ಮೇ ೧೯ ವೇಳೆಗೆ ದೇಶದಲ್ಲಿ ೩೮ ಸಾವಿರ ಸಾವುಗಳು.....!

ನವದೆಹಲಿ, ಏ ೨೪,ಲಾಕ್ ಡೌನ್ ನಂತರ ದೇಶಾದ್ಯಂತ ಯಾವುದೇ ಕಠಿಣ  ನಿರ್ಬಂಧಗಳನ್ನು  ಜಾರಿಗೊಳಿಸದಿದ್ದರೆ,  ಮೇ ೧೯ ರ ವೇಳೆಗೆ   ಭಾರತದಲ್ಲಿ ೩೮,೨೨೦  ಮಂದಿ  ಕೊರೊನಾ  ವೈರಾಣು ಸೋಂಕಿನಿಂದ  ಸಾವನ್ನಪ್ಪಬಹುದು  ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಸುಮಾರು ೫.೩೫ ಲಕ್ಷ      ಕೊರೊನಾ ಪಾಸಿಟಿವ್  ಪ್ರಕರಣಗಳು      ವರದಿಯಾಗಬಹುದು  ಎಂದು  ಅವರು ಅಂದಾಜಿಸಿದ್ದಾರೆ. ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ (ಜೆಎನ್‌ಸಿಎಎಸ್‌ಆರ್), ಬೆಂಗಳೂರು ಐಐಎಸ್ ಹಾಗೂ  ಐಐಟಿ ಬಾಂಬೆ  ಸಂಸ್ಥೆಗಳು  “ಕೋವಿಡ್-೧೯ ಮೆಡ್ ಇನ್ವೆಂಟರಿ”  ಎಂಬ ವೈಜ್ಞಾನಿಕ      ಸಾಂಖಿಕ ಮಾದರಿ ಬಳಸಿ  ಈ ಅಂದಾಜು ಮಾಡಿದ್ದಾರೆ. ಈ ಅಂದಾಜುಗಳನ್ನು ರೂಪಿಸಲು ಭಾರತೀಯ ವೈಜ್ಞಾನಿಕ ಸಲಹೆಗಾರ ವಿಜಯರಾಘವನ್      ನೆರವು  ನೀಡಿದ್ದಾರೆ. ಮೇ  ತಿಂಗಳ ಮಧ್ಯದ ವೇಳೆಗೆ      ದೇಶದಲ್ಲಿ  ಕೊರೊನಾ ಸೋಂಕಿತ ರೋಗಿಗಳಿಗೆ   ೭೬,೦೦೦ ಐಸಿಯು  ಹಾಸಿಗೆಗಳು ಅಗತ್ಯವಾಗಬಹುದು  ಎಂದು ಜೆಎನ್‌ಸಿಎಎಸ್‌ಆರ್ ಪ್ರಾಧ್ಯಾಪಕ ಸಂತೋಷ್ ಅನುಸುಮಾಲಿ ತಿಳಿಸಿದ್ದಾರೆ. 
ದೇಶದಲ್ಲಿ  ಪ್ರಸ್ತುತ      ವರದಿಯಾಗುತ್ತಿರುವ  ಕೊರೊನಾ ಸೋಂಕು ಪ್ರಕರಣಗಳು, ಸಾವುಗಳು, ಲಾಕ್‌ಡೌನ್ ಪರಿಸ್ಥಿತಿಗಳು ಮತ್ತು ಲಭ್ಯವಿರುವ  ವೈದ್ಯಕೀಯ ಉಪಕರಣಗಳನ್ನು  ಪರಿಗಣಿಸಿ  ಈ  ಅಂದಾಜು ಮಾಡಿರುವುದಾಗಿ  ವಿಜ್ಞಾನಿಗಳು ಹೇಳಿದ್ದಾರೆ.  ನಿರ್ಬಂಧ ಕ್ರಮಗಳನ್ನು ಸಂಪೂರ್ಣವಾಗಿ  ತೆರವುಗೊಳಿಸಿದರೆ  ಪರಿಸ್ಥಿತಿ ಯಾವರೀತಿ ಇರಬಹುದು ಎಂದು  ಅವಲೋಕಿಸಲು  ಈ ಅಂದಾಜು ಮಾಡಿದ್ದೇವೆ  ಅವರು  ತಿಳಿಸಿದ್ದಾರೆ. ಲಾಕ್‌ಡೌನ್ ವಿಸ್ತರಿಸಿದರೆ       ದೇಶದಲ್ಲಿ ಪರಿಸ್ಥಿತಿ ಉತ್ತಮವಾಗಬಹುದು ಎಂದು ಅವರು ಹೇಳಿದ್ದಾರೆ.      ಅವರ ಅಂದಾಜಿನ ಪ್ರಕಾರ, ಏಪ್ರಿಲ್ ೨೮ ರೊಳಗೆ ೧,೦೧೨, ಮೇ ೫ ರ ವೇಳೆಗೆ ೩,೨೫೮, ಮೇ ೧೨ ರ ವೇಳೆಗೆ ೧೦,೨೯೪, ಮತ್ತು ಮೇ ೧೯ ರ ವೇಳೆಗೆ ೩೮,೨೨೦ ಸಾವುಗಳು  ಸಂಭವಿಸಬಹುದು ಎಂದು  ವಿಜ್ಞಾನಿಗಳು ಅಂದಾಜಿಸಿದ್ದಾರೆ.