ಮುಂಬಯಿನಲ್ಲೂ ಜಾರಿಗೆ ಬಂತು 10 ರೂಪಾಯಿ ಬಿಸಿ ಊಟ..!

ಮುಂಬೈ, ಡಿ 21 ಮಧ್ಯಾಹ್ನದ  ಬಿಸಿ ಊಟ ಈಗ  ದೇಶದ  ಜನಪ್ರಿಯ ಕಾರ್ಯಕ್ರಮವಾಗುತ್ತಿದೆ ಅನೇಕ  ಸರಕಾರಗಳು ಇದನ್ನು ಪೈಪೋಟಿಯ ,ಮೇಲೆ ಜಾರಿಗೆ  ತರುತ್ತಿವೆ.ಈಗ ಬೃಹತ್ ಮುಂಬಯಿ ಮಹಾನಗರ ಪಾಲಿಕೆ(ಬಿಎಂಸಿ) ತನ್ನ ನೌಕರರಿಗೆ 10 ರೂಪಾಯಿಗೆ  ಬಿಸಿ  ಊಟ ಕೊಡುವ ಯೋಜನೆಯನ್ನು ಜಾರಿಗೊಳಿಸಿದೆ. ಮೇಲಾಗಿ ಮುಂಬೈ ಮಹಾಜನತೆಗೂ ಕೇವಲ  ಒಂದೆರಡು ದಿನದಲ್ಲಿ  ಈ ಸೌಲಭ್ಯ  ದೊರಕಲಿದೆ ಎಂದು ಮೇಯರ್ ಕಿಶೋರಿ ಫೆಢ್ನೆಕರ್ ತಿಳಿಸಿದ್ದಾರೆ.ಬಿಎಂಸಿ ಮೇಯರ್ ಕಿಶೋರಿ ಫೆಢ್ನೆಕರ್ ಈ ಯೋಜನೆ ಗೆ ಈಗಾಗಲೇ ಚಾಲನೆ  ನೀಡಿದ್ದಾರೆ 10 ರೂ ಗಳಿಗೆ ಎರಡು ಚಪಾತಿ, ಅನ್ನ, ದಾಲ್, ಎರಡು  ಖಾದ್ಯಗಳು ಸಿಗಲಿದೆ.  ಶಿವಸೇನಾ ತನ್ನ ಪ್ರಣಾಳಿಕೆಯಲ್ಲಿ ಈ 10 ರೂ ಊಟದ ಯೋಜನೆ ಜಾರಿಗೊಳಿಸುವುದಾಗಿ ಘೋಷಣೆ ಮಾಡಿತ್ತು,   ಇದನ್ನು ನಗರದ ನಾಗರಿಕರಿಗೂ ವಿಸ್ತರಣೆ ಮಾಡುವುದಾಗಿ ಅವರು ತಿಳಿಸಿದ್ದಾರೆ. ಕೇವಲ ಎರಡು ದಿನದಲ್ಲಿ ಜನರಿಂದ ಇದಕ್ಕೆ  ಉತ್ತಮ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಕಾರಣ ಈ ಯೋಜನೆಯನ್ನು ಎಲ್ಲಾ ಜನರಿಗೂ ವಿಸ್ತರಿಸಲಾಗುವುದು ಎಂದೂ  ಕ್ಯಾಂಟಿನ್ ಮಾಲಿಕರು ತಿಳಿಸಿದ್ಧಾರೆ.