ಕೋವಿಡ್‌-19 ಹೋರಾಟದಲ್ಲಿ ಮಡಿದ ಪೊಲೀಸ್‌ಗೆ 1 ಕೋಟಿ ರೂ. ಘೋಷಣೆ

ನವದೆಹಲಿ, ಮೇ 7, ಕೊರೊನಾ ವೈರಸ್‌ ಹೋರಾಟದಲ್ಲಿ ಮೃತಪಟ್ಟ ದಿಲ್ಲಿ ಪೊಲಿಸ್‌ ಕಾನ್‌ಸ್ಟೇಬಲ್‌ ಅಮಿತ್‌ ಅವರ ಕುಟುಂಬಕ್ಕೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಗೌರವಾರ್ಥವಾಗಿ ಒಂದು ಕೋಟಿ ರೂ. ನೀಡುವುದಾಗಿ ಗುರುವಾರ ಘೋಷಿಸಿದ್ದಾರೆ.ಈ ಕುರಿತು ಹಿಂದಿಯಲ್ಲಿ ಟ್ವೀಟ್‌ ಮಾಡಿರುವ ಅವರು, "ಕೊರೊನಾ ಹೋರಾಟದಲ್ಲಿ ತಮ್ಮ ಜೀವವನ್ನೂ ಲೆಕ್ಕಿಸದೇ ಅಮಿತ್‌ ಜೀ ಸರ್ಕಾರದ ಸೇವೆಯಲ್ಲಿ ಮುಂದುವರಿದಿದ್ದರು. ಇವರಿಗೆ ಕೋವಿಡ್‌-19 ಪಾಸಿಟಿವ್‌ ಕಂಡುಬಂದು, ಇದೀಗ ನಮ್ಮನ್ನು ಅಗಲಿದ್ದಾರೆ. ಅವರ ಹುತಾತ್ಮತೆಗೆ ನಾವು ನಮಸ್ಕರಿಸುತ್ತೇವೆ ಮತ್ತು ಅವರ ಕುಟುಂಬಕ್ಕೆ 1 ಕೋಟಿ ರೂ. ನೀಡಲಾಗುವುದು," ಎಂದು ಹೇಳಿದ್ದಾರೆ.ದಿಲ್ಲಿ ಲೆಪ್ಟಿನಂಟ್‌ ಗವರ್ನರ್‌ ಅನಿಲ್‌ ಬೈಜಲ್‌ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡುವ ಮೂಲಕ ಅರಂವಿದ್‌ ಕೇಜ್ರಿವಾಲ್‌ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಅನಿಲ್‌ ಬೈಜಲ್‌ ಅವರು ಅಮಿತ್‌ ಅವರ ಅಗಲಿಕೆಗೆ ತೀವ್ರ ಸಂತಾಪ ಸೂಚಿಸುತ್ತಾ, " ದಿಲ್ಲಿ ಪೊಲೀಸ್ ಕಾನ್‌ಸ್ಟೇಬಲ್‌ ಕೊರೊನಾ ಹೋರಾಟದಲ್ಲಿ ಸಾವಿಗೀಡಾಗಿದ್ದು, ಅವರಿಗೆ ತೀವ್ರ ಸಂತಾಪ ಸೂಚಿಸುತ್ತೇನೆ. ಕೋವಿಡ್‌-19 ಹೋರಾಟದಲ್ಲಿ ತಮ್ಮ ಜೀವನವನ್ನು ಅವರು ತ್ಯಾಗ ಮಾಡಿದ್ದಾರೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಮುಂಚೂಣಿ ಪೊಲೀಸ್ ಸಿಬ್ಬಂದಿಗೆ ವೈಭವವನ್ನು ತಂದ ಮಹಾನ್ ಯೋಧ. ದುಃಖಿತ ಕುಟುಂಬಕ್ಕೆ ನನ್ನ ಆಳವಾದ ಸಂತಾಪ. "ಎಂದು ಅವರು ಟ್ವೀಟ್‌ ಮಾಡಿದ್ದಾರೆ.