ಬೆಳಗಾವಿ : ವಿಜ್ಞಾನದಲ್ಲಿ ಗ್ರಹಣವೊಂದು ಸಹಜ ಕ್ರೀಯೆ ಎಂದು ಹೇಳುತ್ತಾರೆ. ಆದರೆ ನಮ್ಮ ದೇಶವನ್ನು ಅನೇಕ ವರ್ಷಗಳಿಂದ ಶಾಸ್ತ್ರವು ಆಳುತ್ತಿದೆ. 10 ರೂಪಾಯಿ ಪಂಚಾಂಗ ನಮ್ಮನ್ನು ಆಳುತ್ತಿದ್ದು, ಈ ಮೌಢ್ಯದಿಂದ ಜನರನ್ನು ಹೊರತರಲು ಸ್ಮಶಾನದಲ್ಲಿ ಗ್ರಹಣ ದಿನ ಕಾರ್ಯಕ್ರಮ, ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಮಾಜಿ ಸಚಿವ, ಶಾಸಕ ಸತೀಶ ಜಾರಕಿಹೊಳಿ ಅವರು ಹೇಳಿದರು.
ಖಗ್ರಾಸ್ ಚಂದ್ರಗ್ರಹಣ ಹಿನ್ನೆಲೆ ಬೆಳಗಾವಿಯ ಸದಾಶಿವ ನಗರದ ಸ್ಮಶಾನದಲ್ಲಿ ಮಾನವ ಬಂಧುತ್ವ ವೇಧಿಕೆಯವರು ಆಯೋಜಿಸಿದ ಮೌಢ್ಯ ವಿರೋಧಿ ಕಾರ್ಯಕ್ರಮದಲ್ಲಿ ಆಹಾರ ಸೇವನೆ ಹಾಗೂ ಉಪನ್ಯಾಸ ಕಾರ್ಯಕ್ಗರಮದಲ್ಲಿ ಶಾಸಕ ಸತೀಶ್ ಜಾರಕಿಹೊಳಿ ಬಾಗಿಯಾಗಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಒಂದು ವಾರಗಳಿಂದ ಗ್ರಹಣದ ಬಗ್ಗೆ ಚಚರ್ೆ ನಡೆಯುತ್ತಿದೆ. ಗ್ರಹಣ ಪರ, ವಿರೋಧ ಅನೇಕರು ವಾದ ಮಾಡುತ್ತಾರೆ. ಜನರನ್ನು ಮೌಢ್ಯದಿಂದ ಹೊರ ಬರಲು ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ. ಎಲ್ಲರೂ ಮಾನಸಿಕ ಗುಲಾಮಗಿರಿಯಿಂದ ಹೊರಬರಬೇಕಿದೆ.
ಶಾಸ್ತ್ರದಂತೆ ಊಟ ಮಾಡುವಂತಿಲ್ಲ, ಕುಡಿಯುವ ನೀರನ್ನು ಚೆಲ್ಲುವಂತೆ ಹೇಳಿತ್ತಾರೆ. ವಿಜ್ಞಾನದಲ್ಲಿ ಗ್ರಹಣವೊಂದು ಸಹಜ ಕ್ರೀಯೆ ಎಂದು ಹೇಳುತ್ತಾರೆ. ನಮ್ಮ ದೇಶವನ್ನು ಅನೇಕ ವರ್ಷಗಳಿಂದ ಶಾಸ್ತ್ರ ಆಳುತ್ತಿದೆ. 10 ರೂಪಾಯಿ ಪಂಚಾಂಗ ನಮ್ಮನ್ನು ಆಳುತ್ತಿದೆ. ಸಕರ್ಾರ ಕೂಡ ಗ್ರಂಥ ಹೇಳಿದಂತೆ ನಡೆದುಕೊಳ್ಳುತ್ತಿದೆ.
ಜನರು ಮಾನಸಿಕ ಗೂಲಾಮಗಿರಿಯಿಂದ ಹೊರ ಬರಬೇಕು. ಈ ನಿಟ್ಟಿನಲ್ಲಿ ಅಂಬೇಡ್ಕರ್ ಸಾಮಾಜಿಕ ನ್ಯಾಯದ ರಥ ಮುಂದುವರೆಸಿದ್ದೆವೆ. ರಾಜ್ಯ, ರಾಷ್ಟ್ರದ ಗಮನ ಸೆಳೆಯಲು ಸ್ಮಶಾನದಲ್ಲಿ ಮೌಢ್ಯ ವಿರೋಧಿ ಕಾರ್ಯಕ್ರಮ ಆಯೋಜಿಸಲಾಗಿದೆ. ಗ್ರಹಣ ಸಂದರ್ಭದಲ್ಲಿ ದೇವಸ್ಥಾನ ಬೀಗ ವಿಚಾರವಾಗಿ ಮಾತನಾಡಿದ ಅವರು, ಕಷ್ಟ ಕಾಲದಲ್ಲಿ ಕೈಹಿಡಿಯಬೇಕಿದ್ದ ದೇವರನ್ನು ಬಿಗ ಹಾಕಲಾಗಿದೆ. ಇದು ಸಮಾಜದಲ್ಲಿ ಕೆಟ್ಟ ಪದ್ಧತಿ ಎಂದು ಶಾಸಕ ಸತೀಶ ನುಡಿದಿದ್ದಾರೆ. ಚಂದ್ರಗ್ರಹಣ ಪ್ರಯುಕ್ತ ಸ್ಮಶಾನದಲ್ಲಿ ಉಪಹಾರ ಸೇವನೆ. ಮಾಜಿ ಸಚಿವ, ಶಾಸಕ ಸತೀಶ್ ಜಾರಕಿಹೊಳಿ ನೇತೃತ್ವದ ಮಾನವ ಬಂದುತ್ವ ವೇದಿಕೆಯಡಿ ಮೌಡ್ಯ ವಿರೋಧಿ ಕಾರ್ಯಕ್ರಮ. ಬೆಳಗಾವಿಯ ಸದಾಶಿವ ನಗರದ ಸಾರ್ವಜನಿಕ ಸ್ಮಶಾನದಲ್ಲಿ ಮೌಢ್ಯವಿರೋಧಿ ಕಾರ್ಯಕ್ರಮ. ಚಂದ್ರಗ್ರಹಣ ನಿಮಿತ್ತ ಸ್ಮಶಾನದಲ್ಲಿ ಬಿಸಿ ಬಿಸಿ ವಡಾಪಾವ ಸೇವನೆ. ತಾವು ಯಮಕನಮರಡಿ ಕ್ಷೇತ್ರದಲ್ಲಿ ಕಡಿಮೆ ಅಂತರದಿಂದ ಶಾಸಕರಾಗಿ ಗೆದ್ದಿದ್ದಕ್ಕೆ ಅನೇಕ ಊಹಾಪೋಹ ಹುಟ್ಟಿಕೊಂಡಿವೆ. ಕಡಿಮೆ ಹಣ ಖಚರ್ು, ಮತದಾರ ಕಡೆ ಹೋಗದೆ ಮತದಾರರು ನನ್ನನ್ನು ಗೆಲ್ಲಿಸಿದ್ದಾರೆ. ಇದು ಭಾರತ ದೇಶದಲ್ಲಿ ಪ್ರಥಮ ಪ್ರಯೋಗ. ಹೆಚ್ಚು ಮತ ಪಡೆಯೋದು ನನಗೆ ಗೊತ್ತು. ನಮ್ಮ ಅಕ್ಕಪಕ್ಕದ ಕ್ಷೇತ್ರದ ಮನೆ ಮಂದಿಯಲ್ಲ ಚುನಾವಣೆ ಪ್ರಚಾರ ಮಾಡಿದ್ದಾರೆ. ಮುಂದಿನ ಭಾರಿ ನಮ್ಮ ಶಕ್ತಿ ಏನು ಎಂದು ತೋರಿಸುತ್ತೇವೆ. ಜೇನು ಗುಡಿಗೆ ಕಲ್ಲು ಹೊಡೆದಿದ್ದೇವೆ ಎಂದು ಈ ಹಿಂದೆ ಹೇಳಿದೆ. ಲಿಂಬಿಕಾಯಿ ಕೈಯಲ್ಲಿ ಹಿಡಿದಿದ್ದಕ್ಕೆ ಅಪಪ್ರಚಾರ ಮಾಡಲಾಗಿದೆ. ಲಿಂಬಿಕಾಯಿ ವಾಸನೆ ನೋಡೊದರಿಂದ ಅನೇಕ ಆರೋಗ್ಯ ಉಪಯೋಗವಿದೆ. ಈ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯಕತೆ ಇದೆ ಎಂದು ಶಾಸಕ ಸತೀಶ ಜಾರಕಿಹೊಳಿ ಅವರು ತಿಳಿಸಿದರು.