ಲೋಕದರ್ಶನ
ವರದಿ
ಬೆಳಗಾವಿ 13 : ನಗರದ ಜನತೆಗೆ
ಆರೋಗ್ಯ ಮತ್ತು ದೇಹ ದಾಡ್ಯತೆಯ ಬಗ್ಗೆ
ಜಾಗೃತಿ ಮೂಡಿಸಲು ಅ.21ರಂದು 10ಕಿ.ಮೀ ಮತ್ತು 21ಕಿ.ಮೀ ಮ್ಯಾರಾಥಾನ ನಡೆಸಲಾಗುತ್ತದೆ
ಎಂದು ಡಾ.ಅನೀಲ ಪಾಟೀಲ
ಹೇಳಿದರು
ಶನಿವಾರ
ನಗರದ ಕಾಸಗಿ ಹೋಟೆಲ್ ಒಂದರಲ್ಲಿ ಹಮ್ಮಿಕೊಂಡ
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯಲಕ್ಷ್ಮೀ ಚಿಲ್ಡ್ರನ್
ಪೌಂಡೇಷನ್ ಮತ್ತು ಲೇಕವಿವ್ ಆಸ್ಪತ್ರೆಯ ಸಂಯೋಗದೊಂದಿಗೆ ಆರೋಗ್ಯ ಮತ್ತು ದೇಹದಾಡ್ಯತೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸ್ವಚ್ಚ ಬೆಳಗಾವಿಯ ಬಗ್ಗೆ ಅರಿವು ಮೂಡಿಸಲು ನಗರದ ಸಿಪಿಎಡ್ ಮೈಧಾನದಿಂದ
ಗಾಂಧಿ ನಗರ, ಸಾಮಗಾಂವಗಲ್ಲಿ ಮಾರ್ಗವಾಗಿ
ಹಣುಮಾನ ನಗರದವರೆಗೆ ಮ್ಯಾರಥಾನ ನಡೆಸಲಾಗುತ್ತದೆ. ಮ್ಯಾರಥಾನಗೆ ಈಗಿಗಲೇ ಬೆಳಗಾವಿ , ಗೋವಾ ಸೇರಿದಂತೆ ಇತರ
ರಾಜ್ಯಗಳಿಂದ 1000ಕ್ಕಿಂತ ಹೆಚ್ಚು ಜನರು ಹೆಸರು ನೊಂದಾಯಿಸಿದ್ದಾರೆ
ಎಂದರು.
ಈ ಸಂದರ್ಭದಲ್ಲಿ ಡಾ.ಶಶಿಕಾಂತ
ಕುಲಗೋಡ, ಡಾ. ಕೀತರ್ಿ ಮಾನಿ
ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.