ಗದಗ 30: ಬರ ನಿರ್ವಹಣೆ ಕುರಿತಂತೆ ರಾಜ್ಯ ಸಕರ್ಾರದ ನಿದರ್ೇಶನಗಳ ರೀತ್ಯ ಗದಗ ಜಿಲ್ಲೆಯ ಎಲ್ಲ ತಾಲೂಕು ಮಟ್ಟದ ಟಾಸ್ಕಫೊರ್ಸ ಸಮಿತಿಗಳು ತವ್ಮ್ಮ ವ್ಯಾಪ್ತಿಯ ಜನರಿಗೆ ಕುಡಿಯುವ ನೀರು, ಉದ್ಯೋಗ, ಜಾನುವಾರುಗಳಿಗೆ ನೀರು, ಮೇವು ಲಭ್ಯತೆ ಕುರಿತು ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಬೇಕು ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಗದಗ ಜಿಲ್ಲೆಯ ಎಲ್ಲ ತಾಲೂಕುಗಳ ಬರ ಪ್ರದೇಶವೆಂದು ರಾಜ್ಯ ಸಕರ್ಾರ ಘೋಷಿಸಿರುವ ಹಿನ್ನಲೆಯಲ್ಲಿ ಬರ ನಿರ್ವಹಣೆ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರ ಅಥವಾ ಗ್ರಾಮ ಪ್ರದೇಶಗಳಲ್ಲಿ ಬರ ಕಾಮಗಾರಿ ಕೈಗೊಳ್ಳುವ ಮುನ್ನ ಅಥವಾ ಅನಿವಾರ್ಯತೆಯಿಂದ ಪ್ರಾರಂಭಿಸಿರುವ ಸಂದರ್ಭದಲ್ಲಿ ತಹಶೀಲ್ದಾರರು ಸದಸ್ಯ ಕಾರ್ಯದಶರ್ಿಗಳಿರುವ ತಾಲೂಕು ಟಾಸ್ಕಫೋರ್ಸ ಸಮಿತಿಯ ಗಮನಕ್ಕೆ ತಂದು ಮಂಜೂರಾತಿ ಪಡೆಯಬೇಕು. ಇದನ್ನು ಪಾಲಿಸದ ಯಾವುದೇ ಕಾಮಗಾರಿಗಳ ಬಿಲ್ಲು ಪಾವತಿಗೆ ಸಾಧ್ಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು. ಈಗಾಗಲೇ ತಾಲೂಕು ಟಾಸ್ಕಫೋರ್ಸ ಸಮಿತಿಗಳಲ್ಲಿ ಹಾಗೂ ನಗರಪ್ರದೇಶದ ಸ್ಥಳೀಯ ಸಂಸ್ಥೆಗಳಲ್ಲಿ ಇರುವ ಸಂಬಂಧಿತ ಅನುದಾನವನ್ನು ಬಳಸಿಕೊಳ್ಳಬೇಕು. ರಾಜ್ಯ ಸಕರ್ಾರವು ಗ್ರಾಮೀಣ ಪ್ರದೇಶಕ್ಕಾಗಿ ತಾಲೂಕು ಸಮಿತಿಗೆ ಹಾಗೂ ನಗರ ಪ್ರದೇಶಕ್ಕಾಗಿ ಸ್ಥಳೀಯ ಸಂಸ್ಥೆಗಳು ತಾಲೂಕು ಸಮಿತಿಯೊಂದಿಗೆ ಕಾರ್ಯನಿರ್ವಹಿಸಬೇಕು. ಬರ ನಿರ್ವಹಣೆ ಸಂದರ್ಭದಲ್ಲಿ ಏನಾದರೂ ತೊಂದರೆ ಇದ್ದಲ್ಲಿ ನೇರವಾಗಿ ತವ್ಮ್ಮನ್ನು ಸಂಪಕರ್ಿಸಬೇಕು. ಒಟ್ಟಾರೆ ಜನರಿಗೆ ಬರ ಪರಿಸ್ಥಿತಿಯಲ್ಲಿ ಯಾವುದೇ ತೊಂದರೆ ಉದ್ಭವಿಸಿದಂತೆ ಕೇಂದ್ರ ಸ್ಥಾನದಲ್ಲಿದ್ದು ಸದಾ ನಿಗಾ ವಹಿಸಲು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚನೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ ಗದಗ ಜಿಲ್ಲಾ ಪಂಚಾಯತ ಅಧ್ಯಕ್ಷ ಎಸ್.ಪಿ. ಬಳಿಗಾರ ಮಾತನಾಡಿ ಗದಗ ಜಿಲ್ಲೆ ಸತತವಾಗಿ ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಿಸುತ್ತಿದ್ದು ರಾಜ್ಯ ಸಕರ್ಾರದ ನಿದರ್ೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಜನರಿಗೆ ಕುಡಿಯುವ ನೀರು ಹಾಗೂ ಉದ್ಯೋಗ ನೀಡುವ ಕಾರ್ಯಕ್ಕೆ ಪ್ರಾಧಾನ್ಯತೆ ನೀಡಬೇಕು. ಜಾನುವಾರುಗಳು ಕೂಡಾ ರೈತಾಪಿ ಜನರ ಬಹುಮುಖ್ಯ ಆಸ್ತಿ ಆಗಿದ್ದು ಅವುಗಳಿಗೆ ಮೇವು ಹಾಗೂ ನೀರು ಪೂರೈಕೆಗೆ ಅಗತ್ಯದ ಕ್ರಮ ಜರುಗಿಸಿ ಯಾವುದೇ ಗ್ರಾಮದಲ್ಲಿ ಜನರಿಗೆ, ಜಾನುವಾರುಗಳಿಗೆ ತೊಂದರೆ ಉಂಟಾಗದಂತೆ ಮುಂಜಾಗ್ರತೆ ವಹಿಸಲು ಸೂಚಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಮಂಜುನಾಥ ಚವ್ಹಾಣ ಮಾತನಾಡಿ ಬರ ನಿರ್ವಹಣೆ ಸಂದರ್ಭದಲ್ಲಿ ಎಲ್ಲ ವ್ಮಟ್ಟದಲ್ಲೂ ಅಧಿಕಾರಿಗಳಿಗೆ ಸಮನ್ವಯತೆ ಬಹು ಮುಖ್ಯವಾಗಿದೆ. ಗ್ರಾ.ಪಂ.ಗಳು ನೀರು ಪೂರೈಕೆ ಜವಾಬ್ದಾರಿ ಹೊಂದಿದ್ದರು ತಾಲೂಕು ಮಟ್ಟದಲ್ಲಿ ತಹಶೀಲ್ದಾರರು, ತಾ.ಪಂ.ಕಾರ್ಯನಿವರ್ಾಹಕ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ ಹಾಗೂ ಜಾನುವಾರುಗಳಿಗೆ ಸಂಬಂಧಿಸಿದಂತೆ ಮೇವು ಪೂರೈಕೆಗೆ ಪಶುಪಾಲನೆ ಇಲಾಖೆಯ ಅಧಿಕಾರಿಗಳು ಒಟ್ಟಾರೆಯಾಗಿ ಒಂದು ತಂಡವಾಗಿ ಕಾರ್ಯನಿರ್ವಹಿಸಬೇಕು. ತಾಲೂಕಿನ ವ್ಯಾಪ್ತಿಯಲ್ಲಿ ಬರದಿಂದಾಗಿ ಜನ ಗುಳೇ ಹೊಗದಂತೆ ಉಯೋಗ ಖಾತ್ರಿಯಡಿ ಹೆಚ್ಚುವರಿ ಉದ್ಯೋಗ ನೀಡಬೇಕು. ಜಾನುವಾರುಗಳಿಗೆ ನೀರಿನ ತೊಟ್ಟಿ ನಿಮರ್ಾಣ, ಮುಂತಾದ ಕಾರ್ಯ ಮುಂಚಿತವಾಗಿ ಯೋಜಿಸಿ ಕ್ರೀಯಾ ಯೋಜನೆಗೆ ತಾಲೂಕು ಟಾಸ್ಕಫೋರ್ಸ ಸಮಿತಿಯಲ್ಲಿ ಮಂಜೂರಾತಿ ಪಡೆದು ತಮಗೆ ಮುಂದಿನ ಕ್ರಮಕ್ಕಾಗಿ ಕಳುಹಿಸಬೇಕು ಎಂದು ನುಡಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಹೊಸದಾಗಿ ಬೋರವೆಲ್ ಕೊರೆಯಿಸಲು ಸಕರ್ಾರದ ಇಲಾಖೆ, ಸಂಸ್ಥೆಗೆ ಸೇರಿದಂತೆ ಯಾರಿಗೂ ಅನುಮತಿ ಇರುವುದಿಲ್ಲ. ಅನಿವಾರ್ಯತೆ ಇದ್ದಲ್ಲಿ ಅಧಿಕಾರಿಗಳು ಜಿಲ್ಲೆಯ ಅಂತರ್ಜಲ ಇಲಾಖೆಯಿಂದ ಅನುಮತಿ ಪಡೆಯುವದು ಕಡ್ಡಾಯವಾಗಿದೆ. ಬರ ನಿರ್ವಹಣೆ ಕುರಿತು ಪ್ರತಿವಾರ ಹೊಬಳಿ ಮಟ್ಟದಲ್ಲಿ ಹಾಗೂ ತಾಲೂಕು ಟಾಸ್ಕಫೋರ್ಸ ಸಮಿತಿ ಪ್ರತಿ 15 ದಿನಗಳಿಗೊಮ್ಮೆ ಸಭೆ ಸೇರಿ ಪರಿಸ್ಥಿತಿಯ ಅವಲೋಕನ ಮಾಡಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಗ್ರಾಮ ಹಾಗೂ ನಗರದ ಸ್ಥಳೀಯ ಸಂಸ್ಥೆಗಳು ಬರ ಪರಿಸ್ಥಿತಿ, ನೀರಿನ, ಉದ್ಯೋಗ, ಮೇವಿನ ಅವಶ್ಯಕತೆ ಕುರಿತು ಪರಿಶೀಲನೆ ನಡೆಸಿ ತಾಲೂಕುವಾರು ವರದಿಯನ್ನು ತಕ್ಷಣವೇ ಜಿಲ್ಲಾಧಿಕಾರಿಗಳ ಕಾಯರ್ಾಲಯಕ್ಕೆ ಕಳುಹಿಸಲು ತಿಳಿಸಿದರು.
ಉಪವಿಭಾಗಾಧಿಕಾರಿ ಪಿ.ಎಸ್.ಮಂಜುನಾಥ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಂಬಾಳಿಮಠ, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಗ್ರಾಮೀಣ ನೀರು ಪೂರೈಕೆ ಇಲಾಖೆ, ಹೆಸ್ಕಾಂ, ಅಭಿಯಂತರರು, ಎಲ್ಲ ತಾಲೂಕುಗಳ ತಹಶೀಲ್ದಾರರು, ತಾ.ಪಂ. ಕಾರ್ಯನಿವರ್ಾಹಕ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಸಭೆಯಲ್ಲಿ ಭಾಗವಹಿಸಿದ್ದರು.