ಕರಿಯಮ್ಮದೇವಿಗೆ 10 ತೊಲೆ ಬಂಗಾರದ ಕೀರೀಟ
ಧಾರವಾಡ 18: ಕುಮಾರೇಶ್ವರ ನಗರದ ಶ್ರೀ ಕರಿಯಮ್ಮದೇವಿ ದೇವಸ್ಥಾನ ನಿರ್ವಹಣಾ ಸಂಘವು ಸದಸ್ಯರ ಹಾಗೂ ಭಕ್ತಾಧಿಗಳ ಮಹಾದಾಸೆಯಂತೆ ಶ್ರೀ ಕರಿಯಮ್ಮದೇವಿಗೆ 10 ತೊಲೆ ಬಂಗಾರದ ಕೀರೀಟವನ್ನು ಧಾರಣೆ ಮಾಡಿ, ಮಹಾಮಂಗಲಾರತಿಯೊಂದಿಗೆ ಪೂಜೆಯನ್ನು ದಿನಾಂಕ: 18.02.2025ರಂದು ನೆರವೇರಿಸಿದರು.
ಸಂಘದ ಅಧ್ಯಕ್ಷರಾದ ಪ್ರೊ.ಜಿ.ಎನ್.ವಿ. ಪಾಟೀಲ, ಕಾರ್ಯದರ್ಶಿ ಜಿ.ಎಮ್.ಹುಲ್ಲೂರ, ಸದಸ್ಯರಾದ ಬಸವರಾಜ ಕೊಂಗವಾಡ, ಬಸವರಾಜ ನಿಗದಿ, ನಂದಾ ಗುಳೇದಗುಡ್ಡ, ಉದಯ ನಾಯಕ, ಎಸ್.ಆರ್.ಗಸ್ತಿ, ಸಚಿನ ಉಂಡಾಳೆ, ಸಿದ್ದು ಹೊಳೆಯಣ್ಣವರ, ಬಿ.ಎ.ಹಿರೇಮಠ, ಪ್ರಕಾಶ ಬಾಳಿಕಾಯಿ, ರಾಜೇಶ್ವರಿ ಕಬ್ಬೂರ, ಭಾರ್ಗವಿ ಕುಲಕರ್ಣಿ, ಎನ್.ಜಿ.ವಾರಿ, ಲೇಸಯ್ಯನಮಠ, ನೀತೀನ ಗಾಸ್ತೆ, ಎಮ್.ಎ.ಹಿರೇಮಠ, ಎಸ್.ವಿ.ಹೊಸಮನಿ, ಬಿ.ಎನ್.ಪಾಟೀಲ, ಗುರು ಅಕ್ಕಿ ಮುಂತಾವದವರು ಇದ್ದರು.