ಲೋಕದರ್ಶನವರದಿ
ಶಿಗ್ಗಾವಿ : ನೆರೆಹಾವಳಿಯಿಂದ ತ್ರೀವ ಸಮಸ್ಯೆಗಳಿಗೆ ಒಳಗಾದ ಸಂತ್ರಸ್ತರಿಗೆ ತಾಲೂಕಿನ ಕಂಕನವಾಡ ಗ್ರಾಮದ ಪ್ರಗತಿಪರ ಸಾವಯವ ಕೃಷಿಕರಾದ ಸಿ ಡಿ ಪಾಟೀಲ ಅವರು ವೈಯಕ್ತಿಕವಾಗಿ 1 ಲಕ್ಷ ರೂ. ಚೆಕ್ ಅನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಹಶೀಲ್ದಾರ ಚಂದ್ರಶೇಖರ ಗಾಳಿಯವರ ಮೂಲಕ ಮಂಗಳವಾರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಪಿಎಮ್ಸಿ ಅದ್ಯಕ್ಷೆ ಪ್ರೇಮಾ ಪಾಟೀಲ, ಫಕ್ಕೀರಜ್ಜ ಯಲಿಗಾರ, ಶಶಿಧರ ಯಲಿಗಾರ, ಆರ್ ಎಸ್ ಪಾಟೀಲ, ಭರಮಜ್ಜ ನವಲಗುಂದ, ಈರಣ್ಣ ಬಡ್ಡಿ, ಬಸಣ್ಣ ಹಾವೇರಿ, ಬಸವರಾಜ ರಾಗಿ, ಬಿ ಡಿ ಗುಂಡಣ್ಣವರ, ವಿ ಸಿ ಪಾಟೀಲ, ಪ್ರಶಾಂತ ದುಂಡಿಗೌಡ್ರ, ಜಿ ಸಿ ಪಾಟೀಲ, ಸಿ ಎಸ್ ಪಾಟೀಲ, ಸಿದ್ರಾಮಗೌಡ ಮೆಳ್ಳೆಗಟ್ಟಿ, ಶಿವಯೋಗೆಪ್ಪ ನವಲಗುಂದ, ಪ್ರಕಾಶ ಮೆಳ್ಳೆಳ್ಳಿ ಸೇರಿದಂತೆ ಇತರರು ಇದ್ದರು.
ಪ್ರಸಂಶೆ : ತಾಲೂಕಿನ ತಹಶೀಲ್ದಾರ ಚಂದ್ರಶೇಖರ್ ಗಾಳಿ ಚೆಕ್ ಸ್ವೀಕರಿಸಿ ಮಾತನಾಡಿ ತಾಲೂಕಿನಿಂದ ನೆರೆಸಂತ್ರಸ್ಥರಿಗೆ ನೀಡಿದ ಪರಿಹಾರದಲ್ಲಿ ಇದೇ ಅತೀ ಹೆಚ್ಚಿನ ಮೊತ್ತವಾಗಿದ್ದು ಸಿ ಡಿ ಪಾಟೀಲ ಅವರ ಈ ಮಾನವೀಯ ಕಾರ್ಯಕ್ಕೆ ಪ್ರಸಂಶಿಸಿದರು.