ಬಯಲು ಬಹಿದರ್ೆಸೆ ಮುಕ್ತ ಗ್ರಾಪಂಗಳಿಗೆ 1 ಕೋಟಿ ರೂ.ಅನುದಾನ: ಜಿಪಂ ಸಿಇಒ


ಲೋಕದರ್ಶನ ವರದಿ

ಬಳ್ಳಾರಿ23: ಬಯಲು ಬಹಿದರ್ೆಸೆ ಮುಕ್ತವಾದ ಗ್ರಾಪಂಗಳಿಗೆ ಎಚ್ಕೆಆಡರ್ಿಬಿ ಮತ್ತು ಜಿಲ್ಲಾ ಖನಿಜ ನಿಧಿ ಅಡಿಯಿಂದ 1 ಕೋಟಿ ರೂ. ಅನುದಾನವನ್ನು ಆ ಗ್ರಾಪಂಗಳ ಅಭಿವೃದ್ಧಿಗೆ ನೀಡಲಾಗುವುದು ಎಂದು ಜಿಪಂ ಸಿಇಒ ಡಾ. ಕೆ.ವಿ.ರಾಜೇಂದ್ರ ಅವರು ಹೇಳಿದರು. 

ಬಳ್ಳಾರಿ ತಾಲೂಕು ಬಯಲು ಬಹಿದರ್ೆಸೆ ಮುಕ್ತ ತಾಲ್ಲೂಕನ್ನಾಗಿ ಪರಿವತರ್ಿಸುವ ಕುರಿತಂತೆ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಶೌಚಾಲಯ ನಿಮರ್ಾಣ ಮತ್ತು ಬಳಕೆಯ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವುದಕ್ಕಾಗಿ ನಗರದ ಬಿಡಿಎ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ  ತಾಲ್ಲೂಕು ಮಟ್ಟದ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು. 

ಜಿಲ್ಲೆಯನ್ನು ಬರುವ ಆಗಸ್ಟ್ 15ರೊಳಗೆ ಬಯಲು ಬಹಿದರ್ೆಸೆ ಮುಕ್ತ ಮಾಡಬೇಕು ಎಂಬ ಸದುದ್ದೇಶದಿಂದ ಈ ತೀಮರ್ಾನ ಕೈಗೊಳ್ಳಲಾಗಿದೆ ಎಂದು ಹೇಳಿದ ಅವರು, ಬಳ್ಳಾರಿ ತಾಲೂಕಿನಲ್ಲಿರುವ 39 ಗ್ರಾಪಂಗಳಲ್ಲಿ 20 ಗ್ರಾಪಂಗಳು ಈಗಾಗಲೇ ಬಯಲು ಬಹಿದರ್ೆಸೆ ಮುಕ್ತ ಗ್ರಾಪಂಗಳಾಗಿವೆ ಮಾರ್ಪಟ್ಟಿವೆ. ಇನ್ನುಳಿದ 19 ಗ್ರಾಪಂಗಳು ಆಗಸ್ಟ್ 5ರೊಳಗೆ ಬಯಲು ಬಹಿದರ್ೆಸೆ ಮುಕ್ತವನ್ನಾಗಿ ಮಾಡಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದ್ದು,ಅದನ್ನು ನಿಗದಿಪಡಿಸಿದ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂಬ ಉದ್ದೇಶದಿಂದ ಈ ತರಬೇತಿ ಶಿಬಿರ ಏರ್ಪಡಿಸಲಾಗಿದೆ ಎಂದರು. 

ಇಡೀ ಹೈಕ ಪ್ರದೇಶದ 6 ಜಿಲ್ಲೆಗಳಲ್ಲಿ ನಮ್ಮ ಬಳ್ಳಾರಿ ಜಿಲ್ಲೆಯ ಪ್ರಗತಿ ಅತ್ಯುತ್ತಮವಾಗಿದೆ. ಇಷ್ಟಕ್ಕೆ ನಾವು ಸುಮ್ಮನೆ ಕುಳಿತುಕೊಳ್ಳದೇ ಇಡೀ ಜಿಲ್ಲೆಯನ್ನು ಬಯಲು ಬಹಿದರ್ೆಸೆ ಮುಕ್ತ ಜಿಲ್ಲೆಯನ್ನಾಗಿ ಘೋಷಣೆ ಮಾಡಲಾಗುವುದು. ಇದಕ್ಕೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು. 

ಬಯಲು ಬಹಿದರ್ೆಸೆ ಮುಕ್ತವಾದ ಗ್ರಾಮ ಪಂಚಾಯಿತಿಗಳ ಗ್ರಾಪಂ ಅಧ್ಯಕ್ಷರು,ಉಪಾಧ್ಯಕ್ಷರು ಮತ್ತು ಪಿಡಿಒಗಳಿಗೆ ಸನ್ಮಾನಿಸಲಾಗುತ್ತಿದೆ; ಇದರಿಂದ ಶೌಚಾಲಯ ನಿಮರ್ಿಸಬೇಕಾದ ಗ್ರಾಮ ಪಂಚಾಯಿತಿಗಳು ಬೇಗ ಶೌಚಾಲಯದ ಗುರಿ ಮುಟ್ಟಲು ಉತ್ತೇಜನ ನೀಡಲಿದೆ ಎಂಬ ಆಶಾಭಾವನೆಯನ್ನು ಅವರು ವ್ಯಕ್ತಪಡಿಸಿದರು. 

ಮಹಿಳೆಯ ಮತ್ತು ಮಕ್ಕಳ ಸ್ವಚ್ಛತೆ ಕುರಿತು ಮಾತನಾಡಿದ ಜಿಪಂ ಸಿಇಒ ರಾಜೇಂದ್ರ ಅವರು ಇದರಲ್ಲಿ ಅಂಗನವಾಡಿ ಶಿಕ್ಷಕಿಯರ ಪಾತ್ರ ಬಹುದೊಡ್ಡದಾಗಿರುತ್ತದೆ ಎಂದರು. 

ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಅವರು, ಬಳ್ಳಾರಿ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬಯಲು ಬಹಿದರ್ೆಸೆ ಮುಕ್ತ ಮಾಡಲು ಶ್ರಮವಹಿಸಿ ಎಂದರು. 

 ಜಿಪಂ ಯೋಜನಾ ನಿದರ್ೆಶಕ ಚಂದ್ರಶೇಖರ ಗುಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. 

ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಗಂಗಾಧರಪ್ಪ ಮಾತನಾಡಿ, ಫಲಾನುಭವಿಗಳು ಸುಸ್ತಿ ಸಾಲ ಹೊಂದಿದ್ದರು ಶೌಚಾಲಯ ನಿಮರ್ಿಸಲು ಸಾಲ ನೀಡಿದ್ದು ನಮ್ಮ ಬ್ಯಾಂಕಿನ ಶ್ರೇಯ ಎಂದರು. 

ಬ್ಯಾಂಕಗಳು ಕೆಲಸ ಕೇವಲ ಠೇವಣಿ ಪಡೆಯುವುದು ಮತ್ತು ಸಾಲ ನೀಡುವುದಷ್ಟೆ ಅಲ್ಲ ಸಾಮಾಜಿಕ ಹೊಣೆಗಾರಿಕೆ ಹೊಂದಿರಬೇಕು ಎಂದು ಹೇಳಿದ ಅವರು, ಶೌಚಾಲಯ ನಿಮರ್ಾಣ  ಯೋಜನೆ ಅಡಿ ಭಾಗಿದಾರ ಆಗಲು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು. 

ಜಿಪಂ ಸದಸ್ಯ ಅಲ್ಲಂ ಪ್ರಶಾಂತ ಮಾತನಾಡಿ, ಗ್ರಾ.ಪಂನ ಪ್ರತಿ ಸದಸ್ಯರು ಶೌಚಾಲಯ ನಿಮರ್ಾಣ ಕಾರ್ಯವನ್ನು ಹಂಚಿಕೊಂಡಲ್ಲಿ ಸುಲಭವಾಗಿ ನಿಮರ್ಾಣದ ಗುರಿ ಮುಟ್ಟಬಹುಹುದು ಎಂದರು. 

ಸಭೆಯಲ್ಲಿ ಬಯಲು ಬಹಿದರ್ೆಸೆ ಮುಕ್ತವಾದ 20 ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರಗಳಿಗೆ ಸನ್ಮಾನಿಸಲಾಯಿತು. ಬಯಲು ಬಹಿದರ್ೆಸೆ ಮುಕ್ತವಾಗಲು ಸಹಕಾರ ನೀಡಿದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಗಂಗಾಧರಪ್ಪ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗೋಪಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ರಮೀಜಾ.ಬಿ, ಉಪಾಧ್ಯಕ್ಷ ಮಲ್ಲಿಕಾಜರ್ುನ, ತಾಪಂ ಇಒ ಡಿ. ಜಾನಕಿರಾಮ್ ಸೇರಿದಂತೆ ತಾಲ್ಲೂಕಿನ ಎಲ್ಲಾ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಂಗನವಾಡಿ ಕಾರ್ಯಕತರ್ೆಯರು ಭಾಗವಹಿಸಿದ್ದರು.