ಉತ್ತರಪ್ರದೇಶ: ಕೊರೋನಾ ಸೋಂಕಿನ 10 ಪ್ರಕರಣ ದಾಖಲು

ಲಖನೌ, ಮಾ 12, ಉತ್ತರಪ್ರದೇಶದಲ್ಲಿ ಕೊರೋನಾ ವೈರಸ್ ಸೋಂಕಿನ 10 ಪ್ರಕರಣಗಳು ದೃಢಪಟ್ಟಿವೆ.  ಇವುಗಳಲ್ಲಿ ಆಗ್ರಾವೊಂದರಲ್ಲೇ 7, ಉಳಿದ ಮೂರು ಪ್ರಕರಣಗಳು ತಲಾ ಒಂದರಂತೆ ಕ್ರಮವಾಗಿ, ನೋಯ್ಡಾ, ಗಾಜಿಯಾಬಾದ್ ಹಾಗೂ ನೂತನ ಲಖನೌದಲ್ಲಿ ದಾಖಲಾಗಿವೆ.  ಹತ್ತನೇ ಸೋಂಕಿತ ವ್ಯಕ್ತಿಯು ವೈದ್ಯೆಯಾಗಿದ್ದು, ಕೆನಡಾದ ಟೊರೋಂಟೋಗೆ ಪತಿಯೊಡನೆ ಭೇಟಿ ನೀಡಿದ್ದರು ಎನ್ನಲಾಗಿದೆ.  ಅಧಿಕಾರಿಗಳ ಪ್ರಕಾರ, ಕೊರೋನಾ ಸೋಂಕಿನ ಲಕ್ಷಣ ಹೊಂದಿದ್ದ, 128 ಪ್ರಯಾಣಿಕರಲ್ಲಿ ಓರ್ವ ಸೋಂಕಿತನನ್ನು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಆಗ್ರಾದಲ್ಲಿ ಮೂರು ಮತ್ತು  ನೋಯ್ಡಾ ದಲ್ಲಿ ಮೂವರು ಸೋಂಕು ಶಂಕಿತರನ್ನೂ ದಾಖಲಿಸಿ ತೀವ್ರ ನಿಗಾ ವಹಿಸಲಾಗಿದೆ. ಆಗ್ರಾದ ಐವರು ಸೋಂಕು ಪೀಡಿತರನ್ನೂ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.   ವಿದೇಶದಿಂದ ಆಗಮಿಸಿದ 1.913 ಪ್ರಯಾಣಿಕರು 28 ದಿನಗಳ ತೀವ್ರ ನಿಗಾ ದಿನಗಳನ್ನು ಪೂರೈಸಿದ್ದಾರೆ.  ಇದುವರೆಗೆ 554 ಮಾದರಿಗಳನ್ಸೋಂಕು ಪರೀಕ್ಷೆಗೆ ಕಳುಹಿಸಲಾಗಿತ್ತು.  ಇವುಗಳಲ್ಲಿ 469 ಮಾದರಿಗಳು ಋಣಾತ್ಮಕವಾಗಿವೆ. ಉಳಿದ 77 ಪ್ರಕರಣಗಳ ಫಲಿತಾಂಶಕ್ಕೆ ಕಾಯಲಾಗುತ್ತಿದೆ ಎಂದು ಹೇಳಿದ್ದಾರೆ.   ರಾಜ್ಯ ಕಣ್ಗಾವಲು ಅಧಿಕಾರಿ ವಿಕಾಸೇಂದು  ಅಗರ್ವಾಲ್ ಪ್ರಕಾರ ಇಲ್ಲಿಯವರೆಗೆ, 15.903 ಪ್ರಯಾಣಿಕರು ಗಡಿ ಚೆಕ್ ಪೋಸ್ಟ್ ಮತ್ತು 12,01,945 ವಿಮಾನ ನಿಲ್ದಾಣಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನುಕೈಗೊಳ್ಳಲಾಗಿದೆ.