ಟು ಆಡಳಿತ ಮಂಡಳಿಯ ಒಪ್ಪಿಗೆ ಪಡಿಯದೆ ಖಾಸಗಿ ಬಿಲ್ಡಿಂಗಿಗೆ ಕಛೇರಿಯನ್ನು ಸ್ಥಳಾಂತರ ಮಾಡುವುದರ ಮೂಲಕ ಸರಕಾರದ ಹಣವನ್ನು ದುರ್ಬಳಕ್ಕೆ ಮಾಡಿಕೊಳ್ಳುತ್ತಿದ್ದಿರಿ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ ಅವರು ಹಿಂದುಳಿದ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.
ಅಂಗನವಾಡಿ ಕೇಂದ್ರಗಳನ್ನು ದುರಸ್ಥೆ ಪಡಿಸಿ: ತಾಲೂಕಿನ ಇಟಗಿ, ಸಾಸಲವಾಡ, ತಂಗೋಡ, ಅಲಗಿಲವಾಡ, ಕಲ್ಲಾಗನೂರ ಸೇರಿದಂತೆ ಒಟ್ಟು 11 ಅಂಗನವಾಡಿ ಕೇಂದ್ರಗಳು ನೆರೆ ಹಾವಳಿಗೆ ತುತ್ತಾಗಿ ದುರವಸ್ಥೆಗೆ ಬಂದಿವೆ. ಇವುಗಳನ್ನು ಶಿಶು ಅಭಿವೃದ್ಧಿ ಇಲಾಖೆಯಿಂದ ಶೀಘ್ರದಲ್ಲಿ ದುರಸ್ಥೆ ಪಡಿಸಿ ಪುಟ್ಟಮಕ್ಕಳ ಭವಿಷ್ಯದ ಓದಿಗಿ ಉತ್ತಮ ಅವಕಾಶ ಹಾಗೂ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ತಾಪಂ ಇಒ ನಿಂಗಪ್ಪ ಓಲೇಕಾರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ಸುಶೀಲವ್ವ ಲಮಾಣಿ, ಉಪಾಧ್ಯಕ್ಷೆ ಪವಿತ್ರ ಶನಕಿದಾಸರ, ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ, ತಾಪಂ ಕಾರ್ಯನಿವರ್ಾಹಕ ಅಧಿಕಾರಿ ಡಾ. ನಿಂಗಪ್ಪ ಓಲೇಕಾರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.